ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ತಂಡಗಳು ಕಿವೀಸ್ ನಲ್ಲಿ ಟಿ20 ಸರಣಿ ಆಡುತ್ತಿದೆ. ಹ್ಯಾಮಿಲ್ಟನ್ ನ ಸೆಡ್ಡಾನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಡ್ಯಾರೆಲ್ ಮಿಚೆಲ್ ಹೊಡೆದ ಚೆಂಡು ಕ್ಯಾಮರಾಗೆ ತಾಗಿದ ಘಟನೆ ನಡೆದಿದೆ.
ನ್ಯೂಜಿಲ್ಯಾಂಡ್ ಬ್ಯಾಟ್ ಮಾಡಿದ ಮೊದಲ ಇನ್ನಿಂಗ್ಸ್ ನ ಹತ್ತನೇ ಓವರ್ ನಲ್ಲಿ, ಅಬ್ಬಾಸ್ ಆಫ್ರಿದಿ ಅವರು ಮಿಚೆಲ್ ಗೆ ಫುಲ್ ಬಾಲ್ ಹಾಕಿದರು, ಮಿಚೆಲ್ ಅದನ್ನು ನೇರವಾಗಿ ಹೊಡೆದರು, ಸೈಡ್ ಸ್ಕ್ರೀನ್ ಬಳಿಯಿದ್ದ ಕ್ಯಾಮೆರಾಗೆ ಚೆಂಡು ಅಪ್ಪಳಿಸಿತು. ಬೇಸರಗೊಂಡ ಕ್ಯಾಮೆರಾಪರ್ಸನ್ ಮೈಕ್ರೊಫೋನ್ ಅನ್ನು ಕೆಳಗಿಳಿಸಿ ಹಿಂದೆ ನಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಪಾಕ್ ನಾಯಕ ಶಾಹೀನ್ ಅಫ್ರಿದಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನ್ಯೂಜಿಲ್ಯಾಂಡ್ ಕಿವೀಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 194 ರನ್ ಗಳಿಸಿತು. ಫಿನ್ ಆ್ಯಲೆನ್ 74 ರನ್, ವಿಲಿಯಮ್ಸನ್ 26 ರ್ ಮಾಡಿದರು.
ಗುರಿ ಬೆನ್ನತ್ತಿದ ಪಾಕಿಸ್ತಾನವು 173 ರನ್ ಮಾತ್ರ ಗಳಿಸಿತು. ಇದರೊಂದಿಗೆ 21 ರನ್ ಅಂತರದ ಸೋಲನುಭವಿಸಿತು. ಪಾಕ್ ಪರ ಬಾಬರ್ ಅಜಂ 66 ಮತ್ತು ಫಖರ್ ಜಮಾನ್ 50 ರನ್ ಮಾಡಿದರು.