Advertisement
ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು 2018ರಲ್ಲಿ ಅಡಕೆ ಸುಲಿಯುವ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದು, ಇದರ ಯಶಸ್ವಿ ಕಾರ್ಯ ನಿರ್ವಹಣೆ ತಂತ್ರಜ್ಞರ ಮತ್ತು ಬೆಳೆಗಾರರ ಮೆಚ್ಚುಗೆ ಪಡೆದಿದೆ. ತಿಂಗಳ ಹಿಂದೆ ಪುತ್ತೂರಿನಲ್ಲಿ ನಡೆದ ಬೃಹತ್ ಕೃಷಿ ಯಂತ್ರ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಈ ಯಂತ್ರವನ್ನು ಸಾವಿರಾರು ಕೃಷಿಕರು, ವಿದ್ಯಾರ್ಥಿಗಳು ಮೆಚ್ಚಿಕೊಂಡಿದ್ದರು. ಈ ಅಡಿಕೆ ಸುಲಿಯುವ ಯಂತ್ರ ಶೀಘ್ರ ಮಾರುಕಟ್ಟೆಗೆ ಬರಲಿದೆ.
ಈ ಯಂತ್ರದ ಕಾರ್ಯನಿರ್ವಹಣೆ ಮತ್ತು ಕಾರ್ಯ ದಕ್ಷತೆಗೆ ಸಂಬಂಧಿಸಿದಂತೆ ಇನ್ನಷ್ಟು ಪರಿಷ್ಕರಣೆ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆಯುತ್ತಿದೆ. 4-5 ತಿಂಗಳಲ್ಲಿ ಯಂತ್ರ ಸಂಪೂರ್ಣ ಸಿದ್ಧವಾಗಲಿದೆ ಎಂದು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ನಿರ್ದೇಶಕ ರವಿಕೃಷ್ಣ ಡಿ. ಕಲ್ಲಾಜೆ ತಿಳಿಸಿದ್ದಾರೆ. ಈ ಯಂತ್ರದ ಹಕ್ಕುಗಳನ್ನು ನಾವು ಯಾರಿಗೂ ಕೊಟ್ಟಿಲ್ಲ. ಯಾವುದಾದರೂ ಕಂಪನಿಗೆ ಕೊಟ್ಟರೆ ಅವರು ದೊಡ್ಡ ಪ್ರಮಾಣದ ಮಾರುಕಟ್ಟೆ ಧಾರಣೆ ನಿಗದಿಪಡಿಸಿ ಮಾರುತ್ತಾರೆ. ಆಗ ರೈತರಿಗೆ ಗಗನ ಕುಸುಮವಾಗುತ್ತದೆ. ಇದನ್ನು ತಪ್ಪಿಸಲು ನಾವೇ ಈ ಯಂತ್ರವನ್ನು ಕಡಿಮೆ ಬೆಲೆಗೆ ನೇರವಾಗಿ ಮಾರುಕಟ್ಟೆಗೆ ಬಿಡಲು ಮುಂದಾಗಿದ್ದೇವೆ. ನಮ್ಮ ವಿದ್ಯಾರ್ಥಿಗಳ ಪ್ರತಿಭೆಗೂ ಆದ್ಯತೆ ಸಿಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Related Articles
ಒಂದಷ್ಟು ಪರಿಷ್ಕರಣೆಗಳು ನಡೆದ ಬಳಿಕ ಇನ್ನು ಆರು ತಿಂಗಳ ಒಳಗೆ ವಿದ್ಯಾರ್ಥಿ ನಿರ್ಮಿತ ಅಡಿಕೆ ಸುಲಿಯುವ ಯಂತ್ರ ಮಾರುಕಟ್ಟೆಯಲ್ಲಿ ಸಿಗಲಿದೆ.
– ಡಾ| ಎಂ.ಎಸ್. ಗೋವಿಂದೇ ಗೌಡ ಪ್ರಾಂಶುಪಾಲರು, ವಿವೇಕಾನಂದ ತಾಂತ್ರಿಕ ಕಾಲೇಜು, ಪುತ್ತೂರು
Advertisement