Advertisement

ಟ್ಯಾಂಕರ್‌ ಢಿಕ್ಕಿ: ನರ್ಸ್‌ ಸ್ಥಳದಲ್ಲೇ ಸಾವು

02:31 PM Sep 07, 2022 | Team Udayavani |

ಬೆಂಗಳೂರು: ವಾಟರ್‌ ಟ್ಯಾಂಕರ್‌ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಕಿಮ್ಸ್‌ ಆಸ್ಪತ್ರೆಯ ನರ್ಸ್‌ ಮೃತಪಟ್ಟಿರುವ ಘಟನೆ ರಾಜಾಜಿನಗರ ಸಂಚಾರ ಠಾಣೆ ವ್ಯಾಪ್ತಿಯ ಲಗ್ಗೆರೆಯಲ್ಲಿ ನಡೆದಿದೆ.

Advertisement

ಕಿಮ್ಸ್‌ ಆಸ್ಪತ್ರೆಯಲ್ಲಿ ನರ್ಸ್‌ ಆಗಿರುವ, ಲಗ್ಗೆರೆ ನಿವಾಸಿ ಆಶಾ(35) ಮಂಗಳವಾರ ಬೆಳಗ್ಗೆ 10.40 ರ ಸುಮಾರಿಗೆ ಲಗ್ಗೆರೆ ಬಸ್‌ ನಿಲ್ದಾಣದ ಕಡೆಯಿಂದ ತಮ್ಮ ಮನೆಯ ಕಡೆ ಹೋಗುವಾಗ ವೇಗವಾಗಿ ಬಂದ ವಾಟರ್‌ ಟ್ಯಾಂಕರ್‌ ವಾಹನ ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಆಶಾರ ಮೇಲೆ ಟ್ಯಾಂಕರ್‌ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆರೋಪಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವಾಹನ ಮಾಲೀಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next