ಹಿಂದಿನ ವಾರ 275 ರೂ. ನಲ್ಲಿದ್ದ ಅಡಿಕೆ ಧಾರಣೆ ಈ ವಾರ 278 ರೂ. ಗೆ ಏರಿಕೆಯಾಗಿದೆ. ಉಳಿದಂತೆ ಹೊಸ ಅಡಿಕೆ 228 ರೂ. ನಿಂದ 230 ರೂ., ಡಬಲ್ ಚೋಲು 300 ರೂ. ನಿಂದ 310 ರೂ. ಗೆ ಖರೀದಿ ನಡೆಸಿದ್ದು, ಹಿಂದಿನ ವಾರದ ಧಾರಣೆಯನ್ನೇ ಕಾಪಾಡಿಕೊಂಡಿದೆ. ಪಠೊರಾ ಹೊಸ 150 ರೂ. ನಿಂದ 190 ರೂ. ವರೆಗೆ ಹಾಗೂ ಹಳೆಯದು 210 ರೂ. ಗೆ ಖರೀದಿ ನಡೆಸುತ್ತಿದೆ.ಉಳ್ಳಿಗಡ್ಡೆ 130 ರೂ., ಹಳೆಯದು 150 ರೂ., ಕರಿಗೋಟು 100 ರೂ.ನಿಂದ 140 ರೂ. ಧಾರಣೆ ಪಡೆದಿವೆ.
Advertisement
ರಬ್ಬರ್ ಕುಸಿತಹಿಂದಿನ ವಾರ ಧಾರಣೆ ಏರಿಸಿಕೊಂಡು ಅಚ್ಚರಿ ಮೂಡಿಸಿದ್ದ ರಬ್ಬರ್ ಈ ವಾರ 1 ರೂ. ಇಳಿಕೆ ಮಾಡಿದೆ. ಆರ್‌ಎಸ್‌ಎಸ್4 ದರ್ಜೆ 1.5 ರೂ. ಕುಸಿತ ಕಂಡು 124 ರೂ., ಆರ್‌ಎಸ್‌ಎಸ್5 ದರ್ಜೆ 1 ರೂ. ಕುಸಿತ ಕಂಡು 118 ರೂ., 50 ಪೈಸೆ ಕುಸಿದಿರುವ ಲಾಟ್ 113 ರೂ. ನಲ್ಲಿ ಖರೀದಿ ನಡೆಸಿದೆ. ತಲಾ 1 ರೂ. ಏರಿಸಿಕೊಂಡಿರುವ ಸಾðಪ್ 1 ದರ್ಜೆ 88 ರೂ. ಹಾಗೂ ಸ್ಕ್ರಪ್ 2 ದರ್ಜೆ 80 ರೂ. ನಲ್ಲಿ ಖರೀದಿ ನಡೆಸಿವೆ.
ಕಳೆದ ವಾರ ದಂತೆ ಈ ವಾರವೂ ತೆಂಗಿನ ಧಾರಣೆ ಸ್ಥಿರವಾಗಿದ್ದು, ಕೆ.ಜಿ. ಗೆ 32 ರೂ. ನಿಂದ 34 ರೂ. ವರೆಗೆ ವಹಿವಾಟು ನಡೆಸಿದೆ. ಕೊಕ್ಕೋ ಸ್ಥಿರ
ಕಳೆದ ವಾರ ಹಸಿ ಕೊಕ್ಕೋ ಕೆ.ಜಿ.ಗೆ 65 ರೂ., ಒಣ ಕೊಕ್ಕೋ ಕೆ.ಜಿ.ಗೆ 195 ರೂ. ನಲ್ಲಿ ಖರೀದಿ ನಡೆಸಿದ್ದು, ಈ ವಾರ ಹಸಿ ಕೊಕ್ಕೋ ಧಾರಣೆ ಮಾತ್ರ 60 ರೂ.ಗೆ ಇಳಿಕೆ ಕಂಡಿದೆ.
Related Articles
ಕಾಳುಮೆಣಸು ಧಾರಣೆಯಲ್ಲಿ ಒಂದಷ್ಟು ಚೇತರಿಕೆ ಕಂಡುಬಂದಿ ದೆ. ಈ ವಾರಾಂತ್ಯಕ್ಕೆ ಕಾಳುಮೆಣಸು ಧಾರ ಣೆ ಕೆ.ಜಿ. ಗೆ 310 ರೂ. ಆಗಿತ್ತು. ಹಿಂದಿನ ವಾರ ಕೆ.ಜಿ. ಗೆ 305 ರೂ. ಆಗಿತ್ತು. ಎರಡು ವಾರಗಳ ಹಿಂದೆ 310 ರೂ.ನಲ್ಲಿದ್ದ ಧಾರಣೆ ಈಗ ಮತ್ತೆ ಇದೇ ಸ್ಥಿತಿಗೆ ಬಂದಿದೆ.
Advertisement