ಜಲಾಲಾಬಾದ್(ಅಫ್ಘಾನಿಸ್ತಾನ): ಐಸಿಸ್ ಉಗ್ರರ ಅಡಗುದಾಣಗಳ ಮೇಲೆ ಅಮೆರಿಕ ಗುರುವಾರ ನಡೆಸಿದ “ಮದರ್ ಬಾಂಬ್’ ದಾಳಿಯಲ್ಲಿ ಸಾವನ್ನಪ್ಪಿದ್ದ ಉಗ್ರರ ಸಂಖ್ಯೆ 90ಕ್ಕೆ ಏರಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಜಿಬಿಯು-43/ಬಿ ಮಾದರಿಯ ಅತಿ ದೊಡ್ಡ ಸಾಂಪ್ರದಾಯಿಕ ಬಾಂಬ್ ಅನ್ನು ನಂಗರ್‌ಹಾರ್ ಪ್ರಾಂತ್ಯದ ಅಚಿನ್ ಜಿಲ್ಲೆಯ ಮೊಮಂದ್ ದಾರಾ ಪ್ರದೇಶದ ಅಡಗುತಾಣಗಳ ಮೇಲೆ ಹಾಕಲಾಗಿತ್ತು. ಬಾಂಬ್ ದಾಳಿಯಲ್ಲಿ ನಾಗರಿಕರಿಗೆ ಯಾವುದೇ ಅಪಾಯವಾಗಿಲ್ಲ. ಐಸಿಸ್ ಉಗ್ರರ ಸುರಂಗಗಳು ನಾಶವಾಗಿದ್ದು, 36 ಮಂದಿ ಮೃತಪಟ್ಟಿದ್ದರು ಎಂದು ಆಫ್ಘನ್ ರಕ್ಷಣಾ ಸಚಿವಾಲಯ ನಿನ್ನೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿತ್ತು.
ಬಾಂಬ್ ದಾಳಿಯಲ್ಲಿ ಕನಿಷ್ಠ 92 ಮಂದಿ ಸಾವನ್ನಪ್ಪಿರುವುದಾಗಿ ಆಚಿನ್ ಜಿಲ್ಲಾ ಗವರ್ನರ್ ಇಸ್ಮಾಯಿಲ್ ಶಿನ್ವಾರಿ ಎಎಫ್ ಪಿ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.