ಕ್ರೈಸ್ಟ್‌ಚರ್ಚ್: ಭಾರತದೆದುರಿನ ಮುಂಬಯಿ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸಿನ ಎಲ್ಲ 10 ವಿಕೆಟ್ ಉರುಳಿಸಿ ಇತಿಹಾಸ ನಿರ್ಮಿಸಿದ ಬೌಲರ್ ನ್ಯೂಜಿಲ್ಯಾಂಡಿನ ಅಜಾಜ್ ಪಟೇಲ್.
ಈ ಸಾಧನೆಗೈದ ವಿಶ್ವದ ಕೇವಲ 3ನೇ ಬೌಲರ್ ಎಂಬುದು ಇವರ ಹಿರಿಮೆ. ಆದರೆ ಈಗಿನ ಸುದ್ದಿ ಏನೆಂದರೆ, ಈ ಅಸಾಮಾನ್ಯ ಬೌಲಿಂಗ್ ಸಾಧಕನಿಗೆ ನ್ಯೂಜಿಲ್ಯಾಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸಿಲ್ಲ!
ಪ್ರವಾಸಿ ಬಾಂಗ್ಲಾ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ 13 ಸದಸ್ಯರ ತಂಡವನ್ನು ಪ್ರಕಟಿಸಿರುವ ನ್ಯೂಜಿಲ್ಯಾಂಡ್, ಇದರಿಂದ ಅಜಾಜ್ ಪಟೇಲ್ ಅವರನ್ನು ಕೈಬಿಟ್ಟಿದೆ. ಇಲ್ಲಿನ ಟ್ರ್ಯಾಕ್ ಸ್ಪಿನ್ನರ್‌ಗಳಿಗೆ ನೆರವಾಗದು ಎಂಬುದು ಆಯ್ಕೆ ಸಮಿತಿ ನೀಡಿದ ಕಾರಣ!
ಇದನ್ನೂ ಓದಿ:ಮಣಿಪುರಕ್ಕೆ ಮಯನ್ಮಾರ್ ಉಗ್ರರಿಂದ ದಾಳಿ? ಕೇಂದ್ರ ಗುಪ್ತಚರ ಇಲಾಖೆಯ ಮುನ್ನೆಚ್ಚರಿಕೆ
ತಂಡದಲ್ಲಿ 5 ಮಂದಿ ವೇಗಿಗಳಿದ್ದಾರೆ. ಇವರೆಂದರೆ ಬೌಲ್ಟ್, ಸೌಥಿ, ಜೇಮಿಸನ್, ವ್ಯಾಗ್ನರ್, ಹೆನ್ರಿ ಮತ್ತು ಆಲ್‌ರೌಂಡರ್ ಮಿಚೆಲ್. ತಂಡದಲ್ಲಿರುವ ಏಕೈಕ ಸ್ಪಿನ್ನರ್ ರಚಿನ್ ರವೀಂದ್ರ.