ಹೊಸದಿಲ್ಲಿ : ತೃಣಮೂಲ ಕಾಂಗ್ರೆಸ್ ಸಂಸದೆ, ಬಂಗಾಳಿ ಚಿತ್ರನಟಿ ನುಸ್ರತ್ ಜಹಾನ್ ಅವರು ಮಂಗಳವಾರ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸೀರೆಯುಟ್ಟು, ಸಿಂಧೂರವಿಟ್ಟು ಸಂಸತ್‌ಗೆ ಆಗಮಿಸಿದ ನುಸ್ರತ್, ಬಂಗಾಳಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ನುಸ್ರತ್ ಅವರು ಕಳೆದ ವಾರ ಟರ್ಕಿಯಲ್ಲಿ ಉದ್ಯಮಿ ನಿಖೀಲ್ ಜೈನ್‌ರನ್ನು ವಿವಾಹವಾಗಿದ್ದರು.
ನುಸ್ರತ್‌ರ ಸ್ನೇಹಿತೆ, ಬಂಗಾಳದ ಇನ್ನೋರ್ವ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಮಿಮಿ ಅವರು ಕಲಾಪಕ್ಕೆ ಗೈರಾಗಿ ನುಸ್ರತ್ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಟರ್ಕಿಗೆ ತೆರಳಿದ್ದರು.
Related Articles
ನುಸ್ರತ್ ಮಾಡರ್ನ್ ಧಿರಿಸಿನಲ್ಲಿ ಮೊದಲ ಬಾರಿ ಸಂಸತ್‌ಗೆ ಆಗಮಿಸಿ ಟ್ರೋಲ್‌ಗೆ ಗುರಿಯಾಗುವ ಮೂಲಕ ಭಾರಿ ಸುದ್ದಿಯಾಗಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ನುಸ್ರತ್ ಜಹಾನ್ , ಹಲವು ವಿಚಾರಗಳಿಗೆ ಆಧ್ಯತೆ ನೀಡುತ್ತೇವೆ. ಕಲಾಪದಲ್ಲಿ ಕ್ಷೇತ್ರದ ವಿಚಾರಗಳನ್ನು ಪ್ರಸ್ತಾಪಿಸುತ್ತೇವೆ.ನಮ್ಮ ಅಭಿಪ್ರಾಯಗಳನ್ನು ಸಂಸತ್‌ನ ಮುಂದಿಡುತ್ತೇವೆ ಎಂದಿದ್ದಾರೆ.