Advertisement

2017ರಲ್ಲಿ ನೇಮಕಗೊಂಡ ಉಗ್ರರು 71, ಹತರಾದ ಉಗ್ರರು 132: ವರದಿ

03:18 PM Aug 21, 2017 | Team Udayavani |

ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಈ ವರ್ಷ ನೇಮಕಗೊಂಡ ಉಗ್ರರ ಸಂಖ್ಯೆಗಿಂತಲೂ ಹೆಚ್ಚು ಸಂಖ್ಯೆಯ ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಹತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. 

Advertisement

2017ರಲ್ಲಿ ಉಗ್ರ ಸಂಘಟನೆಗಳಿಂದ ನೇಮಕಗೊಂಡ ಉಗ್ರರ ಸಂಖ್ಯೆ 71; ಭದ್ರತಾ ಪಡೆಗಳ ಕೈಯಲ್ಲಿ ಹತರಾದ ಉಗ್ರರ ಸಂಖ್ಯೆ 132 ಎಂದು ವರದಿ ಹೇಳಿದೆ. 

ಹತರಾದ 132 ಉಗ್ರರ ಪೈಕಿ ವಿದೇಶೀ ಉಗ್ರರು 74; ಸ್ಥಳೀಯ ಉಗ್ರರು 58. ಈ ಸ್ಥಳೀಯ ಉಗ್ರರಲ್ಲಿ 14 ಮಂದಿ ಉನ್ನತ ಹಿಜ್‌ಬುಲ್‌ ಮುಜಾಹಿದೀನ್‌, ಅಲ್‌ ಬದ್‌ರ್‌ ಮತ್ತು ಲಷ್ಕರ್‌ ಎ ತಯ್ಯಬ ಕಮಾಂಡರ್‌ಗಳು ಸೇರಿದ್ದಾರೆ ಎಂದು ಟೈಮ್ಸ್‌ ಆಫ್ ಇಂಡಿಯಾ ಪ್ರಕಟಿಸಿರುವ ವರದಿ ತಿಳಿಸಿದೆ. 

ಹತರಾದ ಉಗ್ರರಲ್ಲಿ ಇಬ್ಬರು ಎ++ ವರ್ಗದವರು, ನಾಲ್ವರು ಎ+ ವರ್ಗದವರು ಮತ್ತು ಎಂಟು ಮಂದಿ ಎ ವರ್ಗದವರಾಗಿದ್ದಾರೆ ಎಂದು ವರದಿ ಹೇಳಿದೆ. 

2017ರಲ್ಲಿ ಹತರಾದ 14 ಉನ್ನತ ಉಗ್ರರಲ್ಲಿ ಒಬ್ಟಾತನು ಮೋಸ್ಟ್‌ ವಾಂಟೆಡ್‌ ಅಲ್‌ ಬದ್‌ರ್‌ ನಾಯಕನಾಗಿದ್ದು ಆತನು ಸೋಪೋರ್‌ ಮತ್ತು ಸುತ್ತ ಮುತ್ತಲ ಪ್ರದೇಶದಲ್ಲಿ ಕ್ರಿಯಾಶೀಲನಾಗಿದ್ದ. ಇನ್ನು ಐವರು ಲಷ್ಕರ್‌ ಎ ತಯ್ಯಬ ಇದರ ಉನ್ನಡ ಕಮಾಂಡರ್‌ಗಳಾಗಿದ್ದು ಅವರಲ್ಲಿ ಮೊಹಮ್ಮದ್‌ ಅಯೂಬ್‌ ಲೋನ್‌, ಮೊಹಮ್ಮದ್‌ ಶಫಿ ಶೇರ್‌ ಗುಜ್ರಿ, ಮುದಸ್ಸೀರ್‌ ಅಹ್ಮದ್‌, ಜುನೇದ್‌ ಅಹ್ಮದ್‌ ಮತ್ತು ಬಶೀರ್‌ ಅಹ್ಮದ್‌ ವಾನಿ ಸೇರಿದ್ದಾರೆ. 

Advertisement

ಭದ್ರತಾ ಪಡೆಗಳು ಈ ವರ್ಷ ಗುಂಡಿಟ್ಟು ಸಾಯಿಸಿರುವ ಉನ್ನತ ಹಿಜ್‌ಬುಲ್‌ ಉಗ್ರರಲ್ಲಿ ಗುಲ್‌ಜಾರ್‌ ಅಹ್ಮದ್‌ ಲೋನ್‌ (ಸೋಪೋರ್‌ನಿಂದ ನೇಮಕಗೊಂಡ ಉಗ್ರ), ಮೊಹಮ್ಮದ್‌ ಇಷಾಕ್‌ ಭಟ್‌ (ಬುರ್ಹಾನ್‌ ವಾನಿಯ ಸಹವರ್ತಿ), ಆಕಿಬ್‌ ಅಹ್ಮದ್‌ ಭಟ್‌ (ತ್ರಾಲ್‌, ಆವಂತಿಪುರದಲ್ಲಿ  ಹಿಂಸೆಯನ್ನು ಪ್ರಚೋದಿಸಿದಾತ), ಆದಿಲ್‌ ಅಹ್ಮದ್‌ ರೇಶೀ ಮತ್ತು ಮುದಸ್ಸೀರ್‌ ಅಹ್ಮದ್‌ ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next