Advertisement

ಅಡಿಕೆ ಕೊಳೆ ರೋಗ: ಔಷಧ ಸಿಂಪಡಿಸಲು ತೋಟಗಾರಿಕೆ ಇಲಾಖೆ ಸೂಚನೆ

12:29 AM Jul 09, 2020 | Sriram |

ಮಹಾನಗರ: ಅಡಿಕೆ ಎಲೆ ಚುಕ್ಕೆ ರೋಗವು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಶಿಲೀಂಧ್ರ ರೋಗವಾಗಿದ್ದು, ಎಲೆಗಳ ಮೇಲೆ ತೇವಾಂಶ ಇದ್ದಾಗ ಈ ರೋಗ ಕಂಡು ಬರುತ್ತದೆ. ಇದಕ್ಕಾಗಿ ಔಷಧ ಸಿಂಪಡಿಸುವುದು ಅಗತ್ಯ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

Advertisement

ಮೊದಲು ತಳಭಾಗದ ಎಲೆಗಳ ಮೇಲೆ ಕಂದುಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಕಂಡು ಬಂದು ಅನಂತರ ಒಂದು ರೂ. ನಾಣ್ಯದಷ್ಟು ಅಗಲವಾಗುತ್ತವೆ. ಬಳಿಕ ಇಡೀ ಎಲೆಗಳಿಗೆ ಹರಡಿ ಎಲೆಗಳು ಒಣಗುತ್ತವೆ. ಇದರಿಂದ ಆಹಾರ ತಯಾರಿಕೆ ಕಡಿಮೆಯಾಗಿ ಅಡಿಕೆ ಕಾಯಿ ಗಾತ್ರ, ಗುಣಮಟ್ಟ ಮತ್ತು ಇಳುವರಿ ಕಡಿಮೆಯಾಗುತ್ತದೆ. ರೋಗ ಹೆಚ್ಚಾಗಿ ತಳಭಾಗದ 4ರಿಂದ 5 ಸೋಗೆಗಳು ಒಣಗುತ್ತವೆ. ಇದರಿಂದ ಶೇ. 50ರಷ್ಟು ಇಳುವರಿ ಕಡಿಮೆಯಾಗುತ್ತದೆ.

ರೋಗದ ನಿರ್ವಹಣೆಗೆ ರೋಗಪೀಡಿತ ಸತ್ತ ಎಲೆಗಳನ್ನು ತೆಗೆದು ಸುಡಬೇಕು, ತೋಟದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಹಾಗೂ 3 ಗ್ರಾಂ. ಕಾಪರ್‌ ಆಕ್ಸಿಕ್ಲೋರೈಡ್‌ ಅಥವಾ ಶೇ. 1ರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು.

ಗಾಳಿಯಲ್ಲಿ ಹರಡುವ ಸಾಧ್ಯತೆ
ಅಡಿಕೆ ಕೊಳೆರೋಗವು ಜೂನ್‌ನಿಂದ ಸೆಪ್ಟಂಬರ್‌ ತಿಂಗಳವರೆಗೆ ಕಾಣಿಸಿಕೊಳ್ಳುವುದರಿಂದ ಬೆಳೆಯಲ್ಲಿ ಹೆಚ್ಚಿನ ನಷ್ಟವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಕಳೆದ ವರ್ಷ ಕೊಳೆರೋಗ ಬಂದ ತೋಟಗಳಲ್ಲಿ ರೋಗಾಣು ಸುಪ್ತಾವಸ್ಥೆಯಲ್ಲಿದ್ದು, ಈಗ ಪೂರಕ ವಾತಾವರಣ ಇರುವುದರಿಂದ ಒಮ್ಮೆಲೆ ತೀವ್ರವಾಗುತ್ತದೆ. ಈ ರೋಗವು ಗಾಳಿ ಮುಖಾಂತರ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮಂಗಳೂರು ತೋಟಗಾರಿಕೆ ವಿಷಯ ತಜ್ಞರಾದ ರಿಶಲ್‌ ಡಿ’ಸೋಜಾ ಅವರನ್ನು ಸಂಪರ್ಕಿಸ
ಬಹುದು ಎಂದು ಮಂಗಳೂರು ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Advertisement

ನಿರ್ವಹಣೆ ಕ್ರಮ
ಅಡಿಕೆ ಕೊಳೆರೋಗ ನಿವಾರಣೆಗೆ ಶೇ. 1ರ ಬೋಡೋì ದ್ರಾವಣ ಸಿಂಪಡಣೆಯನ್ನು ಮಳೆಗಾಲ ಪ್ರಾರಂಭವಾಗುವುದಕ್ಕೆ ಮೊದಲು ಮತ್ತು 30ರಿಂದ 45 ದಿನಗಳ ಅನಂತರ ಇನ್ನೊಮ್ಮೆ ಸಿಂಪಡಿಸಬೇಕು. ಮಳೆ ಬಿಡುವಿದ್ದಾಗ 2ನೇ ಹಂತದ ಬೋರ್ಡೋ ದ್ರಾವಣ ಸಿಂಪಡನೆಗೆ ಈಗ ಸೂಕ್ತ ಕಾಲವಾಗಿದೆ.

ಕಾಳುಮೆಣಸು ಸೊರಗು ರೋಗಗಳು ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಬಾಧಿಸುತ್ತವೆ. ಈ ಸೊರಗು ರೋಗ ನಿಯಂತ್ರಿಸಲು ಶೇ. 1ರ ಬೋರ್ಡೋ ದ್ರಾವಣವನ್ನು ಬಳ್ಳಿಗಳ ಎಲ್ಲ ಎಲೆಗಳಿಗೆ ಬೀಳುವಂತೆ ಸೂಕ್ಷ್ಮವಾಗಿ ಸಿಂಪಡಿಸಿದ ಅನಂತರ ಅದೇ ದ್ರಾವಣವನ್ನು ಬಳ್ಳಿಗಳ ಬುಡಕ್ಕೂ ಸಿಂಪಡಿಸಬೇಕು. ಈ ಸಿಂಪಡಣೆಯನ್ನು 30-40 ದಿನಗಳ ಅಂತರದಲ್ಲಿ ಪುನರಾವರ್ತಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next