Advertisement

ನಟ್‌-ಬೋಲ್ಟ್ ಆಕ್ಸಸರೀಸ್‌

06:00 AM Jun 29, 2018 | |

ನಟ್‌ , ಬೋಲ್ಟ್, ಸ್ಪಾನರ್‌, ಸ್ಕ್ರೋ ಇದೆಲ್ಲಾ ಯಾವುದೇ ಇಂಜಿನ್‌ ರಿಪೇರಿ ಮಾಡುವುದಕ್ಕೆ ಬಳಸುವ ಸಾಧನಗಳು. ಆದರೆ, ನಮ್ಮ ಮಹಿಳೆಯರು ಇದನ್ನು ಬಿಟ್ಟಿಲ್ಲ. ಇದನ್ನೆ ತಮ್ಮ ಆಕ್ಸಸರೀಸನ್ನಾಗಿ ಮಾಡಿದ್ದಾರೆ. ಹೌದು ಫ್ಯಾಷನ್‌ ಅನ್ನೋದೇ ಹಾಗೆ. ಹೇಗೆ ಯಾವಾಗ ಬದಲಾಗುತ್ತದೆ ಎನ್ನುವುದು ಸಾಧ್ಯವಿಲ್ಲ. ಹೀಗಾಗಿ, ಮಹಿಳೆಯರು ಈ ನಟ್ಟು -ಬೋಲ್ಟಾಗಳನ್ನು ತಮ್ಮ ಫ್ಯಾಷನ್‌ ಆಗಿ ಬಳಸುತ್ತಿರುವುದು ನಂಬಲೇಬೇಕಾದ ವಿಷಯ. 


ಕಾಲಕ್ಕೆ ತಕ್ಕಂತೆ, ಫ್ಯಾಷನ್‌ಗೆ ತಕ್ಕಂತೆ ಬದಲಾಗುತ್ತಲೇ ಇರಬೇಕು ಎನ್ನುವ ಮಹಿಳೆಯರಿಗೆ ಇದು ಹೇಳಿ ಮಾಡಿಸಿದ್ದು. ಯಾಕೆ ಎಂದರೆ ಸ್ಟೈಲ್‌ ಮಾಡುವ ಯುವತಿಯರಿಗೆ ಇದು ಪಫೆìಕ್ಟ್ ಆಗಿ ಮ್ಯಾಚ್‌ ಆಗುತ್ತದೆ. ಹಾಗಂತ ಸಿಕ್ಕಸಿಕ್ಕ ಕಡೆ, ಕಂಡಕಂಡ ಡ್ರೆಸ್‌ಗೆ ತೊಟ್ಟರೆ ಜನರು ನಿಜಕ್ಕೂ ಇವರ ನಟ್‌ಬೋಲ್ಟ್ ಲೂಸ್‌ ಆಗಿದೆ ಏನೋ ಎನ್ನುದರಲ್ಲಿ ಸಂಶಯವಿಲ್ಲ. ಸ್ವಲ್ಪ ಸ್ಟೈಲ್‌ ಫಾರ್ಮುಲಾ ಗೊತ್ತಿರುವವರು ಇಂತಹ ಆಭರಣಗಳನ್ನು ತೊಟ್ಟು ಬಿಂದಾಸ್‌ ಆಗಿ ಮಿಂಚಬಹುದು.

Advertisement

    ಎಲ್ಲಾ ಡ್ರೆಸ್‌ಗಳಿಗೆ ಇದು ಮ್ಯಾಚ್‌ ಆಗುವುದಿಲ್ಲ. ಮಾರ್ಡನ್‌ ದಿರಿಸುಗಳಿಗೆ ಇದು ಸುಪರ್‌ ಆಗಿ ಕಾಣುತ್ತದೆ. ಕೆಲವು ಸಿಂಪಲ್‌ ಡೈಲಿ ವೇರ್‌ ಕುರ್ತಿ, ಟಾಪ್‌, ಸಿಂಪಲ್‌ ಸ್ಕರ್ಟ್ಸ್ಗಳಿಗೆ ಇದನ್ನು ಮ್ಯಾಚ್‌ ಮಾಡಿಕೊಳ್ಳಬಹುದು. ತೀರಾ ಬೆಲೆಬಾಳುವ ಆಭರಣಗಳು ಇವಲ್ಲ. ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ವೈಟ್‌ ಮೆಟಲ್‌, ಬ್ಲಾಕ್‌ ಮೆಟಲ್‌, ಕೆಲವೇ ಕೆಲವು ಗೋಲ್ಡನ್‌ ಶೇಡ್‌ಗಳಲ್ಲಿ ಲಭ್ಯವಿರುತ್ತದೆ. ನಾನು ಎಲ್ಲಾ ಫ್ಯಾಷನ್‌ಗೂ ಸೈ ಎನ್ನುವವರು ಇಂತಹ ಆಭರಣಗಳನ್ನು ಟ್ರೈ ಮಾಡಲೇಬೇಕು.

    ಕೆಲವು ಬೋಲ್ಟ್‌ಗಳನ್ನು ಥ್ರೆಡ್‌ನ‌ಲ್ಲಿ ಸುತ್ತಿ ನೆಕ್ಲೇಸ್‌ ಕೂಡ ಮಾಡಲಾಗುತ್ತದೆ. ಇವು ನೋಡುವುದಕ್ಕೆ ಮತ್ತು ತೊಡುವುದಕ್ಕೆ ತುಂಬಾ ಸುಂದರವಾಗಿರುತ್ತದೆ. ಇನ್ನು ಇಯರ್‌ ರಿಂಗ್‌, ಫಿಂಗರ್‌ ರಿಂಗ್‌, ಬ್ಯಾಂಗಲ್‌, ಖಡಾ ಮುಂತಾದವುಗಳನ್ನು ಕೂಡ ಈ ನಟ್‌ಬೋಲ್ಟ್ ಬಳಸಿ ವಿವಿಧ ವಿನ್ಯಾಸದಲ್ಲಿ ತಯಾರಿಸಲಾಗುತ್ತದೆ. ನೀವು ಇದನ್ನು ಆಯ್ಕೆ ಮಾಡಿಕೊಂಡು ಹೇಗೆ ತೊಡುತ್ತೀರಿ ಅನ್ನುವುದರ ಮೇಲೆ ನೀವು ಹೇಗೆ ಕಾಣುತ್ತೀರಿ ಎನ್ನುವುದು ಕೂಡ ಡಿಪೆಂಡ್‌ ಆಗುತ್ತದೆ. ಒಟ್ಟಿನಲ್ಲಿ ಫ್ಯಾಷನ್‌ ಪ್ರೀಯರ ಆಕ್ಸಸರೀಸ್‌ ಬಾಕ್ಸ್‌ನಲ್ಲಿ ಈ ಆಭರಣಗಳನ್ನು ಸೇರಿಸಿಕೊಳ್ಳಬಹುದು. ಆಗಾಗ ತೊಡುವುದಕ್ಕೆ ಮಸ್ತಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next