Advertisement

ದೇಶಾಭಿವೃದ್ಧಿಗೆ ಈಶಾನ್ಯಾಭಿವೃದ್ಧಿ ಪೂರಕ

05:08 PM Jan 07, 2018 | Team Udayavani |

ಉಡುಪಿ: ಭಾರತದ ಅಭಿವೃದ್ಧಿಗೆ ಈಶಾನ್ಯ ರಾಜ್ಯಗಳ ಅಭಿವೃದ್ಧಿಯೂ ಅತಿ ಅಗತ್ಯ ಎಂದು ನಾಗಾಲ್ಯಾಂಡ್‌ ರಾಜ್ಯಪಾಲ ಪಿ.ಬಿ. ಆಚಾರ್ಯ ಹೇಳಿದರು. ಮಣಿಪಾಲ ವಿ.ವಿ.ಯ ಜಿಯೋ ಪಾಲಿಟಿಕ್ಸ್‌ ಆ್ಯಂಡ್‌ ಇಂಟರ್‌ನ್ಯಾಶ ನಲ್‌ ರಿಲೇಶನ್ಸ್‌ ವಿಭಾಗದ ಈಶಾನ್ಯ ಅಧ್ಯಯನ ಕೇಂದ್ರ (ಎನ್‌ಇಎಸ್‌ಸಿ) ದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತ ನಾಡಿದ ಅವರು, ಅತಿ ಸಿರಿವಂತ ಸಂಸ್ಕೃತಿ, ಪ್ರತಿಭೆಯನ್ನು ಹೊಂದಿದ ಈಶಾನ್ಯ ಭಾರತವನ್ನು ಸಶಕ್ತಗೊಳಿಸಿ ದಾಗಲೇ ಸಮಗ್ರ ಭಾರತದ ಅಭಿವೃದ್ಧಿ ಆಗಲಿದೆ ಎಂದರು.

Advertisement

ದೇಶದ ವಿವಿಧೆಡೆ ಅಧ್ಯಯನ ನಡೆಸುತ್ತಿರುವ ಈಶಾನ್ಯ ಭಾರತದ ವಿದ್ಯಾರ್ಥಿಗಳು ಹುಟ್ಟೂರಿಗೆ ಮರಳಿ ಅಲ್ಲಿನ ಅಭಿವೃದ್ಧಿಗೆ ಸಹಕರಿಸಬೇಕು. ಅಲ್ಲಿ ಅವರ ಸೇವೆ ಅತೀ ಅಗತ್ಯವಾಗಿದೆ ಎಂದರು.

ವಿ.ವಿ. ಸಹಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ಈಶಾನ್ಯ ಭಾರತದ ಕುರಿತಾದ ಕಿರುಹೊತ್ತಗೆಯನ್ನು  ಬಿಡುಗಡೆಗೊಳಿಸಿದರು. ಕುಲಪತಿ ಡಾ| ಎಚ್‌. ವಿನೋದ ಭಟ್‌ ಮಾತನಾಡಿದರು. ವಿಭಾಗ ಮುಖ್ಯಸ್ಥ ಪ್ರೊ| ಅರವಿಂದ ಕುಮಾರ್‌ ಸ್ವಾಗತಿಸಿ ಕೇಂದ್ರದ ಸಮನ್ವಯಕಾರ ಡಾ| ಮೋನಿಶ್‌ ತೌರಂಗ್‌ಬಮ್‌ ಕೇಂದ್ರದ ಕುರಿತು ಮಾತನಾಡಿದರು.

ಕೆಎಂಸಿ ಡೀನ್‌ ಡಾ| ಪ್ರಜ್ಞಾ ರಾವ್‌ ವಂದಿಸಿದರು. ಕವಿತಾ ಪಿ.ಬಿ. ಆಚಾರ್ಯ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next