Advertisement

ಆರೋಗ್ಯಕ್ಕಾಗಿ ಜಾಯಿಕಾಯಿ

09:46 PM Jul 29, 2019 | mahesh |

ಸಾಂಬಾರ ಪದಾರ್ಥವೆಂದು ಗುರುತಿಸಲ್ಪಡುವ ಜಾಯಿಕಾಯಿಯು ಆಹಾರಗಳಿಗೆ ಉತ್ತಮ ರುಚಿ ನೀಡುವುದರ ಜತೆಗೆ ಆರೋಗ್ಯಕ್ಕೂ ಪೂರಕವಾಗಿದೆ. ಜಾಯಿಕಾಯಿಯಿಂದ ಮನುಷ್ಯನ ಆರೋಗ್ಯದ ಮೇಲೆ ಹಲವು ಉತ್ತಮ ಪರಿಣಾಮಗಳಾಗುತ್ತವೆ. ಜಾಯಿಕಾಯಿಯನ್ನ ನಿರಂತರವಾಗಿ ಉಪಯೋಗಿಸುವುದರ ದೇಹದಲ್ಲಿ ಅದು ರೋಗ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.ದೇಹದ ಕೋಶಗಳು ಹಾನಿಯಾಗುವುದನ್ನು ಇದು ತಪ್ಪಿಸುತ್ತದೆ. ಹೃದಯ ಸಮಸ್ಯೆ, ಡಯಾಬಿಟಿಸ್‌ ಮೊದಲಾದ ರೋಗಗಳು ನಿಯಂತ್ರಣಕ್ಕೆ ಇದು ಸಹಕಾರಿ. ಇದಲ್ಲದೇ ಊರಿಯೂತ ಬಾರದಂತೆ ತಡೆಗಟ್ಟುತ್ತವೆ.

Advertisement

ನೋವು ನಿವಾರಕ
ನೂವು ನಿವಾರಕವಾಗಿಯೂ ಇದು ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಎಣ್ಣೆಯ ಅಂಶ ಅಧಿಕವಾಗಿದ್ದು ಶರೀರದ ನೋವುಗಳನ್ನು ಆದಷ್ಟು ಕಡಿಮೆ ಮಾಡುತ್ತವೆ.

ರಕ್ತದೊತ್ತಡ ನಿಯಂತ್ರಣ
ರಕ್ತದೊತ್ತಡ ಹಾಗೂ ರಕ್ತ ಸಂಚಲನವನ್ನು ನಿಯಂತ್ರಿಸುತ್ತದೆ. ಇದರ ನಿರಂತರ ಸೇವನೆ ರಕ್ತದ ಪರಿಚಲನೆಯನ್ನು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.
ಚರ್ಮದ ಆರೋಗ್ಯ
ಚರ್ಮದ ಸಮಸ್ಯೆ ಅಥವಾ ಮುಖದ ಮೊಡವೆಗಳು ಎಲ್ಲರನ್ನೂ ಕಾಡುತ್ತವೆ. ಚರ್ಮ ಸಂರಕ್ಷಣೆಗೂ ಜಾಯಿಕಾಯಿ ಸಹಕಾರಿ.

ಸೇವನೆ ಹೇಗೆ?
· ಅಲ್ಪ ಪ್ರಮಾಣದ ಜಾಯಿಕಾಯಿ ಪುಡಿಯನ್ನು ತೆಗೆದುಕೊಂಡು ಒಂದು ಚಮಚ ನೆಲ್ಲಿಕಾರಿ ರಸದೊಂದಿಗೆ ಬೆರೆಸಿ. ಒತ್ತಡವನ್ನು ನಿವಾರಿಸಲು ಈ ಮಿಶ್ರಣವನ್ನು ಪ್ರತಿದಿನ ಎರಡು ಬಾರಿ ಕುಡಿಯಿರಿ.
· ಮೆದುಳುನ ತೀಕ್ಷ್ಣತೆಗೆ ಬೆಚ್ಚಗಿನ ನೀರಿಗೆ ಸ್ವಲ್ಪ ಪ್ರಮಾಣದ ಜಾಯಿಕಾಯಿ ಹುಡಿ ಮಿಶ್ರಣ ಮಾಡಿ. ಪ್ರತಿದಿನ ಮಲಗುವ ಮುನ್ನ ಕುಡಿಯುವ ಅಭ್ಯಾಸ ಮಾಡಿ.

ಪೋಷಕಾಂಶ
· ಪೋಟ್ಯಾಷಿಯಂ
· ಕಬ್ಬಿಣ
· ಮ್ಯಾಗ್ನೇಶಿಯಂ
· ಬಿ1, ಬಿ6

Advertisement

ಜೀರ್ಣಕ್ರಿಯೆಗೆ ಸಹಕಾರಿ
ಆಹಾರದ ಜೀರ್ಣಕ್ರಿಯೆಗೆ ಜಾಯಿಕಾಯಿ ಸಹಕರಿಸುತ್ತದೆ. ಜೀರ್ಣಕ್ರಿಯೆಯ ಸಮಸ್ಯೆ ಇರುವವರ ಜಾಯಿಕಾಯಿಯ ಸೂಪ್‌ ಮಾಡಿ ಕುಡಿಯುವುದರಿಂದ ಅದನ್ನು ನಿವಾರಿಸಿಕೊಳ್ಳಬಹುದು.

ಮೆದುಳಿನ ಆರೋಗ್ಯಕ್ಕೆ ಉತ್ತಮ
ಮೆದುಳಿನ ಆರೋಗ್ಯಕರ ಬೆಳವಣಿಗೆಗೆ ಇದು ಸಹಕಾರಿ. ಉಸಿರಾಟ ದುರ್ಗಂಧ ಅಥವಾ ಬಾಯಿ ದುರ್ಗಂಧದ ಸಮಸ್ಯೆ ಇರುವವರು ಇದನ್ನು ಬಳಸುವುದರಿಂದ ಅಂತಹ ಸಮಸ್ಯೆಗಳು ದೂರವಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next