Advertisement

ಮಕ್ಕಳಂತೆ ಗಿಡ-ಮರ ಪೋಷಣೆ ಮಾಡಿ: ಪಾಟೀಲ್‌ ಕರೆ

12:41 PM Jun 07, 2022 | Team Udayavani |

ಕಲಬುರಗಿ: ಪ್ರತಿಯೊಬ್ಬರು ತಮ್ಮ ಮಕ್ಕಳಂತೆ ಗಿಡ- ಮರವೂ ಬೆಳೆಸಿದರೆ ಪರಿಸರ ಸಂರಕ್ಷಣೆಯೊಂದಿಗೆ ಉಸಿರಾಟಕ್ಕೆ ಉತ್ತಮ ಆಮ್ಲಜನಕ ಪಡೆಯಲು ಸಾಧ್ಯ ಎಂದು ಅಫಜಲಪುರ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಹಾಗೂ ಎಚ್‌ಕೆಇ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲ್‌ ಹೇಳಿದರು.

Advertisement

ತಾಲೂಕಿನ ಫಿರೋಜಾಬಾದ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಕಲ್ಯಾಣ ಚಾರಿಟೇಬಲ್‌ ಟ್ರಸ್ಟ್‌ ಉದ್ಘಾಟನೆ, ಪರಿಸರ ದಿನಾಚರಣೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಸರಕಾರಿ ಕನ್ನಡ ಪ್ರೌಢಶಾಲೆಗೆ ನಿವೇಶನಕ್ಕೆ ತಾಂತ್ರಿಕ ತೊಂದರೆಗಳು ಎದುರಾಗಿವೆ. ಶೀಘ್ರದಲ್ಲಿ ಅದನ್ನು ಬಗೆಹರಿಸಿ, ಪೀಠೊಪಕರಣಗಳು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಶರಣು ಪಪ್ಪಾ, ಶರಣಬಸವೇಶ್ವರ ಪದವಿ ಕಾಲೇಜಿನ ಉಪನ್ಯಾಸಕ ನಾನಾಸಾಹೇಬ್‌ ಹಚ್ಚಡದ ಮಾತನಾಡಿದರು. ಇದೇ ವೇಳೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಟ್ರಸ್ಟ್‌ನಿಂದ ಮೆಡಲ್‌ ನೀಡಿ ಸತ್ಕರಿಸಲಾಯಿತು. ಟ್ರಸ್ಟ್‌ ಅಧ್ಯಕ್ಷ ವಿಶ್ವನಾಥ ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿದರು. ಟ್ರಸ್ಟ್‌ ಉಪಾಧ್ಯಕ್ಷ ಯುನೂಸ್‌ ಪಟೇಲ್‌ ಸ್ವಾಗತಿಸಿದರು. ಶಶಿಕಲಾ ಕಟ್ಟಿ ನಿರೂಪಿಸಿದರು.

ಫರಹತಾಬಾದ್‌ ಜಿಪಂ ಮಾಜಿ ಸದಸ್ಯ ದಿಲೀಪ ಆರ್‌. ಪಾಟೀಲ್‌, ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್‌, ಸ್ಥಳೀಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ತಿಬ್ಬಶೆಟ್ಟಿ, ಅಲ್ಪಸಂಖ್ಯಾತರ ಘಟಕದ ಬ್ಲಾಕ್‌ ಅಧ್ಯಕ್ಷ ಖಾಜಾ ಪಟೇಲ್‌, ಯೂಥ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶರಣು ಹಾಗರಗುಂಡಗಿ, ಅರಣ್ಯ ಇಲಾಖೆಯ ಅನ್ಸಾರ್‌ ಪಟೇಲ್‌, ಮುಖ್ಯಗುರು ಅಲ್ಲಾವುದ್ದಿನ್‌ ಮುಖ್ಯ ಅತಿಗಳಾಗಿ ಆಗಮಿಸಿದ್ದರು.

Advertisement

ಸಮಾರಂಭದಲ್ಲಿ ಕಾಂಗ್ರೆಸ್‌ ಯುವ ಮುಖಂಡರಾದ ಬಸವಲಿಂಗ ಹಾಲು, ಸಚಿನ್‌ ಮಾಮನಿ, ನಿವೃತ್ತ ಶಿಕ್ಷಕ ನಾಗಣ್ಣ ಧೂಳಬಾ, ಇಜಾಜ್‌ ಪಟೇಲ್‌, ಬಾಬು ಪವಾಡಿ, ಶಶಿಕಾಂತ ಕೊಡಚಿ, ಉಮೇಶ ಮಾಮನಿ, ರೇವಣಸಿದ್ದಪ್ಪ ಶ್ರೀಗಿರಿ, ಮಹಾದೇವಪ್ಪ ಭರ್ಮಾ, ಬಸವರಾಜ್‌ ಭಜಂತ್ರಿ ಸೇರಿದಂತೆ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next