Advertisement
ವಿದ್ಯಾನಗರದ ಜಗದ್ಗುರು ಶ್ರೀ ರಂಭಾಪುರಿ ಕಲ್ಯಾಣ ಮಂಟಪದ ಮೋಹನ ಏಕಬೋಟೆ ವೇದಿಕೆಯಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ನಗರದಲ್ಲಿ ಸಾಹಿತ್ಯದ ಗಂಧವೇ ಇರಲಿಲ್ಲ ಎನ್ನುವ ಮಾತು ಕೇಳಿ ಬಂದಿದ್ದು ಸುಳ್ಳಲ್ಲ. ಶ್ರಮ ವಹಿಸಿ ಕನ್ನಡಾಭಿಮಾನಿಗಳು, ಸಾಹಿತಿಗಳನ್ನು ಕಾಣಬೇಕೆಂದು ಮಹಾನಗರದ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿದರೆ ವ್ಯಾಪಾರಸ್ಥರು, ಬಡ್ಡಿ ವ್ಯವಹಾರದಲ್ಲಿ ತೊಡಗಿರುವವರು ಭೇಟಿಯಾಗುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಹುಬ್ಬಳ್ಳಿ ಸಾಹಿತಿಗಳ ತವರಾಗಿ ಮಾರ್ಪಟ್ಟಿದೆ. ನಗರದಲ್ಲೀಗ ಎಲ್ಲ ಬಡಾವಣೆಗಳಲ್ಲಿ ಒಬ್ಬರಲ್ಲ ಒಬ್ಬರು ಸಾಹಿತಿಗಳು ಕಾಣುತ್ತಾರೆ. ಅಷ್ಟರ ಮಟ್ಟಿಗೆ ಸಾಹಿತ್ಯದ ಅಭಿರುಚಿ ಹೆಚ್ಚಾಗಿದೆ ಎಂದರು.
Related Articles
Advertisement
ಇದಕ್ಕೂ ಮೊದಲು ಬಿವಿಬಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಆವರಣದಿಂದ ರಂಭಾಪುರಿ ಕಲ್ಯಾಣ ಮಂಟಪ ವರೆಗೆ ಕನ್ನಡದ ತೇರಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಎಂ.ಎಂ. ಕನಕೇರಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ತುಂತುರು ಮಳೆಯಲ್ಲೇ ಕನ್ನಡದ ತೇರು ವಿಜೃಂಭಣೆಯಿಂದ ಸಾಗಿತು.
ನಿಕಟಪೂರ್ವ ಅಧ್ಯಕ್ಷ ಪ್ರೊ| ಜಿ.ಎಚ್. ಹನ್ನೆರಡುಮಠ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಅಧ್ಯಕ್ಷ ಪ್ರೊ| ಕೆ.ಎ. ದೊಡ್ಡಮನಿ, ಪ್ರೊ| ಕೆ.ಎಸ್. ಕೌಜಲಗಿ, ಡಾ| ರಾಮು ಮೂಲಗಿ, ಕಸಾಪ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಗ್ರಂಥಪಾಲಕ ಬಿ.ಎ. ಮಾಳವಾಡ ನಿರೂಪಿಸಿದರು. ಉದಯಚಂದ್ರ ದಿಂಡವಾರ ವಂದಿಸಿದರು.
ಸಾಹಿತಿಗಳ ಬೆನ್ನು ತಟ್ಟುವ ಕೆಲಸ ಆಗಬೇಕಿದೆ. ಸಾಹಿತ್ಯ ಕೆಲವರಿಗೆ ಮಾತ್ರ ಸೀಮಿತ ಎನ್ನುವ ಮನಸ್ಥಿತಿ ಬೇಡ. ಅಕ್ಷರ ಕೃಷಿಯಲ್ಲಿ ತೊಡಗಿದರೆ ಸಾಹಿತ್ಯ ಒಲಿಸಿಕೊಳ್ಳಬಹುದು.ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಕವಿ ಪಂಪ ರಾಜಾಶ್ರಯದಲ್ಲಿದ್ದರೂ ಜನ ವಿರೋಧಿ ನೀತಿಯನ್ನು ನಿರ್ಭಿಡೆಯಿಂದ ವಿರೋಧಿಸುತ್ತಿದ್ದರು. ಕೆಳ ವರ್ಗದ ಜನರ ಬಗ್ಗೆ ಸಂವೇದನಶೀಲತೆ ಹೊಂದಿದ್ದರು. ಅವರ ಈ ನಡೆ ಇಂದಿನ ಬದುಕಿನಲ್ಲಿನ ನ್ಯೂನತೆಗಳನ್ನು ಯಾವುದೇ ಅಳುಕಿಲ್ಲದೆ ವಿರೋಧಿಸುವುದಕ್ಕೆ ನಮಗೆ ಮಾರ್ಗದರ್ಶಿಯಾಗಿದೆ.
ಕೆ.ಆರ್. ದುರ್ಗಾದಾಸ ಆಂಗ್ಲ ಮಾಧ್ಯಮದಲ್ಲಿ ಅಧ್ಯಯನ ಮಾಡಿದರೆ ಮಾತ್ರ ಯಶಸ್ಸು ಎಂಬ ಭಾವನೆ ಮೂಡಿದೆ. ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಲಕ್ಷಾಂತರ ರೂ. ಡೊನೇಷನ್ ನೀಡಿಯಾದರೂ ಎಲ್‌ಕೆಜಿ ಪ್ರವೇಶ ಗಿಟ್ಟಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಮಾಧ್ಯಮದ ಬಗ್ಗೆ ಪಾಲಕರಲ್ಲಿ ತಾತ್ಸಾರ ಬೇಡ.
ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ