Advertisement

ಏನಿದು ನೋರೋ ವೈರಸ್‌?ರೋಗ ಲಕ್ಷಣಗಳೇನು, ತಡೆಗಟ್ಟುವುದು ಹೇಗೆ

01:26 PM Jun 06, 2022 | Team Udayavani |

ಕೇರಳದ ಇಬ್ಬರು ಮಕ್ಕಳಲ್ಲಿ ನೋರೋವೈರಸ್‌  ಎಂಬ ರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ಆ ಮಕ್ಕಳಲ್ಲಿ ವಾಂತಿ, ಭೇದಿ, ಜ್ವರ ಕಾಣಿಸಿಕೊಂಡಿದೆ. ಹಾಗಾದರೆ, ಏನಿದು ನೋರೋವೈರಸ್‌? ಜನರಲ್ಲಿ ವೇಗವಾಗಿ ಹಬ್ಬಲಿದೆಯೇ? ಎಂಬ ಮಾಹಿತಿ ಇಲ್ಲಿದೆ.

Advertisement

ನೋರೋವೈರಸ್‌ ಎಂಬ ಮಾರಿ

ಸದ್ಯ ಇಡೀ ದೇಶದಲ್ಲಿ ಕೇರಳದ ಇಬ್ಬರು ಮಕ್ಕಳಲ್ಲಿ ಬಿಟ್ಟರೆ ಉಳಿದ ಯಾರಲ್ಲೂ ಕಂಡು ಬಂದಿಲ್ಲ. ಇದನ್ನು ಹೊಟ್ಟೆನೋವಿನ ರೋಗ ಅಥವಾ ಚಳಿಗಾಲದ ವಾಂತಿ ಕಾಯಿಲೆ ಎಂದು ಕರೆಯಲಾಗುತ್ತದೆ. ಇದು ಕಲುಷಿತ ಆಹಾರ, ನೀರು ಮತ್ತು ನೆಲದ ಮೇಲ್ಮೆ„ಯಿಂದ ಬರುತ್ತದೆ. ಬಾಯಿಯ ಮೂಲಕವೇ ಈ ವೈರಸ್‌ ದೇಹ ಪ್ರವೇಶಿಸುತ್ತದೆ. ಇದು ರೋಟೋವೈರಸ್‌ ನಂತೆಯೇ ಇದ್ದು, ಎಲ್ಲ ವಯೋಮಾನದವರಲ್ಲೂ ಕಾಣಿಸಿಕೊಳ್ಳಬಹುದು.

ಎಲ್ಲೆಲ್ಲಿ ಹರಡುತ್ತದೆ?

ಕ್ರೂéಸ್‌ ಶಿಪ್‌ಗ್ಳು, ನರ್ಸಿಂಗ್‌ ಹೋಮ್‌ಗಳು, ಡಾರ್ಮಿಟರೀಸ್‌ ಮತ್ತು ಇತರ ಮುಚ್ಚಿದ ಪ್ರದೇಶಗಳಲ್ಲಿ ಈ ವೈರಸ್‌ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಇದು ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ರೋಗವಾಗಿದ್ದು, ಪೌಷ್ಟಿಕಾಂಶ ಕೊರತೆ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ದೀರ್ಘ‌ ಕಾಲದ ವರೆಗೆ ಕಾಟ ಕೊಡಬಹುದು.

Advertisement

ಲಕ್ಷಣಗಳೇನು?

ವೈರಸ್‌ ದೇಹವನ್ನು ಪ್ಪವೇಶಿಸಿದ ಎರಡು ದಿನಗಳ ಬಳಿಕ ಭೇದಿ, ವಾಂತಿ ಕಾಣಿಸಿಕೊಳ್ಳುತ್ತದೆ. ರೋಗಿಗಳಲ್ಲಿ ಹೊಟ್ಟೆನೋವು, ಜ್ವರ, ತಲೆನೋವು ಮತ್ತು ಮೈಕೈ ನೋವು ಇರುತ್ತದೆ. ಇದರಿಂದ ದೇಹದಲ್ಲಿ ನೀರಿನ ಅಂಶವೂ ಕಡಿಮೆಯಾಗಬಹುದು.

ತಡೆಗಟ್ಟುವುದು ಹೇಗೆ?

ಆಗಾಗ ಕೈತೊಳೆಯುವುದು, ಮಕ್ಕಳಾಗಿದ್ದರೆ ಪದೇ ಪದೆ ಡೈಪರ್‌ ಬದಲಾವಣೆ ಮಾಡುವುದು, ಅಡುಗೆ ಮಾಡುವ ಮುನ್ನ ಸರಿಯಾಗಿ ಕೈತೊಳೆದುಕೊಳ್ಳುವುದು.

ಈ ರೋಗ ಕಾಣಿಸಿಕೊಂಡ ಮೂರು ದಿನಗಳಲ್ಲೇ ಕಡಿಮೆಯಾಗುತ್ತದೆ. ಆದರೆ ಮಕ್ಕಳು, ವೃದ್ಧರಲ್ಲಿ ಕಂಡು ಬಂದರೆ, ಒಂದಷ್ಟು ಎಚ್ಚರಿಕೆಯಿಂದ ಇರುವುದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next