ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದಾರೆ.
Advertisement
ಕಿಮ್ಸ್ ಕಾಲೇಜಿನ ಆವರಣದಲ್ಲಿ “ಹಸಿರು ಬೆಂಗಳೂರು’ ಧ್ಯೇಯದ ಅಡಿಯಲ್ಲಿ ಅದಮ್ಯ ಚೇತನ ಸಂಸ್ಥೆ ನಡೆಸಿದ 105ನೇ ಹಸಿರುಭಾನುವಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಸ್ಥಿರ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಪರಿಸರ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತಿಂಗಳಿಗೊಂದು ಗಿಡ ನೆಟ್ಟು ಅದನ್ನು ಸಮೃದ್ಧವಾಗಿ ಪೋಷಿಸಲು ಸಂಕಲ್ಪ ತೊಡಬೇಕು. ಜತೆಗೆ ಸಸ್ಯ ಸತ್ಯಾಗ್ರಹ ರೂಪದಲ್ಲಿ ಹಸಿರೀಕರಣ ನಡೆಯಬೇಕು. ಇದಕ್ಕಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಅದರ ಬದಲು ಸ್ಟೀಲ್, ಬಟ್ಟೆ ಬ್ಯಾಗ್‌ಗಳು ಸೇರಿದಂತೆ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಹೆಚ್ಚು ಬಳಸುವ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಟ್ರಸ್ಟ್‌ನ ಡಾ. ತೇಜಸ್ವಿನಿ ಅನಂತಕುಮಾರ್, ಚಿತ್ರನಿರ್ದೇಶಕ ಟಿ.ಎಸ್
ನಾಗಾಭರಣ, ಮಾಜಿ ಶಾಸಕ ರಾಜಶೇಖರ್ ಶೀಲವಂತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.