Advertisement

ODI;ಸೂಪರ್ ಓವರ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ಪಾಕಿಸ್ಥಾನ ವನಿತೆಯರು

05:52 PM Dec 18, 2023 | Team Udayavani |

ಕ್ರೈಸ್ಟ್‌ಚರ್ಚ್ : ಇಲ್ಲಿನ ಹ್ಯಾಗ್ಲಿ ಓವಲ್ ನಲ್ಲಿ ನಡೆದ ನ್ಯೂಜಿಲ್ಯಾಂಡ್ ವನಿತೆಯರು ಮತ್ತು ಪಾಕಿಸ್ಥಾನ್ ವನಿತೆಯರ ವಿರುದ್ದದ ಮೂರು ಏಕದಿನ ಪಂದ್ಯಗಳ ಸರಣಿಯ ಸೋಮವಾರ (ಡಿ18)ನಡೆದ ಕೊನೆಯ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಟೈ ಆದ ಪಣ್ಯದಲ್ಲಿ ಪಾಕಿಸ್ಥಾನ ವನಿತೆಯರು ಸೂಪರ್ ಓವರ್ ನಲ್ಲಿ ಗೆಲುವು ಸಾಧಿಸುವ ಮೂಲಕ ಜಯವನ್ನು ಸ್ಮರಣೀಯವಾಗಿಸಿಕೊಂಡರು.

Advertisement

ನ್ಯೂಜಿಲ್ಯಾಂಡ್ ವನಿತೆಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದ್ದರು. ಗುರಿ ಬೆನ್ನಟ್ಟಿದ ಪಾಕ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದರು.

ಸೂಪರ್ ಓವರ್ ನಲ್ಲಿ ಪಾಕ್ 1 ವಿಕೆಟ್ ನಷ್ಟಕ್ಕೆ 1 ಓವರ್ ನಲ್ಲಿ 11 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್ 2 ವಿಕೆಟ್ ನಷ್ಟಕ್ಕೆ 8 ರನ್ ಗಳಿಸಿ ಸೋಲು ಅನುಭವಿಸಿತು. ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ನ್ಯೂಜಿಲ್ಯಾಂಡ್ ವನಿತೆಯರು ಸರಣಿಯನ್ನು ಅದಾಗಲೇ ತಮ್ಮದಾಗಿಸಿಕೊಂಡಿದ್ದರು.

ನ್ಯೂಜಿಲ್ಯಾಂಡ್ ನಲ್ಲಿ ನಡೆದ ವನಿತೆಯರ ಏಕದಿನ ಪಂದ್ಯದಲ್ಲಿ ಇದು ಪಾಕಿಸ್ಥಾನ ವನಿತೆಯರ ಮೊದಲ ಗೆಲುವು. ಇದುವರೆಗೆ ಆಡಿದ 17 ಏಕದಿನ ಪಂದ್ಯಗಳಲ್ಲಿ 2 ನೇ ಗೆಲುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next