Advertisement
265 ರೂ. ನಲ್ಲಿದ್ದ ಹೊಸ ಅಡಿಕೆ 275 ರೂ. ಹಾಗೂ 310 ರೂ. ನಲ್ಲಿದ್ದ ಹಳೆ ಅಡಿಕೆ 315 ರೂ. ಗೆ ಏರಿಕೆ ಕಂಡಿವೆ. ಕಳೆದ ಕೆಲ ದಿನಗಳಿಂದ ಈ ಧಾರಣೆ 250 ರೂ. ಹಾಗೂ 310 ರೂ. ನಲ್ಲಿ ಸ್ಥಿರತೆ ಕಂಡಿತ್ತು. ಹಬ್ಬದವರೆಗೆ ಇನ್ನಷ್ಟು ಧಾರಣೆ ಏರಿಕೆ ಕಾಣುವ ನಿರೀಕ್ಷೆ ಇದೆ. ಕೃಷಿಕರ ನಿರೀಕ್ಷೆಯನ್ನು ಮಾರುಕಟ್ಟೆ ಸುಳ್ಳಾಗಿಸದು ಎಂಬ ಭರವಸೆಯಲ್ಲಿದ್ದಾರೆ ವರ್ತಕರು.
380 ರೂ. ವರೆಗೆ ತಲುಪಿದ್ದ ಕಾಳುಮೆಣಸು ಧಾರಣೆ ಈಗ 350-360 ರೂ. ಗೆ ಖರೀದಿ ನಡೆಸುತ್ತಿದೆ. ಹೊರರಾಜ್ಯಗಳ ವರ್ತಕರು ಕಾಳುಮೆಣಸಿಗೆ ಕರ್ನಾಟಕವನ್ನು ಅವಲಂಬಿಸುವುದರಿಂದ ಧಾರಣೆ ಏರಿಕೆ ಕಾಣಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಸ್ಥಳೀಯವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ವ್ಯಕ್ತವಾಗದ ಕಾರಣ ಧಾರಣೆ ಇಳಿಕೆ ಕಂಡಿದೆ. ಇನ್ನೊಂದು ವಿಶ್ಲೇಷಣೆಯೂ ಕೇಳಿಬರುತ್ತಿದೆ. ಬೇಡಿಕೆಯಷ್ಟೇ ಕಾಳುಮೆಣಸನ್ನು ಕೃಷಿಕರು ಮಾರುಕಟ್ಟೆಗೆ ಬಿಡುತ್ತಿರುವುದು ಧಾರಣೆ ಇಳಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕೊಕ್ಕೋ ದರ ಸ್ಥಿರ
ಕೊಕ್ಕೋ ಧಾರಣೆ ಹಿಂದಿನ ವಾರದಂತೆ ಈ ವಾರವು ಸ್ಥಿರತೆ ದಾಖಲಿಸಿದೆ. ಹಸಿ ಕೊಕ್ಕೋ ಕೆ.ಜಿ.ಗೆ 45 ರೂ. ಹಾಗೂ ಒಣ ಕೊಕ್ಕೋ ಕೆ.ಜಿ.ಗೆ 195 ರೂ. ನಂತೆ ಖರೀದಿ ನಡೆಸಿದೆ. ಮಳೆ ಬರುತ್ತಿದ್ದಂತೆ ಧಾರಣೆ ಇಳಿಕೆಗೆ ಆರಂಭಿಸಿದ್ದ ಹಸಿ ಕೊಕ್ಕೋ, ಈಗ 45 ರೂ. ಗೆ ತಲುಪಿದೆ. ಹಸಿ ಕೊಕ್ಕೋ ಇಷ್ಟು ಬೆಳವಣಿಗೆಗಳ ನಡುವೆ ಒಣ ಕೊಕ್ಕೋ ಮಾತ್ರ ಯಾವುದೇ ಬದಲಾವಣಗೆ ಜಗ್ಗಲಿಲ್ಲ.
Related Articles
ತೆಂಗು ಧಾರಣೆ 34 ರೂ. ಗೆ ಏರಿಕೆ ಆಗಿದೆ. 32- 33 ರೂ. ನಲ್ಲಿದ್ದ ಧಾರಣೆ ವಾರಾಂತ್ಯಕ್ಕೆ 34 ರೂ. ಗೆ ತಲುಪಿದೆ. ಹಿಂದಿನ ವಾರದ ನಡುವೆ ಇದು 34 ರೂ. ಗೆ ತಲುಪಿತ್ತು. ಈಗ ಅದೇ ಧಾರಣೆ ಈ ವಾರಾಂತ್ಯದಲ್ಲಿ ತಲುಪಿದೆ. ಮಾರುಕಟ್ಟೆ ದೃಷ್ಟಿಯಿಂದ ನೋಡುವುದಾದರೆ ತೆಂಗು ಧಾರಣೆ ಉತ್ತಮ ಹಂತದಲ್ಲಿ ಇರಬೇಕಾಗಿತ್ತು.
Advertisement
ರಬ್ಬರ್ ಧಾರಣೆ ಏರಿಳಿಕೆಇನ್ನೊಂದು ಕಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಬ್ಬರ್ ಆಮದಾಗಿರುವ ಪ್ರಭಾವವೋ ಏನೋ, ರಬ್ಬರ್ ಧಾರಣೆಯಲ್ಲಿ ಇಳಿಕೆ ದಾಖಲಾಗಿದೆ. 129.5 ರೂ. ನಲ್ಲಿದ್ದ ಆರ್‌ಎಸ್‌ಎಸ್ 4 ದರ್ಜೆ 129 ರೂ. ಗೆ, 126 ರೂ. ನಲ್ಲಿದ್ದ ಆರ್‌ಎಸ್‌ಎಸ್ 5 ದರ್ಜೆ 124.5 ರೂ. ನಲ್ಲಿ, 115 ರೂ. ನಲ್ಲಿದ್ದ ಲಾಟ್ 114 ರೂ. ಗೆ, 95 ರೂ. ನಲ್ಲಿದ್ದ ಸ್ಕ್ರಾಪ್ 1 ದರ್ಜೆ 91 ರೂ.ಗೆ, 88 ರೂ. ನಲ್ಲಿದ್ದ ಸ್ಕ್ರಾಪ್ 2 ದರ್ಜೆ 83 ರೂ. ಗೆ ಇಳಿಕೆಯಾಗಿದೆ. ರಬ್ಬರ್ ಧಾರಣೆಯಲ್ಲಿ ದೊಡ್ಡ ಮಟ್ಟಿನ ಇಳಿಕೆ ದಾಖಲಾಗಿರುವುದು ಕಳವಳಕಾರಿ. ಗಣೇಶ್ ಎನ್. ಕಲ್ಲರ್ಪೆ