Advertisement

ನರ್ಸಿಂಗ್‌ ವಿದ್ಯಾರ್ಥಿಗಳ ಪ್ರತಿಭಟನೆ

06:50 PM Apr 16, 2021 | Team Udayavani |

ಹಾಸನ: ನಗರದ ಸರ್ಕಾರಿ ನರ್ಸಿಂಗ್‌ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬನ ಪರೀಕ್ಷಾ ಪತ್ರಿಕೆ ಸ್ಕ್ಯಾನ್‌ ಮಾಡುವ ಸಂದರ್ಭದಲ್ಲಿಉತ್ತರ ಪತ್ರಿಕೆಯ ಬರಹವನ್ನು ಹೊಡೆದುಹಾಕಿರುವ ಪ್ರಾಂಶುಪಾಲರ ವಿರುದ್ಧಕಾನೂನು ಕ್ರಮ ಕೈಗೊಳ್ಳಬೇಕು ಎಂದುಆಗ್ರಹಿಸಿ ತರಗತಿ ಭಹಿಷ್ಕರಿಸಿದ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಕಾಲೇಜುಮುಂದೆ ಪ್ರತಿಭಟನೆ ನಡೆಸಿದರು.

Advertisement

ತೃತೀಯ ವರ್ಷದ ನರ್ಸಿಂಗ್‌ವಿದ್ಯಾರ್ಥಿ ಚನ್ನಯ್ಯ ಹಿರೇಮಠ ಅವರಉತ್ತರ ಪತ್ರಿಕೆಯನ್ನು ದುರುದ್ದೇಶಪೂರ್ವಕವಾಗಿ ಹೊಡೆದು ಹಾಕುವ ಮೂಲಕವಿದ್ಯಾರ್ಥಿ ಅನುತ್ತೀರ್ಣಕ್ಕೆ ಕಾರಣರಾಗಿರುವ ಕಾಲೇಜು ಪ್ರಾಂಶುಪಾಲ ರನ್ನುಬಂಧಿಸಿ ಹಾಗೂ ಫ‌ಲಿತಾಂಶದಲ್ಲಿವಂಚಿತರಾಗಿರುವ ವಿದ್ಯಾರ್ಥಿ ಚನ್ನಯ್ಯಅವರಿಗೆ ನ್ಯಾಯ ಒದಗಿಸಬೇಕೆಂದುಒತ್ತಾಯಿಸಿದರು.ಪ್ರಾಂಶುಪಾಲರ ವಿರುದ್ಧ ಪೊಲೀಸ್‌ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಪ್ರಾಂಶುಪಾಲರನ್ನು ಪೊಲೀಸರುಬಂಧಿಸಲು ಹಿಂದೇಟು ಹಾಕುತ್ತಿದ್ದಾರೆಎಂದು ದೂರಿದ ಪ್ರತಿಭಟನಾಕಾರರು,ನ್ಯಾಯ ಸಿಗುವವರೆಗೂ ನಮ್ಮ ಹೋರಾಟಮುಂದುವರಿಯಲಿದೆ ಎಂದು ಹೇಳಿದರು. ಎಬಿವಿಪಿ ಮುಖಂಡ ಬೊಮ್ಮಣ್ಣ,ಐಶ್ವರ್ಯ, ಅಭಿಷೇಕ್‌, ಬಿಪಿನ್‌,ಮಂಜುನಾಥ್‌, ನಿತಾ, ಅಮೂಲ್‌,ಪ್ರಣವ್‌ ಭಾರಧ್ವಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next