ಕೊಳ್ಳೇಗಾಲ: ಶಿಕ್ಷಕರ ಮತ್ತು ನರ್ಸಿಂಗ್ ಹುದ್ದೆ ಪವಿತ್ರವಾದ ಕೆಲಸವಾಗಿದ್ದು, ಶಿಕ್ಷಣ ಮತ್ತು ಆರೋಗ್ಯವನ್ನು ಸರ್ಕಾರ ಮಾನವ ಸಂಪನ್ಮೂಲ ಅಂಥ ಪರಿಗಣಿಸಿದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.
ನಗರದ ಜೆಎಸ್‌ಎಸ್ ಸಭಾಂಗಣ ದಲ್ಲಿ ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ 15ನೇ ಬ್ಯಾಚ್‌ನ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳು ನೆಂಟಿಗೇಲ್ ತರ ಸೇವೆ ಮಾಡಬೇಕು ಸಹನೆ ಮತ್ತು ತಾಳ್ಮೆ ಎಲ್ಲರಲ್ಲೂ ಇರಬೇಕು. ಭೂಮಿ ಯಷ್ಟೇ ಸಹನೆ ಯನ್ನು ಬೆಳಸಿಕೊಳ್ಳ ಬೇಕು. ಎಲ್ಲಾ ರೋಗಿಗಳನ್ನು ತಾಳ್ಮೆಯಿಂದ ಪರಿಶೀಲಿಸಿ ಜೀವ ಉಳಿಸುವ ಕೆಲಸ ಮಾಡಬೇಕು ಎಂದರು.
ಜ್ಯೋತಿ ಜೀವನದ ಸಂಕೇತ, ಮನುಷ್ಯ ಉಸಿರಿದ್ದಾಗ ಬೆಳಕಾಗಿರುತ್ತದೆ. ಉಸಿರು ಹೋದಾಗ ಕತ್ತಲಾಗುತ್ತದೆ. ಜೀವ ಉಳಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಪ್ರತಿಯೊಬ್ಬರು ಅಧ್ಯಯನ ಮಾಡಬೇಕೆ ಹೊರತು ಜೀವ ತೆಗೆಯುವ ಪ್ರಯತ್ನಕ್ಕೆ ಎಂದೂ ಕೈ ಹಾಕಬಾರದೆಂದು ತಿಳಿಸಿದರು.
ಶ್ರದ್ಧಾಂಜಲಿ: ಕಳೆದ ಗುರುವಾರ ಪಾಕ್‌ನ ಆತ್ಮಾಹುತಿ ಬಾಂಬ್‌ಗ ಮೃತರಾದ ಭಾರತೀಯ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಪ್ರಾಂಶು ಪಾಲ ಶ್ರೀಕಂಠಮೂರ್ತಿ ನೂತನ ನರ್ಸಿಂಗ್ ವಿದ್ಯಾರ್ಥಿಗಳಿಗೆ ನರ್ಸಿಂಗ್ ಶಾಲಾ ಪ್ರತಿಜ್ಞಾ ವಿಧಿ ಬೋಧಿಸಿ ಪ್ರತಿಜ್ಞೆ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಮುದ್ದುವೀರಪ್ಪ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವರುದ್ರಸ್ವಾಮಿ, ಜೆಎಸ್‌ಎಸ್ ಕಾಲೇಜಿನ ಪ್ರಾಂಶು ಪಾಲರಾದ ಪ್ರೊ. ಉಮೇಶ್, ಸರ್ಕಾರಿ ಆಸ್ಪತ್ರೆಯ ಅಧೀಕ್ಷಕಿ ಧನಲಕ್ಷ್ಮೀ, ನರ್ಸಿಂಗ್ ಶಾಲೆಯ ಉಪ ಪ್ರಾಂಶು ಪಾಲರಾದ ರಂಗನಾಯಕಿ, ಸರೋಜಮ್ಮ ಇತರರು ಇದ್ದರು.