ಹರ್ಯಾಣ: ಕಳೆದ ತಿಂಗಳು ನಡೆದ ನುಹ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅರಾವಳಿ ಬೆಟ್ಟದಲ್ಲಿ ಅಡಗಿ ಕುಳಿತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಮೀರ್ ಎನ್ನಲಾಗಿದ್ದು, ಕಳೆದ ವಾರ ನುಹ್ ನಲ್ಲಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಗಲಭೆ ನಡೆಸಿ ಹಿಂಸಾಚಾರ ನಡೆಸಿದ್ದರು. ಈ ಘಟನೆಯಲ್ಲಿ ಕನಿಷ್ಠ 6 ಮಂದಿ ಸಾವಿಗೀಡಾಗಿ, 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು..
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನುಹ್ ಗಲಭೆಗೆ ಕಾರಣಕರ್ತರಾದ ಹಲವರನ್ನು ಬಂಧಿಸಲಾಗಿತ್ತು ಇದೀಗ ಮತ್ತೋರ್ವ ಆರೋಪಿ ಅಮೀರ್ ನಗರದ ಅರಾವಳಿ ಬೆಟ್ಟದಲ್ಲಿ ಅಡಗಿರುವ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರು ತಂಡದೊಂದಿಗೆ ಬಂಧನಕ್ಕೆ ತೆರಳಿದ್ದರು ಈ ವೇಳೆ ಅಮೀರ್ ಹಾಗೂ ಆತನ ಜೊತೆಗಿದ್ದ ಗೆಳೆಯರು ತಮ್ಮ ಕೈಯಲ್ಲಿದ್ದ ಪಿಸ್ತೂಲ್ ಹಾಗೂ ಶಸ್ತ್ರಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ ಈ ವೇಳೆ ಪೊಲೀಸರು ಎನಕೌಂಟರ್ ನಡೆಸಿ ಅಮೀರ್ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಅಮೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ ಆತನ ಬಳಿ ಇದ್ದ ನಾಡ ಪಿಸ್ತೂಲ್ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈಗಾಗಲೇ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಮೀರ್ ಮಾಹಿತಿ ನೀಡಿದವರಿಗೆ ಇಪ್ಪತ್ತೈದು ಸಾವಿರ ಬಹುಮಾನವನ್ನು ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು.
ಇದನ್ನೂ ಓದಿ: Farmers’ Protest; ಪಂಜಾಬ್- ಹರಿಯಾಣದಲ್ಲಿ ರೈತರ ಪ್ರತಿಭಟನೆ: ಪೊಲೀಸರಿಂದ ಕಟ್ಟೆಚ್ಚರ