ಭುವನೇಶ್ವರ್: ಸಿನೆಮಾದ ಮಟ್ಟಿಗೆ ಮಾತ್ರವೇ ಸಾಧ್ಯವಿರುವ ಕೆಲವು ಕೆಲಸಗಳಿರುತ್ತವೆ. ಅವುಗಳನ್ನು ವಾಸ್ತವದಲ್ಲಿ ಸಾಧಿಸಲು ಸಾಧ್ಯವಾಗುವುದಿಲ್ಲ. “3 ಈಡಿಯೆಟ್ಸ್’ ಸಿನೆಮಾದ ಕೊನೇ ಸೀನ್‌ನಲ್ಲಿ ನಾಯಕ ಅಮೀರ್ ಖಾನ್, ನಾಯಕಿ ಕರೀನಾಳ ಅಕ್ಕನಿಗೆ ಹೆರಿಗೆ ಮಾಡಿಸುತ್ತಾನೆ. ಆತ ವೈದ್ಯನಲ್ಲ. ಆದರೆ ಕರೀನಾಗೆ ಕರೆ ಮಾಡಿ ಫೋನ್‌ನಲ್ಲಿ ಆಕೆ ನೀಡುವ ಮಾರ್ಗದರ್ಶನ ಪಾಲಿಸಿದಾಗ ಸುರಕ್ಷಿತ ಹೆರಿಗೆಯಾಗುತ್ತದೆ.
ಅದು ಸಿನೆಮಾ. ಅಲ್ಲಿ ಅಸಾಧ್ಯವೆಂಬುದು ಏನೂ ಇಲ್ಲ. ಆದರೆ “3 ಈಡಿಯೆಟ್ಸ್’ ರೀತಿ ಯ ಪ್ರಯತ್ನಕ್ಕೆ ಕೈಹಾಕಿದ ಒಡಿಶಾದ ಖಾಸಗಿ ಆಸ್ಪತ್ರೆಯೊಂದರ ನರ್ಸ್‌ಗಳು ಹಸುಳೆಯೊಂದರ ಸಾವಿಗೆ ಕಾರಣರಾಗಿದ್ದಾರೆ.
ಇದು ನಡೆದಿರುವುದು ಒಡಿಶಾದ ಕೇಂದ್ರಪರಾ ಜಿಲ್ಲೆಯ ಸಾಯಿ ಆಸ್ಪತ್ರೆಯಲ್ಲಿ. ಆರತಿ ಸ್ಯಾಮುಯೆಲ್ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪತಿ ಕಲ್ಪತರು ಜತೆ ಆಸ್ಪತ್ರೆಗೆ ಬಂದಿದ್ದರು. ಆದರೆ ಆರತಿ ಅವರ ಹೆರಿಗೆ ಮಾಡಿಸಬೇಕಿದ್ದ ಡಾ| ರಷ್ಮಿàಕಾಂತ್ ಆಸ್ಪತ್ರೆಯಲ್ಲಿರಲಿಲ್ಲ. ವೈದ್ಯರು ಬರುವವರೆಗೆ ಕಾಯುವಷ್ಟು ತಾಳ್ಮೆ ಇರದ ನರ್ಸ್‌ಗಳು, ವೈದ್ಯರಿಗೆ ಕರೆ ಮಾಡಿ, “3 ಈಡಿ ಯೆಟ್ಸ್’ ಚಿತ್ರದ ಮಾದರಿಯಲ್ಲಿ ಫೋನ್‌ನಲ್ಲಿ ಅವರು ನೀಡಿದ ಮಾರ್ಗ ದರ್ಶನದಂತೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾಗಿದ್ದು, ಮಗು ಸಾವನ್ನ ಪ್ಪಿದೆ. ಆರತಿ ಅವರು ಮಗುವನ್ನು ಕಳೆದು ಕೊಂಡಿದ್ದಷ್ಟೇ ಅಲ್ಲದೆ, ಅವರ ಗರ್ಭಕೋಶಕ್ಕೂ ಹಾನಿಯಾ ಗಿದೆ. ದಾದಿಯರ ಬೇಜವಾಬ್ದಾರಿ ಯಿಂದ ಕೋಪಗೊಂಡ ಕಲ್ಪತರು, ಮಗುವಿನ ಮೃತ ದೇಹದೊಂದಿಗೆ ಪೊಲೀಸ್ ಠಾಣೆಗೆ ತೆರಳಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.