Advertisement
ರಾಜ್ಯದ ವಿಜಯಪುರ, ಕೊಪ್ಪಳ ಮತ್ತು ರಾಯಚೂರು ಸೇರಿದಂತೆ 3 ಕಡೆ ವಿವಿಧ ಸಾಮರ್ಥ್ಯದ ಅಣು ವಿದ್ಯುತ್ ಸ್ಥಾವರ ಘಟಕಗಳ ನಿರ್ಮಾಣ ಮಾಡಬಹುದು. ಭೂಮಿ ಮಂಜೂರಾತಿ ಮತ್ತು ಭೌಗೋಳಿಕ ಅಧ್ಯಯನಕ್ಕೆ ಅನುಮತಿ ಕೋರಿ ರಾಜ್ಯ ಸರಕಾರಕ್ಕೆ ಈಚೆಗೆ ಎನ್ಟಿಪಿಸಿ ಮನವಿ ಮಾಡಿತ್ತು. ಉದ್ದೇಶಿತ 3 ಜಿಲ್ಲೆಗಳಲ್ಲಿ ಭೂಮಿಯ ಲಭ್ಯತೆ ಮತ್ತು ಅದಕ್ಕಿರುವ ಅಡತಡೆಗಳು ಮತ್ತಿತರ ವಿಷಯಗಳ ಕುರಿತು ಅಧ್ಯಯನ ನಡೆಸಿ ಕಾರ್ಯಸಾಧ್ಯತಾ ವರದಿ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಜ್ಯಕ್ಕೆ ಈ ಅಣುಸ್ಥಾವರದ ಆವಶ್ಯಕತೆ ಎಷ್ಟಿದೆ? ಮೂರು ಕಡೆ ಜಾಗ ಗುರುತಿಸಿ, ಘಟಕಗಳ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ. ಮೂರೂ ಕಡೆಯೂ ಸ್ಥಾಪಿಸುವುದಾ ಅಥವಾ ಒಂದೇ ಕಡೆ ಸ್ಥಾಪನೆಗೆ ಅವಕಾಶ ನೀಡಬೇಕಾ? ಮಾಡುವುದಾದರೆ ಎಷ್ಟು ಸಾಮರ್ಥ್ಯ ಸೂಕ್ತ? ಇದರಿಂದಾಗುವ ಅನುಕೂಲ-ಅನಾನುಕೂಲಗಳು ಏನು ಎಂಬ ಅಂಶಗಳ ಬಗ್ಗೆ ಸರಕಾರ ಮಟ್ಟದಲ್ಲಿ ಚಿಂತನೆ ಮಾಡಿ ಒಂದು ಸೂಕ್ತ ತೀರ್ಮಾನಕ್ಕೆ ಬರಲು ಸಚಿವರು ಮತ್ತು ಉನ್ನತ ಅಧಿಕಾರಿಗಳು ಸಭೆಯಲ್ಲಿ ಅಭಿಪ್ರಾಯಪಟ್ಟರು ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
Related Articles
Advertisement
ದಶಕದ ಹಿಂದೆ ಬಂದಿದ್ದ ಪ್ರಸ್ತಾವನೆದಶಕದ ಹಿಂದೆ ಅಂದರೆ 2015ರಲ್ಲೂ ಇಂಥದ್ದೊಂದು ಪ್ರಸ್ತಾವನೆಗೆ ಮುನ್ನೆಲೆಗೆ ಬಂದಿತ್ತು. ಆಗ ಇದೇ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಒಂದು ವೇಳೆ ಕೇಂದ್ರ ಸರಕಾರ ರಾಜ್ಯಕ್ಕೆ ಮತ್ತೂಂದು ಅಣು ವಿದ್ಯುತ್ ಸ್ಥಾವರ ನೀಡುವುದಾದರೆ ಸ್ವಾಗತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಅನಂತರದಲ್ಲಿ ಮುನ್ನೆಲೆಗೆ ಬರಲೇ ಇಲ್ಲ.