Advertisement

ನಂಬರ್‌ ಪ್ಲೇಟ್‌ ದೋಷಕ್ಕೆ ಸಂಚಕಾರ

04:59 PM Dec 08, 2017 | |

ಬೆಂಗಳೂರು: ನಿಮ್ಮ ಬೈಕ್‌ ಅಥವಾ ಕಾರಿನ ನಂಬರ್‌ ಪ್ಲೇಟ್‌ ಮೇಲೆ “ಹಿತಶತ್ರು’, “ದೇವರ ಆಶೀರ್ವಾದ’ “ತಂದೆ, ತಾಯಿ ಕೃಪೆ’ ಸ್ನೇಹ, ಪ್ರೀತಿ ಹಾಗೂ ಫ್ಯಾನ್ಸಿ ನಂಬರ್‌ಗಳನ್ನು ಬರೆಸಿಕೊಂಡಿದ್ದೀರಾ. ಹಾಗಾದರೆ ಕೂಡಲೇ ಅವುಗಳನ್ನು ತೆಗೆಸುವುದು ಒಳಿತು.

Advertisement

ಇಲ್ಲವಾದರೆ ನಗರ ಸಂಚಾರ ಪೊಲೀಸರು ನಿಮ್ಮ ವಾಹನದ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುತ್ತಾರೆ. ಫ್ಯಾನ್ಸಿ ನಂಬರ್‌ ಹಾಗೂ ಅಕ್ಷರಗಳನ್ನು ಹಾಕಿಕೊಂಡು ಅಬ್ಬರಿಸುವ ವಾಹನಗಳಿಗೆ ಇದೀಗ ಸಂಚಾರ ಪೊಲೀಸರು ಬ್ರೇಕ್‌ ಹಾಕಲು ಸಜ್ಜಾಗಿದ್ದಾರೆ.

ಈಗ ಯಾವುದೇ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಫ್ಯಾನ್ಸಿ ಸಂಖ್ಯಾಫ‌ಲಕಗಳನ್ನು ಹಾಕಿಕೊಳ್ಳುವಂತಿಲ್ಲ ಎಂದು ಆದೇಶಿಸಿರುವ ಸಾರಿಗೆ ಇಲಾಖೆ ಪ್ರತ್ಯೇಕ ಮಾರ್ಗ ಸೂಚಿಯನ್ನು ಹೊರಡಿಸಿದೆ.

ಹೀಗಾಗಿ ಕಳೆದ ನಾಲ್ಕು ತಿಂಗಳಲ್ಲಿ ದೋಷಯುಕ್ತ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಿಕೊಂಡಿದ್ದ ವಾಹನಗಳ ವಿರುದ್ಧ 97 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ 97 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಸಂಘಟನೆಗಳು, ಸಂಘಟನೆಗಳ ಕಾರ್ಯಕರ್ತರು ತಮ್ಮ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ಸಂಘಟನೆ ಹೆಸರು ಹಾಗೂ ಹುದ್ದೆಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಜತೆಗೆ ರೇಡಿಯಂ ಸ್ಟಿಕರ್‌ಗಳ ಮೂಲಕ ವಿಚಿತ್ರ ಹೆಸರುಗಳು, ಕವನಗಳು ಹಾಗೂ ವಾಕ್ಯಗಳನ್ನು ಬರೆಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ವ್ಯಕ್ತಿಗಳು ಇಂತಹ ವಾಹನಗಳನ್ನೆ ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ವಾಹನಗಳ ನಂಬರ್‌ಗಳು ಸಿಸಿಟಿವಿ ದೃಶ್ಯಾವಳಿಯಲ್ಲಿ ಇರಲಿ, ನೇರವಾಗಿಯೂ ಪತ್ತೆ ಹಚ್ಚುವುದು ಕಷ್ಟ. 

Advertisement

ಅಲ್ಲದೇ, ಸರ್ಕಾರಿ ಇಲಾಖೆಗಳಿಗೆ ಗುತ್ತಿಗೆ ಆಧಾರದ ಮೇಲೆ ಸೇವೆ ಒದಗಿಸುವ ವಾಹನಗಳ ಮಾಲೀಕರು, ಇದೇ ವಾಹನಗಳನ್ನು ಬಳಸಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಉದಾಹರಣೆಗಳು ಬಹಳಷ್ಟಿವೆ. ಈ ಸಂಬಂಧ ಕೆಲ ಸಂಘಟನೆಗಳು ಹಾಗೂ ಅಪರಾಧ ವಿಭಾಗದ ಪೊಲೀಸರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸರ್ಕಾರ ಅಥವಾ ಸರ್ಕಾರಿ ಅಧಿಕಾರಿಯ ಹೆಸರಿನಲ್ಲಿ ನೊಂದಾಯಿಸಿದ ವಾಹನಗಳು ಮಾತ್ರ ತಮ್ಮ ನಂಬರ್‌ ಪ್ಲೇಟ್‌ಗಳ ಮೇಲ್ಭಾಗದಲ್ಲಿ ಹುದ್ದೆ ಅಥವಾ ಇಲಾಖೆಯ ಹೆಸರು ಹಾಕಿಕೊಳ್ಳಲು ಅವಕಾಶವಿದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡಕ್ಕಿಲ್ಲ ಸ್ಥಾನ ಸಾರಿಗೆ ಇಲಾಖೆಯ ಹೊಸ ಆದೇಶದಲ್ಲಿ ವಾಹನಗಳ ಸಂಖ್ಯಾಫ‌ಲಕಗಳಲ್ಲಿ ಕನ್ನಡಕ್ಕೆ ಸ್ಥಾನವಿಲ್ಲ. ಏಕೆಂದರೆ ಕ್ಷಣಾರ್ಧದಲ್ಲಿ ಕನ್ನಡದ ಅಂಕಿಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಅಲ್ಲದೇ ನೆರೆ ರಾಜ್ಯಗಳಿಗೆ ವಾಹನಗಳು
ಹೋದರೆ ಅಲ್ಲಿನ ಸಾರಿಗೆ ಮತ್ತು ಸಂಚಾರ ವಿಭಾಗದ ಪೊಲೀಸರಿಗೆ ಅಕ್ಷರ ಮತ್ತು ಸಂಖ್ಯೆಗಳನ್ನು ಗುರುತಿಸು ವುದು ಕಷ್ಟ ಸಾಧ್ಯ ಎಂಬ ಉದ್ದೇಶದಿಂದ ಇಂಗ್ಲಿಷ್‌ ಅಕ್ಷರಕ್ಕೆ ಆದ್ಯತೆ ನೀಡಲಾಗಿದೆ. ಸರ್ಕಾರದ ಆದೇಶದನ್ವಯ ನಂಬರ್‌
ಪ್ಲೇಟ್‌ಗಳಲ್ಲಿ ಸಂಖ್ಯೆ ಮತ್ತು ಅಕ್ಷರಗಳನ್ನು ಸ್ಪಷ್ಟವಾಗಿ ಕಾಣುವಂತೆ ಹಾಕಿಕೊಳ್ಳಬೇಕು. ಸ್ಟಿಕರ್‌ ಬಳಕೆ ಮಾಡುವಂತಿಲ್ಲ. ಹೀಗಾಗಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೇವೆ.
 ● ಹಿತೇಂದ್ರ, ಸಂಚಾರ ವಿಭಾಗದ ಹೆಚ್ಚುವರಿ ಆಯುಕ

ಸಂಖ್ಯಾಫ‌ಲಕಗಳುಎಲ್ಲಿರಬೇಕು?
ಮೋಟಾರು ವಾಹನಗಳ ಮುಂಭಾಗ ಹಾಗೂ ಹಿಂಭಾಗದ ಪ್ಲೇಟ್‌ಗಳಲ್ಲಿ ಸ್ಪಷ್ಟವಾಗಿ ಓದುವಂತಿರಬೇಕು.

„ ಮೋಟಾರ್‌ ಸೈಕಲ್‌ಗ‌ಳ
ಮುಂಭಾಗದ ಜತೆಗೆ ಹ್ಯಾಂಡಲ್‌ ಬಾರ್‌ ಅಥವಾ ಮಡ್‌ಗಾರ್ಡ್‌ ಮತ್ತಿತರ ಭಾಗಗಳಲ್ಲಿ ನಂಬರ್‌ ಪ್ಲೇಟ್‌
ಅಳವಡಿಸಬಹುದು.

„ ಸಾರಿಗೆ ವಾಹನಗಳಿಗೆ ಬಲಭಾಗದಲ್ಲಿ ತಳಮಟ್ಟದಿಂದ ಒಂದು ಮೀಟರ್‌ ಎತ್ತರ ಮೀರದಂತೆ ನಂಬರ್‌ ಪ್ಲೇಟ್‌ ಇರಬೇಕು. ಹಿಂಬದಿಯು ಇರಬೇಕು „ ಸ್ಟೇಜ್‌ ಕ್ಯಾರೇಜ್‌ ಮತ್ತು ಕಾಂಟ್ರಾಕ್ಟ್ ಕ್ಯಾರೆಜ್‌ ವಾಹನಗಳಿಗೆ ಮುಂಭಾಗ
ಮತ್ತು ಹಿಂಭಾಗದಲ್ಲಿ ಸಂಖ್ಯೆಗಳನ್ನು ನೊಂದಾಯಿಸುವುದರ ಜತೆಗೆ ಚಾಲಕ ಮತ್ತು ಪ್ರಯಾಣಿಕರ ನಡುವೆ ಇರುವ
ಜಾಗದಲ್ಲಿ ಅಥವಾ ವಾಹನದ ಒಳಗಡೆ ಎಡಭಾಗದಲ್ಲಿ ಪ್ರಯಾಣಿಕರಿಗೆ ಕಾಣುವಂತೆ ನೊಂದಣಿ ಸಂಖ್ಯೆಗಳನ್ನು
ಬರೆಸಬೇಕು. „ ಕಾರು ಅಥವಾ ಮ್ಯಾಕ್ಸಿ ಕ್ಯಾಬ್‌ ಗಳಲ್ಲಿ ಡ್ಯಾಶ್‌ ಬೋರ್ಡ್‌ನಲ್ಲಿ ನೊಂದಾಯಿಸಬೇಕು.

ವ್ಯಾಪಾರಕ್ಕೆ ಕತ್ತರಿ ಸಾರಿಗೆ ಇಲಾಖೆಯ ಹೊಸ ಆದೇಶದಿಂದ ವಾಹನಗಳಿಗೆ ರೇಡಿಯಂ ಸ್ಟಿಕರ್‌ಗಳನ್ನು ಅಳವಡಿ ಸುವ ಕಲಾವಿದರ (ಸ್ಟಿಕರ್‌ ಕಲಾವಿದರು) ವ್ಯಾಪಾರಕ್ಕೆ ಕತ್ತರಿ ಬೀಳಲಿದೆ. ಈ ಕಲಾವಿದರಿಗೆ ವಾಹನಗಳ ಮೇಲೆ ಫ್ಯಾನ್ಸಿ ಅಕ್ಷರಗಳು ಹಾಗೂ ಸಂಖ್ಯೆಗಳನ್ನು ಬರೆಸಿಕೊಳ್ಳುವವ ರಿಂದಲೇ ಹೆಚ್ಚು ವ್ಯಾಪಾರ ನಡೆಯುತ್ತಿತ್ತು. ಇದೀಗ
ಅದಕ್ಕೂ ಸಾರಿಗೆ ಇಲಾಖೆ ಕತ್ತರಿ ಹಾಕಲಿದೆ.

ಸಂಖ್ಯಾಫ‌ಲಕ ಅಳತೆ
ಎಲ್ಲ ಮಾದರಿಯ ಮೋಟಾರು ವಾಹನಗಳು ಎತ್ತರ 65, ದಪ್ಪ 10, ಸ್ಪೇಸ್‌ 10 (ಎಂ.ಎಂ. ಗಳಲ್ಲಿ)

„ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ- 200*100 ಎಂಎಂ(ಮುಂಭಾಗ)

„ ಪ್ರಯಾಣಿಕರ ಕಾರು-340200 ಎಂಎಂ
ಅಥವಾ 500*120

„ ವಾಣಿಜ್ಯ ವಾಹನಗಳು(ಮಧ್ಯಮ ಮತ್ತು ಭಾರೀ ವಾಹನ) 340*200ಎಂಎಂ

„ ದ್ವಿಚಕ್ರ ಮತ್ತು ತ್ರಿಚಕ್ರ (ಸಾರಿಗೆಗೆ ಅನರ್ಹವಾದ) -ಹಿಂಭಾಗ ಎತ್ತರ 35, ದಪ್ಪ 7, ಸ್ಪೇಸ್‌ 5(ಅಕ್ಷರಗಳು)

„ ದ್ವಿಚಕ್ರ ಮತ್ತು ತ್ರಿಚಕ್ರ(ಸಾರಿಗೆಗೆ ಅನರ್ಹವಾದ)-ಹಿಂಭಾಗ ಎತ್ತರ 40, ದಪ್ಪ 7, ಸ್ಪೇಸ್‌ 5(ಸಂಖ್ಯೆಗಳು)

„ 70 ಸಿಸಿ ದ್ವಿಚಕ್ರ ವಾಹನ-ಎತ್ತರ 15, ದಪ್ಪ 2.5 ಮತ್ತು ಸ್ಪೇಸ್‌ 2.5 „ ದ್ವಿಚಕ್ರ ಮತ್ತು ತ್ರಿಚಕ್ರ(ಸಾರಿಗೆಗೆ ಅನರ್ಹ
ವಾದ)-ಮುಂಭಾಗ ಎತ್ತರ 30, ದಪ್ಪ 5, ಸ್ಪೇಸ್‌ 5(ಅಂಕಿ ಮತ್ತು ಸಂಖ್ಯೆಗಳು)

„ 500 ಸಿಸಿ ಒಳಗಿನ ತ್ರಿಚಕ್ರ ವಾಹನ- ಎತ್ತರ 35, ದಪ್ಪ 7 ಸ್ಪೇಸ್‌ 5(ಎಂಎಂ)

„ 500 ಸಿಸಿ ಮೇಲ್ಪಟ್ಟ ತ್ರಿಚಕ್ರ ವಾಹನ- ಎತ್ತರ 40, ದಪ್ಪ 7 ಸ್ಪೇಸ್‌ 5 (ಎಂಎಂ)

ಕ್ರಮಬದ್ಧ ಫ‌ಲಕಗಳು ಸಾರಿಗೆ ಇಲಾಖೆ ನಿಗದಿ ಪಡಿಸಿದಂತೆ ವಾಹನಗಳ ಮುಂಭಾಗ, ಹಿಂಭಾಗದ ನಂಬರ್‌ ಪ್ಲೇಟ್‌ಗಳ ಗಾತ್ರ ಇರಬೇಕು. „ ಫ್ಯಾನ್ಸಿ ಅಕ್ಷರಗಳಿಗೆ ಅವಕಾಶವಿಲ್ಲ. ಹೆಸರು, ಚಿತ್ರಗಳನ್ನು ಬರೆಸಿಕೊಳ್ಳುವಂತಿಲ್ಲ.

„ ದ್ವಿಚಕ್ರ ವಾಹನ, ಬಿಳಿ ಬಣ್ಣದ ಪ್ಲೇಟ್‌ ಮೇಲೆ ಕಪ್ಪು ಬಣ್ಣದ ಸಂಖ್ಯೆಗಳು ಕಾಣುವಂತಿರಬೇಕು.

„ ನಾಲ್ಕು ಚಕ್ರದ ವಾಹನ, ಹಳದಿ ಬಣ್ಣದ ಪ್ಲೇಟ್‌ ಮೇಲೆ ಕಪ್ಪು ಬಣ್ಣದ ಸಂಖ್ಯೆ(ವಾಣಿಜ್ಯ ಉದ್ದೇಶಕ್ಕೆ)

Advertisement

Udayavani is now on Telegram. Click here to join our channel and stay updated with the latest news.

Next