Advertisement

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

03:51 PM May 17, 2024 | Team Udayavani |

ಹೈದರಾಬಾದ್:‌ ಜೂ.ಎನ್‌ಟಿಆರ್‌ ʼಆರ್‌ ಆರ್‌ ಆರ್‌ʼ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಪ್ಯಾನ್‌ ಇಂಡಿಯಾದಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ʼದೇವರʼ ಸಿನಿಮಾಕ್ಕಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

Advertisement

ʼದೇವರʼ ದ ನಡುವೆ ಅವರು ಹಿಂದಿಯ ʼವಾರ್‌ -2ʼ ಸಿನಿಮಾದಲ್ಲಿ ಹೃತಿಕ್‌ ರೋಷನ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಮತ್ತೊಂದು ದೊಡ್ಡ ಪ್ರಾಜೆಕ್ಟ್‌ ನಲ್ಲಿ ಜೂ. ಎನ್‌ ಟಿಆರ್‌ ಕಾಣಿಸಿಕೊಳ್ಳಲಿದ್ದಾರೆ.

ʼಕೆಜಿಎಫ್‌ʼ ನಿರ್ದೇಶಕ ಪ್ರಶಾಂತ್‌ ನೀಲ್‌ ಜೂ. ಎನ್‌ ಟಿಆರ್‌ ಜೊತೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾ ಶೂಟಿಂಗ್‌ ಆರಂಭಕ್ಕೂ ಮುನ್ನವೇ ಅನೌನ್ಸ್‌ ಆದ ದಿಂದ ಸುದ್ದಿಯಲ್ಲಿದೆ.

ʼಎನ್‌ ಟಿಆರ್‌ 31ʼ ಎನ್ನುವ ಟೈಟಲ್‌ ತಾತ್ಕಾಲಿಕವಾಗಿ ಇಡಲಾಗಿದೆ. ಇದೀಗ ಬಂದಿರುವ ಲೇಟೆಸ್ಟ್‌ ಅಪ್ಡೇಟ್‌ ಪ್ರಕಾರ ಸಿನಿಮಾಕ್ಕೆ ʼಡ್ರ್ಯಾಗನ್‌ʼ ಎನ್ನುವ ಪವರ್‌ ಫುಲ್‌ ಟೈಟಲ್‌ ಇಡಲಾಗಿದೆ ಎನ್ನಲಾಗಿದೆ.

ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿʼ ಡ್ರ್ಯಾಗನ್ʼ ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಈ ಟೈಟಲ್‌ ಹಿಂದಿಯಲ್ಲಿ ಕರಣ್ ಜೋಹರ್ ಅವರು ನೋಂದಾಯಿಸಿದ್ದಾರೆ. ಚಿತ್ರತಂಡ ಕರಣ್‌ ಅವರೊಂದಿಗೆ ಮಾತನಾಡಿದ್ದು, ಹಿಂದಿಯಲ್ಲೂ ʼಡ್ರ್ಯಾಗನ್‌ʼ ಟೈಟಲ್‌ ನೀಡಲು ಅವರು ಅನುಮತಿ ನೀಡಿದ್ದಾರೆ” ಎಂದು  ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

Advertisement

ಇದನ್ನೂ ಓದಿ: ಕಾರ್ತಿಕ್‌ – ಸೂರ್ಯ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ?

ʼಬ್ರಹ್ಮಾಸ್ತ್ರʼದ ಮೂಲ ಶೀರ್ಷಿಕೆಯು ʼಡ್ರ್ಯಾಗನ್ʼ ಎಂದಾಗಿತ್ತು. ಆಗಿತ್ತು. ಆದರೆ ಸಿನಿಮಾದ ಸ್ಕ್ರಿಪ್ಟ್‌ ಮುಂದುವರೆದಂತೆ ಸಿನಿಮಾದ ಟೈಟಲ್‌ ಕೂಡ ಬದಲಾಯಿತು ಎಂದು ವರದಿ ತಿಳಿಸಿದೆ.

ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಿಸಲಿದೆ. ಇದೇ ಮೇ.20 ರಂದು ಜೂ.ಎನ್‌ ಟಿಆರ್‌ ಅವರ ಹುಟ್ಟುಹಬ್ಬವಿದ್ದು, ಈ ಸಮಯದಲ್ಲಿ ʼಡ್ರ್ಯಾಗನ್‌ʼ ಟೈಟಲ್‌ ಪೋಸ್ಟರ್‌ ರಿಲೀಸ್‌ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಂದಹಾಗೆ ಕರಣ್‌ ಜೋಹರ್‌ ಜೂ.ಎನ್‌ ಟಿಆರ್‌ ಅವರ ʼದೇವರʼ ಸಿನಿಮಾವನ್ನು ಹಿಂದಿಯಲ್ಲಿ ಪ್ರಸೆಂಟ್‌ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next