ನುಹ್: ಹಿಂಸಾಚಾರ ಪೀಡಿತ ಹರಿಯಾಣದ ನುಹ್ ನಲ್ಲಿ ಅಕ್ರಮ ನಿರ್ಮಾಣಗಳ ವಿರುದ್ಧ ಬೃಹತ್ ಧ್ವಂಸ ಕಾರ್ಯಾಚರಣೆ ಮುಂದುವರಿದಿದೆ.
ಡೆಮಾಲಿಶನ್ ಡ್ರೈವ್ ನ ನಾಲ್ಕನೇ ದಿನವಾದ ಇಂದು ನುಹ್ ಜಿಲ್ಲಾಡಳಿತವು ಸಹಾರಾ ಹೋಟೆಲನ್ನು ನೆಲಸಮಗೊಳಿಸಲು ಬುಲ್ಡೋಜರ್ ಗಳನ್ನು ತಂದಿದೆ.
ಸಹಾರಾ ಹೋಟೆಲ್ ನ ಮೇಲ್ಛಾವಣಿಯಿಂದ ಧಾರ್ಮಿಕ ಮೆರವಣಿಗೆಯ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ ನಂತರ ಸೋಮವಾರ ನುಹ್ ನಲ್ಲಿ ಹಿಂಸಾಚಾರ ಪ್ರಾರಂಭವಾಯಿತು ಎಂದು ಅಧಿಕಾರಿಗಳು ನಂಬಿದ್ದಾರೆ. ಗುಂಪೊಂದು ಮೆರವಣಿಗೆಯ ಮೇಲೆ ಕಲ್ಲುಗಳಿಂದ ದಾಳಿ ಮಾಡುತ್ತಿದ್ದಂತೆ, 2,500-ಕ್ಕೂ ಹೆಚ್ಚು ಭಾಗವಹಿಸುವವರು ಆಶ್ರಯ ಪಡೆಯಲು ದೇವಸ್ಥಾನಕ್ಕೆ ನುಗ್ಗಿದ್ದರು.
ಮೆಡಿಕಲ್ ಸ್ಟೋರ್ ಗಳು ಸೇರಿದಂತೆ ಸುಮಾರು 12 ಅಂಗಡಿಗಳನ್ನು ಶನಿವಾರ ಧ್ವಂಸಗೊಳಿಸಲಾಗಿದೆ. ಹಿಂಸಾಚಾರ ಪೀಡಿತ ನುಹ್ ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಟೌರುನಲ್ಲಿ ವಾಸಿಸುವ ವಲಸಿಗರ ಗುಡಿಸಲುಗಳನ್ನು ಈ ವಾರದ ಆರಂಭದಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಕ್ಕಾಗಿ ನೆಲಸಮಗೊಳಿಸಲಾಗಿತ್ತು.
ಹಿಂಸಾಚಾರದಲ್ಲಿ ತೊಡಗಿದ್ದವರಿಗೆ ಸೇರಿದ ಮನೆ ಮತ್ತು ಅಂಗಡಿಗಳನ್ನು ಧ್ವಂಸ ಮಾಡುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ವಿವಿಧ ಪ್ರದೇಶಗಳಲ್ಲಿ 50 ರಿಂದ 60 ಕಟ್ಟಡಗಳನ್ನು ಇದುವರೆಗೆ ಕೆಡವಲಾಗಿದೆ. ಬಂಧನಕ್ಕೆ ಹೆದರಿ ಹಲವರು ಓಡಿ ಹೋಗಿದ್ದಾರೆ.