Advertisement
ಹೊರ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರದ ಹಿಂದಿನ ಧಾರಣೆ ಗಮನಿಸಿದರೆ ಹೊಸ ಅಡಿಕೆಗೆ ಕೆ.ಜಿ.ಗೆ 10 ರೂ., ಸಿಂಗಲ್ ಚೋಲ್ 15 ರೂ., ಡಬ್ಬಲ್ ಚೋಲ್ 20 ರೂ.ನಷ್ಟು ಹೆಚ್ಚಳ ಕಂಡಿದೆ. ದಿನದಿಂದ ದಿನಕ್ಕೆ ದರ ಏರಿಕೆಯತ್ತ ಮುಖ ಮಾಡಿದೆ. ಕ್ಯಾಂಪ್ಕೋ ಕೂಡ ಧಾರಣೆ ಏರಿಸುವಲ್ಲಿ ಉತ್ಸಾಹ ತೋರಿದೆ.
ಅಡಿಕೆ ಕೃಷಿಕರಿಗೆ ಉಪ ಬೆಳೆಯಾಗಿ ಆಸರೆ ಯಾಗಿರುವ ಕೊಕ್ಕೊ ಧಾರಣೆ ಏರಿಕೆಯ ನಾಗಾಲೋಟ ಮುಂದು ವರಿದಿದೆ. ಕ್ಯಾಂಪ್ಕೋ ಮಾರು ಕಟ್ಟೆಯಲ್ಲಿ ಮಾ. 12ರಂದು ಹಸಿ ಕೊಕ್ಕೊ ಕೆ.ಜಿ.ಗೆ 160 ರೂ. ದರದಲ್ಲಿ ಖರೀದಿಯಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಕೆ.ಜಿ.ಗೆ 150 ರೂ.ಗೆ ತಲುಪುವ ಮೂಲಕ ಕೊಕ್ಕೊ ಧಾರಣೆ ದಾಖಲೆ ಬರೆದಿತ್ತು.