ಸಿದ್ದಾಪುರ: ಇಂಗ್ಲಿಷ್ ವ್ಯಾಮೋಹ ಹೆಚ್ಚಾದ ಪರಿಣಾಮ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಮಾಧ್ಯಮದ ಜತೆಯಲ್ಲಿ ಇಂಗ್ಲಿಷ್ ಕಲಿಸಿದಾಗ ಸರಕಾರಿ ಶಾಲೆಗಳು ಉಳಿಯುತ್ತದೆ. ಮಕ್ಕಳು ವ್ಯಕ್ತಿಯಾಗಿ ರೂಪುಗೊಳ್ಳಬೇಕಾದರೆ ಸರಕಾರಿ ಶಾಲೆಗಳು ಉಳಿಯಬೇಕು ಎಂದು ಉಳ್ಳೂರು ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಪಿಗೇಡಿ ಸಂಜೀವ ಶೆಟ್ಟಿ ಹೇಳಿದರು.
ಉಳ್ಳೂರು-74 ಗ್ರಾಮದ ಬಂಟಕೋಡು ಅಂಗನವಾಡಿ ಕೇಂದ್ರದಲ್ಲಿ ಫೆ. 6ರಂದು ಬೆಳ್ಳಿಹಬ್ಬ ಮತ್ತು ಅಂಗನವಾಡಿ ಯಲ್ಲಿ ಇಂಗ್ಲಿಷ್ ಶಿಕ್ಷಣ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.
ಉಳ್ಳೂರು-74 ಗ್ರಾ.ಪಂ. ಅಧ್ಯಕ್ಷೆ ಭಾರತಿ ಕೋಟಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ರೋಹಿತ್‌ಕುಮಾರ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷೆ ಗಿರಿಜಾ ಲಕ್ಷ್ಮಣ ನಾಯ್ಕ, ಸದಸ್ಯರಾದ ಯು. ಸುಧಾಕರ ಶೆಟ್ಟಿ, ಪ್ರಸಾದ್ ಶೆಟ್ಟಿ ಕಟ್ಟಿನಬೈಲು, ಸಂತೋಷ್ ಪೂಜಾರಿ, ಶಾಂತಾ ನಾಯ್ಕ, ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕಾಮತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಿರಂಜನ್ ಭಟ್, ಮೇಲ್ವಿಚಾರಕಿ ಲಲಿತಾ, ಉಳ್ಳೂರು-74 ಸ.ಹಿ.ಪ್ರಾ. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸದಾಶಿವ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯು. ರತ್ನಾಕರ ಶೆಟ್ಟಿ, ದಾನಿಗಳಾದ ಪ್ರಸನ್ನ ಅಡಿಗ ಬೋಗಿನಬೈಲು, ರಮ್ಯಾ ಪ್ರಸನ್ನ ಅಡಿಗ, ಸ್ಥಳೀಯ ಮುಖಂಡರಾದ ಕೋಟಿ ಪೂಜಾರಿ, ಸುಕುಮಾರ ಶೆಟ್ಟಿ ಸಂಪಿಗೇಡಿ, ಶ್ರೀಧರ್ ನಾಯ್ಕ ಬಂಟಕೋಡು, ರಾಜಗೋಪಾಲ ಹೆಗ್ಡೆ, ಬಂಟಕೋಡು ಸ.ಕಿ.ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ, ಸ್ತ್ರೀ ಶಕ್ತಿ ಸಂಘದ ಸದಸ್ಯೆ ಜಯಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು.
ಬಂಡಕೋಡು ಶಾಲೆಯ ಮುಖ್ಯ ಶಿಕ್ಷಕ ಮೂರ್ತಿ ಎಂ.ಎಚ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಶಿಕ್ಷಕಿ ರೇಖಾ ವರದಿ ವಾಚಿಸಿ, ವಂದಿಸಿದರು.
ಈ ಸಂದರ್ಭ ದಾನಿಗಳಾದ ಪ್ರಸನ್ನ ಅಡಿಗ ಬೋಗಿನಬೈಲು ಮತ್ತು ರಮ್ಯಾ ಪ್ರಸನ್ನ ಅಡಿಗ ಅವರನ್ನು ಸಮ್ಮಾನಿಸಲಾಯಿತು. ಅಂಗನವಾಡಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆಯ ಪುಸ್ತಕ, ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಕಾರ್ಯಕ್ರಮಗಳು ಜರಗಿದವು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.