Advertisement

ಅಡಿಕೆ ಲಾಭಗಾರಿಕೆ! ಹೊಸ ತೋಟದಿಂದ ದುಡ್ಡು ಗಳಿಸಬಹುದಾ?

03:45 AM Jun 26, 2017 | |

ಈ ಸಲ ಅಡಿಕೆಗೆ ಒಳ್ಳೆ ಬೆಲೆ ಬಂತು ಅಂದಾಕ್ಷಣ ಎಲ್ಲರ ಕಣ್ಣೂ¡ ಅಡಿಕೆ ತೋಟದ ಮೇಲೆ ಹೋಗುತ್ತದೆ. ಅರೆ, ನಾವು ಹೂಡಿಕೆ ಮಾಡಿದರೆ ಒಳ್ಳೇ ಲಾಭ ಮಾಡಬಹುದು ಅಂತ ಲೆಕ್ಕ ಹಾಕಿ ಅಡಿಕೆಯ ಬೆಲೆ ಬಿದ್ದಾಗ ಥೈಲಿ ಹಿಡಿದು ಜಮೀನಿನ ಮೇಲೆ ತುಂಬಾ ಜನ ಹೂಡಿಕೆ ಮಾಡುತ್ತಾರೆ. ಆಮೇಲೆ ಲಾಭ ನಷ್ಟಗಳ ಲೆಕ್ಕ ಹಾಕುತ್ತಲೇ ಇರುತ್ತಾರೆ. ಅಡಿಕೆ ಅನ್ನೋ ಮಾಯಾವಿಯ ಮೇಲೆ ಹೂಡಿಕೆ ಮಾಡಿದರೆ ನಿಜಕ್ಕೂ ಲಾಭದಾಯಕವಾ? ಹಾಗಾದರೆ ಯಾರಿಗೆ? ಅಡಿಕೆ ತೋಟ ಕೊಳ್ಳಬೇಕು ಎಂದು ಯೋಚಿಸುತ್ತಿರುವವರಿಗೆ ಇಲ್ಲಿದೆ ಮಾಹಿತಿ.

Advertisement

ರಾಜ್ಯದಲ್ಲಿ ಸದಾ ಸದ್ದು ಮಾಡುತ್ತಿರುವ ಒಂದೇ ಒಂದು ಬೆಳೆಯೆಂದರೆ ಅದು ಅಡಿಕೆ. ಕಾರ್ಖಾನೆಯವರು ನೀಡಬೇಕಾದ ಹಳೆ ಬಾಕಿಯ ವಿಚಾರ ಬಂದಾಗ ಮಾತ್ರ ಕಬ್ಬು ಸದ್ದು ಮಾಡುತ್ತದೆಯೇ ವಿನಃ ಉಳಿದಂತೆ ಅದು ತೆರೆಮರೆಗೆ ಸರಿದು ಬಿಡುತ್ತದೆ. ಎಂದೂ ಎಲ್ಲಿಯೂ ಲಾಭ ನಷ್ಟದ ಲೆಕ್ಕಾಚಾರ ಬರುವುದೇ ಇಲ್ಲ. ಆದರೆ ಅಡಿಕೆಯ ವಿಷಯ ಹಾಗಲ್ಲ. ಸದಾ
ಧಾರಣೆ, ಲಾಭ -ನಷ್ಟದ ಲೆಕ್ಕಾಚಾರದಲ್ಲಿಯೇ ಅಡಿಕೆ ಸದ್ದು ಮಾಡುತ್ತದೆ. ವಾಸ್ತವವಾಗಿ ಉಳಿದೆಲ್ಲ ಸಾಮಾನ್ಯ
ಬೆಳೆಗಿಂತ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಅಡಿಕೆಯೇ ಮೇಲು. ಹಾಗಿದ್ದಾಗ್ಯೂ ಇದೇಕೆ ಸದ್ದು ಮಾಡುತ್ತದೆ? ಇದರಲ್ಲಿನ ಲಾಭ ನಷ್ಟದ ಲೆಕ್ಕಾಚಾರವೇನು?

ನಿಜಕ್ಕೂ ಕೃಷಿಯಲ್ಲಿ ಹೂಡಿಕೆ ಮಾಡುವವರಿಗೆ ಅಡಿಕೆ ವರದಾನವಾಗಿಯೇ ಅಥವಾ ಅಡಿಕೆ ಎಂಬುದು ರೈತರನ್ನು ನಷ್ಟಕ್ಕೆ
ದೂಕುತ್ತಿದೆಯೇ? ಈ ಎಲ್ಲ ಲೆಕ್ಕಾಚಾರದ ನಡುವೆಯೂ ಬಹುತೇಕರು ಹೂಡಿಕೆ ಎಂದಾಕ್ಷಣ ಸಹಜವಾಗಿಯೇ ಅವರ ಆಯ್ಕೆ ಅಡಿಕೆಯಾಗಿರುತ್ತದೆ. ಏನಿದರ ಮರ್ಮ? ಯಾರು ಈ ರೀತಿ ಹೂಡಿಕೆ ಮಾಡುತ್ತಾರೆ ಎಂಬುದು ಇಲ್ಲಿ ಬಹಳ ಮುಖ್ಯ. ಇಲ್ಲಿ ಎರಡು ವಿಧದ ಜನ ಅಡಿಕೆ ಬೆಳೆಯಲ್ಲಿ ಹೂಡಿಕೆ ಮಾಡುತ್ತಾರೆ. ಪಾಲಿ ಹೌಸ್‌ನಲ್ಲಿ ಬೆಳೆಯುವ ಪುಷೊ³àದ್ಯಮ ಇತ್ಯಾದಿ ಕೃಷಿ ಹೂಡಿಕೆಗಳು ಒಂದೆರಡು ವರ್ಷದ ಲೆಕ್ಕಾಚಾರದಲ್ಲಿ ಮಾತ್ರವಾಗಿರುತ್ತವೆ. ಅತಿ ದೊಡ್ಡ
ಶ್ರೀಮಂತರು, ಕಾರ್ಪೋರೇಟ್‌ ಕಂಪನಿಗಳ ಕೃಷಿ ಹೂಡಿಕೆಯೆಂದರೆ ಅದು ಕಾμ ಅಥವಾ ಟೀ ಎಸ್ಟೇಟ್‌ ಆಗಿರುತ್ತದೆ.

ಆದರೆ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಹೂಡಿಕೆ ಎಂದರೆ ಅದು ಬಹುತೇಕ ಅಡಿಕೆ ಕೃಷಿಯೇ ಆಗಿರುತ್ತದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದು, ಅಡಿಕೆ ಕೃಷಿ ಎಂಬುದು ಇತರೆಲ್ಲ ಕೃಷಿಗಿಂತ ಕಡಿಮೆ ಶ್ರಮವನ್ನು ಬೇಡುತ್ತದೆ. ಬೇರೆ ಎಲ್ಲ ಬೆಳೆಗಿಂತ ಹೆಚ್ಚು ಲಾಭ ತಂದುಕೊಡುತ್ತದೆ. ಇದಕ್ಕೆ ಹೊರತಾಗಿ ಕೆಲವೊಂದು ಬೆಳೆಗಳು ಎಂದರೆ
ಪುಷೊ³àದ್ಯಮ, ಶುಂಠಿ ಮುಂತಾದ ಬೆಳೆಗಳು ಕೆಲವೇ ಸಂದರ್ಭದಲ್ಲಿ, ಕೆಲವರಿಗೆ ಮಾತ್ರ ಲಾಭ ನೀಡಬಲ್ಲದು. ಇದನ್ನು ಸಾರ್ವತ್ರಿಕವಾಗಿ ಹೀಗೆ ಲಾಭದಾಯಕ ಎನ್ನಲು ಸಾಧ್ಯವಿಲ್ಲ.

ಹಾಗಾದರೆ ಅಡಿಕೆಯಿಂದ ಯಾರಿಗೆ ಲಾಭ?
ಯಾರು ವಂಶಪಾರಂಪರ್ಯವಾಗಿ ಕೃಷಿ ಭೂಮಿಯನ್ನು ಹೊಂದಿರುತ್ತಾರೋ ಅವರಿಗೆ ಅಡಿಕೆ ಲಾಭದಾಯಕ ಎನ್ನಲು ಯಾವುದೇ ಅಡ್ಡಿ ಇಲ್ಲ. ಪಾರಂಪರಿಕವಾಗಿ ಬಂದ ಭತ್ತದ ಗದ್ದೆಯನ್ನೋ, ಖಾಲಿ ಜಾಗವನ್ನೋ ಅಡಿಕೆ ತೋಟವನ್ನಾಗಿ ಅಭಿವೃದ್ಧಿಪಡಿಸಿದರೆ ಅದು ಖಂಡಿತ ಲಾಭದಾಯಕವೇ?. ಭೂಮಿ ಎಂಬ ಮೂಲ ಬಂಡವಾಳ ಇದ್ದರೆ ಇದು ಖಂಡಿತವಾಗಿಯೂ ಲಾಭದಾಯಕ. ಅಡಿಕೆ ತೋಟದಲ್ಲಿ ಪ್ರತಿ ಎಕರೆಗೆ ಕೆಂಪಡಿಕೆ ಸರಾಸರಿ 8-10 ಕ್ವಿಂಟಾಲ್‌ ಫಸಲು ಬರುತ್ತದೆ. ಇದನ್ನು ಸಾರಾಸಗಟಾಗಿ ರಾಶಿಇಡಿ ಎಂದೇ ಪರಿಗಣಿಸೋಣ. ಈಗಿನ ಧಾರಣೆಯ ಪ್ರಕಾರ ಕ್ವಿಂಟಾಲ್‌ ಒಂದಕ್ಕೆ 36 ಸಾವಿರ ರೂ. ಬರಬಹುದು. ಅಂದರೆ ಪ್ರತಿ ಎಕರೆ ಅಡಿಕೆ ತೋಟಕ್ಕೆ 3.60 ಲಕ್ಷ ರೂ. ಆದಾಯ. ಇದರಲ್ಲಿ
ಒಂದೂವರೆ ಲಕ್ಷ ರೂ. ಖರ್ಚು ಕಳೆದರೂ ಪ್ರತಿ ಎಕರೆಗೆ 2 ಲಕ್ಷ ರೂ. ಲಾಭ.

Advertisement

ಒಬ್ಬ ರೈತನಿಗೆ 5 ಎಕರೆ ಅಡಿಕೆ ತೋಟವಿದ್ದರೆ ಆತನ ನಿವ್ವಳ ಆದಾಯ 10 ಲಕ್ಷ ರೂ. ಎಂದು ಪರಿಗಣಿಸಬಹುದು.
ಖರ್ಚು ಎಂಬುದು ಆಯಾಯ ರೈತರ ಕೃಷಿ ವಿಧಾನವನ್ನು ಅವಲಂಭಿಸಿರುತ್ತದೆ. ಇಷ್ಟು ಆದಾಯ ಬೇರೆ ಯಾವ
ಬೆಳೆಯಲ್ಲಿಯೂ ಬರಲು ಸಾಧ್ಯವೇ ಇಲ್ಲ. ಒಂದು ವೇಳೆ ಅಡಿಕೆಯ ಧಾರಣೆ 20 ಸಾವಿರಕ್ಕೆ ಕುಸಿದರೂ ಸರಾಸರಿ ಆದಾಯ 2 ಲಕ್ಷ ರೂ.ಗೆ ಸಿಗುತ್ತದೆ. ಆಗ ಖರ್ಚು ಕಡಿಮೆ ಮಾಡಿ 1 ಲಕ್ಷದೊಳಗೆ ಮುಗಿಸಿದರೆ ಒಂದು ಲಕ್ಷ ರೂ. ನಿವ್ವಳ ಲಾಭ. ಇದು ಕೂಡ ಕಡಿಮೆ ಏನಲ್ಲ. ಘಟ್ಟದ ಮೇಲಿನ ರಾಶಿಇಡಿ ಧಾರಣೆಯ ಲೆಕ್ಕಾಚಾರ ಇದಾದರೂ, ಕರಾವಳಿ, ಸಾಗರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆಯಲಾಗುವ ಚಾಲಿ ಧಾರಣೆಯ ಲೆಕ್ಕಾಚಾರದಲ್ಲಿಯೂ ಕೊನೆಗೆ ಸಿಗುವ ಅಂಕಿ ಅಂಶ ಬಹುತೇಕ ಇದೇ ಆಗಿರುತ್ತದೆ. 

ಅಡಿಕೆ ಬೆಳೆದರೂ ಕಷ್ಟ ತಪ್ಪಿಲ್ಲ ಏಕೆ?
ಸಧ್ಯದ ಸ್ಥಿತಿಯಲ್ಲಿ ಭತ್ತ ಬೆಳೆದರೆ ಪ್ರತಿ ಎಕರೆ ಪ್ರತಿ ಎಕರೆಗೆ 15-35 ಕ್ವಿಂಟಾಲ್‌ ಭತ್ತ ತೆಗೆಯಬಹುದು. ಪ್ರತಿ ಕ್ವಿಂಟಾಲ್‌ ಭತ್ತದ ಧಾರಣೆ 1,500 ರೂ. ಎಂದುಕೊಂಡರೂ ಸರಾಸರಿ ಆದಾಯ ಆಜುಬಾಜು 40 ಸಾವಿರ ರೂ. ಉತ್ಪಾದನೆಯ ಖರ್ಚು ಬಹುತೇಕ ಇಷ್ಟೇ ಬರುತ್ತದೆ. ಹೀಗಾಗಿ ಇಲ್ಲಿ ಲಾಭದ ಪ್ರಶ್ನೆಯೇ ಇಲ್ಲ. ಆಕಸ್ಮಿಕ ಲಾಭ ಎಂದು ಪರಿಗಣಿಸಿದರೂ ಪ್ರತಿ ಎಕರೆಗೆ 10 ಸಾವಿರ ರೂ. ಲಾಭ ಸಿಗಬಹುದಷ್ಟೇ. ಈ ಲೆಕ್ಕಚಾರವನ್ನು ಹೋಲಿಸಿದರೆ ಅಡಿಕೆ ಲಾಭದಾಯಕ ಎನ್ನಲು ಅಡ್ಡಿಯಿಲ್ಲ.

ಹಾಗಿದ್ದರೂ ಅಡಿಕೆ ಕೃಷಿಕರೇಕೆ ಕಷ್ಟ ಅನುಭವಿಸುತ್ತಿದ್ದಾರೆ ಎಂದರೆ ಹಾಸಿಗೆಗಿಂತ ಹೆಚ್ಚು ಕಾಲು ಚಾಚುವ ಅಭ್ಯಾಸ
ಎಲ್ಲ ಬೆಳೆಗಾರರಿಗಿಂತ ಅಡಿಕೆ ಬೆಳೆಗಾರರಿಗೆ ಜಾಸ್ತಿ. ಹಾಗಾಗಿ, ಸಾಲ ಮಾಡಿಕೊಂಡು ಕೊನೆಗೆ ಬಡ್ಡಿ ಕಟ್ಟಲಾಗದೆ
ಒದ್ದಾಡುತ್ತಾರೆ.

ಅಸಂಪ್ರಾದಾಯಿಕ ಹೂಡಿಕೆದಾರರು ಇದ್ದಾರೆ! ಇದೆಲ್ಲ ಸಾಂಪ್ರದಾಯಿಕವಾಗಿ ಕೃಷಿ ಭೂಮಿ ಹೊಂದಿರುವವರ ಲೆಕ್ಕಾಚಾರ. ಆದರೆ ಇತ್ತೀಚೆಗೆ ನಗರದಲ್ಲಿ ವ್ಯಾಪಾರೋಧ್ಯಮದಲ್ಲಿ ತೊಡಗಿರುವವರ, ಐಟಿಬಿಟಿ ಯಲ್ಲಿ ಕೆಲಸ ನಿರ್ವಹಿಸುತ್ತಾ, ಕೈತುಂಬ ಸಂಬಳ ಪಡೆಯುವ ಒಂದು ವರ್ಗ ಉಳಿತಾಯ ಅಥವಾ ಲಾಭದಲ್ಲಿ ಒಂದು ಭಾಗವನ್ನು ಕೃಷಿಯಲ್ಲಿ ತೊಡಗಿಸಲು ಆಲೋಚಿಸುತ್ತಿದ್ದಾರೆ. ಇದು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ದೊಡ್ಡ ಮೊತ್ತವೊಂದನ್ನು ಕೃಷಿ ಭೂಮಿಯಲ್ಲಿ ತೊಡಗಿಸುವ ಮನಃಸ್ಥಿತಿ ಹೆಚ್ಚಾಗುತ್ತಿದೆ. ಸಧ್ಯ ಮಲೆನಾಡಿನಲ್ಲಿ ಪ್ರತಿ ಎಕರೆ ಅಡಿಕೆ ತೋಟದ ಬೆಲೆ ಎಕರೆಗೆ ಸರಾಸರಿ 10 ಲಕ್ಷ ರೂ. ಇದೆ. ಉತ್ತಮ ನಿರ್ವಹಣೆ ಹೊಂದಿ, ಮುಖ್ಯರಸ್ತೆಗೆ ಹೊಂದಿಕೊಂಡಿದ್ದರೆ ಇದರ ಧಾರಣೆ ಸಹಜವಾಗಿ ಪ್ರತಿ ಎಕರೆಗೆ 15-17 ಲಕ್ಷ ರೂ. ವರೆಗೆ ಮಾರಾಟವಾಗುತ್ತಿದೆ. ಕೆಲವೆಡೆ 20 ಲಕ್ಷ ಮತ್ತು 25 ಲಕ್ಷ ರೂ. ಮಾರಾಟವಾಗಿರುವ ಉದಾಹರಣೆಯೂ ಇದೆ. ಇನ್ನು ಶಿವಮೊಗ್ಗದಂತಹ ನಗರಕ್ಕೆ ಆಚೀಚೆ ಐದಾರು ಕಿ.ಮೀ. ಇದ್ದು, ಟಾರ್‌ ರಸ್ತೆಗೆ ಹೊಂದಿಕೊಂಡಿದ್ದರೆ ಈ ತೋಟದ ಬೆಲೆ ಪ್ರತಿ ಎಕರೆಗೆ ಸರಾಸರಿ 35-40 ಲಕ್ಷ ರೂ. ಇದೆ. ಇಷ್ಟೊಂದು ಹಣ ನೀಡಿ ತೋಟ ಖರೀದಿಸಿದರೆ ಅದು ಹೇಗೆ ಲಾಭವಾಗುತ್ತದೆ? ಹೇಗೆ ಉತ್ತಮ ಹೂಡಿಕೆಯಾಗುತ್ತದೆ?

ವ್ಯಾಪಾರಿಗಳಲ್ಲಿ ಸಂಗ್ರಹವಾಗುವ ಕಪ್ಪು ಹಣ ಕೂಡ ಅಡಿಕೆ ಕೃಷಿಯಲ್ಲಿ ಹೂಡಿಕೆಗೆ ಪ್ರಚೋದನೆ ನೀಡುವ ಇನ್ನೊಂದು ಅಂಶ. ಹೆಚ್ಚು ಕಪ್ಪು ಹಣವನ್ನು ಇಲ್ಲಿ ನಿಶ್ಚಿಂತೆಯಾಗಿ ಇಡಬಹುದು. ಇನ್ನು ಆದಾಯ ಘೋಷಣೆಯಲ್ಲಿ ಅಡಿಕೆ ತೋಟದಲ್ಲಿ ಹೆಚ್ಚು ಕೃಷಿ ಆದಾಯ ಎಂದು ತೋರಿಸಬಹುದು. ಇದು ಕೂಡ ಹೂಡಿಕೆಯತ್ತ ಸೆಳೆಯಲು ಇರುವ ಮುಖ್ಯ ಕಾರಣ. ಇನ್ನೊಂದೆಡೆ ಈ ವರ್ಗಕ್ಕೆ ಲಾಭ ನಷ್ಟಕ್ಕಿಂತ ಮುಖ್ಯವಾಗಿ ವಾರಾಂತ್ಯದಲ್ಲಿ ತಮ್ಮದೇ ತೋಟದಲ್ಲಿ ಆರಾಮವಾಗಿ ಕಾಲ ಕಳೆಯಬೇಕು. ಯಾವ್ಯಾವುದೋ ರೆಸಾರ್ಟ್‌ ಎಂದರೆ ಮತ್ತೆ ಸಾವಿರಾರು ರೂ. ಖರ್ಚು. ಇಲ್ಲಿ ಹಾಗೇನಿಲ್ಲ. ಮನಸ್ಸಿಗೆ ಖುಷಿ. ಯಾವುದೋ ಬ್ಯಾಂಕ್‌ನಲ್ಲಿ ಸುಮ್ಮನೆ ಕಡಿಮೆ ಬಡ್ಡಿಗೆ ಇಡುವ ಬದಲು ಈ ರೀತಿ ಹೂಡಿಕೆ ಮಾಡಿದರೆ ಕನಿಷ್ಠ
ಲಾಭದ ಜೊತೆಗೆ, ಗರಿಷ್ಠ ಮನಃಶ್ಯಾಂತಿ ಸಿಗುತ್ತದೆ. ಬೇಡ ಎಂದಾಗ ಇದನ್ನು ಅತ್ಯುತ್ತಮ ಧಾರಣೆಗೆ ಮಾರಾಟ
ಮಾಡಬಹುದು.

ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅಡಿಕೆ ತೋಟ ಎಂದರೆ ಕನಿಷ್ಠ 1 ಎಕರೆಯಿಂದ ಐದಾರು ಎಕರೆಯವರೆಗೆ ಆರಾಮವಾಗಿ ಖರೀದಿಸಿ ಕೃಷಿ ಮಾಡಬಹುದು. ಇದನ್ನು ಬಿಟ್ಟು ಕಾμ, ಟೀ ಎಂದೆಲ್ಲ ಅಂದರೆ ಕನಿಷ್ಠ 20 ಎಕರೆ ಭೂಮಿಯನ್ನು ಖರೀದಿಸಿದರೆ ಮಾತ್ರ ಅದುಲಾಭ. ಆರಂಭದಲ್ಲಿ ಭೂಮಿ ಖರೀದಿಯ ಹೊರತಾಗಿ ಉಳಿದ ಖರ್ಚುಗಳು ಲಕ್ಷ ರೂ. ಲೆಕ್ಕದಲ್ಲಿ ಇರುತ್ತದೆ. ಇದು ಸಾಮಾನ್ಯರಿಂದ ಸಾಧ್ಯವಿಲ್ಲದ ಮಾತು.

ಜೊತೆಗೆ ಹೆಚ್ಚು ಕೂಲಿ ಕಾರ್ಮಿಕರನ್ನು ಬೇಡುವ ಇದರ ವಾರ್ಷಿಕ ನಿರ್ವಹಣೆ ಅತಿ ಕಷ್ಟ. ಹೀಗಾಗಿ ಹತ್ತು ಹಲವು
ಲೆಕ್ಕಾಚಾರಗಳನ್ನು ಇಟ್ಟುಕೊಂಡೇ ಅಡಿಕೆ ಕೃಷಿಯಲ್ಲಿ ಹೂಡಿಕೆಯಾಗುತ್ತಿದೆ. ಆದರೆ ಈ ರೀತಿ ಹೂಡಿಕೆ ಮಾಡುವವರಲ್ಲಿ ಕೃಷಿಯನ್ನೇ ನಂಬಿಕೊಂಡವರು ಬಹಳ ಕಡಿಮೆ ಎಂಬುದು ಕೂಡ ಗಮನಾರ್ಹ!

ಲಾಭದ ಲೆಕ್ಕಾಚಾರ
ಪ್ರತಿ ಎಕರೆಗೆ ಸರಾಸರಿ 15 ಲಕ್ಷ ರೂ. ಬೆಲೆ ನೀಡಿ ಖರೀದಿಸಿದರು ಎನ್ನಿ. 15 ಲಕ್ಷ ರೂ.ಗಳಿಗೆ ಬ್ಯಾಂಕ್‌ ಬಡ್ಡಿ ದರ ಎಂದು ವಾರ್ಷಿಕ ಶೇ. 12 ರಷ್ಟನ್ನು ಲೆಕ್ಕ ಹಾಕಿದರೂ, ವರ್ಷಕ್ಕೆ 2,70,000 ಬಡ್ಡಿಯೇ ಬೀಳುತ್ತದೆ. ಇನ್ನು ನಿರ್ವಹಣೆಯ ಖರ್ಚು ಎಂದು 1 ಲಕ್ಷ ರೂ .ಲೆಕ್ಕ ಹಾಕಿದರೂ, ಒಟ್ಟಾರೆ ಖರ್ಚು 3,70,000 ರೂ. ಆಗುತ್ತದೆ. ಈಗಿನ ಪ್ರಕಾರ
ಆದಾಯವೇ ಪ್ರತಿ ಎಕರೆಗೆ 3.6 ಲಕ್ಷ ರೂ. ಆಗುತ್ತದೆ.

ಅಲ್ಲಿಗೆ ಸರಾಸರಿ ಪ್ರತಿ ಎಕರೆಗೆ ಸರಾಸರಿ 10 ಸಾವಿರ ರೂ. ನಷ್ಟ. ಇನ್ನು ಕೆಲವೆಡೆ ಪ್ರತಿ ಎಕರೆಗೆ 30-40 ಲಕ್ಷ ರೂ.
ನೀಡಿ ಜಮೀನು ಖರೀದಿಸುತ್ತಾರೆ. ಇಷ್ಟು ಹಣಕ್ಕೆ ಪ್ರತಿ ಎಕರೆಗೆ ಮೂಲ ಬಂಡವಾಳದ ಬಡ್ಡಿ ಲೆಕ್ಕಾಚಾರದಲ್ಲಿ ವಾರ್ಷಿಕ ಬಡ್ಡಿಯೇ 4.20 ಸಾವಿರ ರೂ.ಗಳಾಗುತ್ತದೆ.

ಇನ್ನು ಲಾಭದ ಮಾತನ್ನಾಡಿದರೆ ಏನು ಪ್ರಯೋಜನ? ಹಾಗಿದ್ದರೆ ಈ ರೀತಿ ಅಡಿಕೆ ಕೃಷಿಯ ಮೇಲೇಕೆ ಬಂಡವಾಳ ಹೂಡುತ್ತಿದ್ದಾರೆ? ಕೆಲವರಲ್ಲಿ ಅಂದರೆ ಐಟಿಬಿಟಿ ಕೆಲಸಗಾರರಲ್ಲಿ ಮತ್ತು ಉದ್ಯಮಿಗಳಲ್ಲಿ ಸಾಕಷ್ಟು ಹಣ ಸಂಗ್ರಹವಾಗುತ್ತಿದೆ. ಈ ಹಣವನ್ನು ಬ್ಯಾಂಕ್‌ನಲ್ಲಿಟ್ಟರೆ ಈಗಿನ ಪ್ರಕಾರ ಶೇ. 6 ರಷ್ಟು ಬಡ್ಡಿ ನೀಡುತ್ತಾರೆ. ಅಂದರೆ 10 ಲಕ್ಷ ರೂ. ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟರೆವಾರ್ಷಿಕ 60 ಸಾವಿರ ರೂ. ಬಡ್ಡಿ ನೀಡಲಾಗುತ್ತದೆ. ಈ ಬಡ್ಡಿಗೆ ಆದಾಯ ತೆರಿಗೆ
ವಿಧಿಸಲಾಗುತ್ತದೆ. ಇದರ ಬದಲು ನೇರ ಅಡಿಕೆ ಕೃಷಿಯಲಿ ಹೂಡಿಕೆ ಮಾಡಿದರೆ 10 ಲಕ್ಷ ರೂ.ಗಳಿಗೆ ನಿವ್ವಳ ಲಾಭವೇ 2 ಲಕ್ಷ ರೂ.ಗಳಾಗುತ್ತದೆ. ಒಂದು ಪಕ್ಷ ಅಡಿಕೆ ಧಾರಣೆ ಕುಸಿತವಾದರೆ ಮುಂದಿನ ವರ್ಷದವರೆಗೂ ಅಡಿಕೆ ದಾಸ್ತಾನು ಮಾಡಬಹುದು.

ಒಂದು ಪಕ್ಷ ಧಾರಣೆ ಕುಸಿದು ಪ್ರತಿ ಕ್ವಿಂಟಾಲ್‌ಗೆ 15 ಸಾವಿರದಂತೆ ಧಾರಣೆ ಬಂದರೂ, ಪ್ರತಿ ಎಕರೆಗೆ ಒಂದೂವರೆ ಲಕ್ಷ ನಿವ್ವಳ ಆದಾಯ. ಮತ್ತು ಖರ್ಚು ಕಳೆದು 50 ಸಾವಿರ ರೂ. ಆದಾಯ ಬರುತ್ತದೆ. ಇದರ ಜೊತೆ ಇರುವ ಇನ್ನೊಂದು ಲಾಭವೆಂದರೆ ಪ್ರತಿ ವರ್ಷ ಭೂಮಿಯ ಮೂಲ ಬೆಲೆ ಏರಿಕೆಯ ಹಾದಿಯಲ್ಲಿ ಸಾಗುತ್ತದೆ. ಬ್ಯಾಂಕ್‌ನಲ್ಲಿ ಬಡ್ಡಿಗೆ ಹಣ ಇಟ್ಟರೆ
ಮೂಲ ಬಂಡವಾಳ ಅಷ್ಟೇ ಇರುತ್ತದೆ. ಆದರಿಲ್ಲಿ ಮೂಲ ಬಂಡವಾಳದ ಮೌಲ್ಯ ಏರುತ್ತಲೇ ಇರುತ್ತದೆ. ಈ
ಲೆಕ್ಕಾಚಾರದಲ್ಲಿ ಅಡಿಕೆ ಕೃಷಿಯಲ್ಲಿ ಹೂಡಿಕೆ ಮಾಡಿದರೆ ದೀರ್ಘ‌ ಕಾಲದಲ್ಲಿ ಕೂಡ ಖಂಡಿತವಾಗಿಯೂ ಲಾಭ.

ಉದಾಹರಣೆಗೆ 2005-06 ರಲ್ಲಿ ಶಿವಮೊಗ್ಗ ನಗರಕ್ಕೆ ಹೊಂದಿಕೊಂಡತ್ತಿರುವ ಹಲವು ಗ್ರಾಮಗಳಲ್ಲಿ ಮುಖ್ಯ
ರಸ್ತೆಯಲ್ಲಿರುವ ಪ್ರತಿ ಎಕರೆಅಡಿಕೆ ತೋಟಕ್ಕೆ 6 ಲಕ್ಷ ರೂ. ಬೆಲೆ ಇತ್ತು. ಈಗ ಅಲ್ಲಿ ಪ್ರತಿ ಎಕರೆ ಅಡಿಕೆ ತೋಟಕ್ಕೆ 40 ಲಕ್ಷ
ರೂ. ಇದು ದೀರ್ಘ‌ಕಾಲಿಕ ಹೂಡಿಕೆಯಲ್ಲಿ ಆಗುವ ಲಾಭ.

– ಗೋಪಾಲ್‌ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next