Advertisement

ನರ್ಮ್ ಬಸ್‌; ಆದೇಶ ತೆರವಿಗೆ ಕಾರ್ಯತಂತ್ರ: ಪ್ರಮೋದ್‌

03:45 AM Jul 09, 2017 | Team Udayavani |

ಉಡುಪಿ: ಉಡುಪಿಗೆ ಮಂಜೂರಾದ 55 ಜೆನರ್ಮ್ ಬಸ್ಸುಗಳ ಪೈಕಿ 30 ಬಸ್‌ ಕಾರ್ಯನಿರ್ವಹಿಸುತ್ತಲಿದೆ. ಖಾಸಗಿ ಬಸ್ಸು ಮಾಲಕರ ಸಂಘದವರು ಹೈಕೋರ್ಟಿನ ಏಕಸದಸ್ಯ ಪೀಠದಿಂದ ಪರ್ಮಿಟ್‌ ಸಸ್ಪೆಂಡ್‌ ಮಾಡಿಸಿದ ಆದೇಶ ತಂದಿದ್ದಾರೆ. ಆ ಆದೇಶ ತೆರವಿಗೆ ಕಾರ್ಯತಂತ್ರವನ್ನು ಮಾಡಿದ್ದೇವೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.
ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ಬಳಿಕ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೇವೆ. ಸರಕಾರದ ಪರ ಖ್ಯಾತ ವಕೀಲ ಹಾರನಹಳ್ಳಿ ಅಶೋಕ್‌ ಅವರನ್ನು ನೇಮಕ ಮಾಡಲಾಗಿದೆ. ಉಡುಪಿ ನಗರದೊಳಗೆ ಸಂಚರಿಸುತ್ತಿರುವ 12 ಜೆನರ್ಮ್ ಸಿಟಿ ಬಸ್ಸುಗಳಿಗೆ ಆ ಆದೇಶ ಅನ್ವಯಿಸುವುದಿಲ್ಲ. ಉಳಿದಂತೆ ತಾತ್ಕಾಲಿಕ ಪರವಾನಿಗೆಯ ಮೂಲಕ ಸರಕಾರಿ ಬಸ್ಸುಗಳು ಕಾರ್ಯಾಚರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Advertisement

ಖಾಸಗಿ ರೂಲ್ಸ್‌  ಬ್ರೇಕ್‌ಗೆ ಕ್ರಮ
ಖಾಸಗಿ ಬಸ್ಸಿನವರು ನಿಯಮಗಳನ್ನು ಉಲ್ಲಂ ಸಿ ಏನೆಲ್ಲ ಕಾರ್ಯ ಮಾಡುತ್ತಿದ್ದಾರೆ ಅದನ್ನು ಪತ್ತೆ ಮಾಡಿ ದಂಡ ವಿಧಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾರ್ಯಾಚರಣೆಗೆ ವಾರ ಸಾಕಾಗೋದಿಲ್ಲ, ಬದಲಾಗಿ ಮಾಸಾಚರಣೆಯನ್ನೇ ನಡೆಸಬೇಕು ಎಂದು ಹೇಳಿದ್ದೇನೆ ಎಂದರು.

ಮರಳು ಸಮಸ್ಯೆ ಬಗೆಹರಿಯಲಿದೆ
ಮರಳುಗಾರಿಕೆಗೆ ಸಂಬಂಧಿಸಿ ಸಿಆರ್‌ಝೆಡ್‌ನ‌ಲ್ಲಿ ಮುಂದಕ್ಕೆ ಹೊಸ ಪರ್ಮಿಟ್‌ ಕೊಡುವಾಗ ಕಾನೂನು ಪ್ರಕಾರ ನಿಯಮಾವಳಿ ಪಾಲಿಸುತ್ತೇವೆ. ಜಿಲ್ಲೆಯ ಮರಳು ಹೊರಜಿಲ್ಲೆಗೆ ಸಾಗಾಟವಾಗದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆ. 1ರಿಂದ ಮರಳಿನ ಸಮಸ್ಯೆ ಬಗೆಹರಿಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next