Advertisement

ಕರ್ನಾಟಕಕ್ಕೆ ವಿದ್ಯುತ್‌ ಪೂರೈಕೆ ನಿಯಂತ್ರಿಸಲಿರುವ ಎನ್‌ಟಿಪಿಸಿ

01:12 AM Feb 06, 2019 | Team Udayavani |

ನವದೆಹಲಿ: ಕಳೆದ 60 ದಿನಗಳಿಂದಲೂ ವಿದ್ಯುತ್‌ ಬಿಲ್‌ ಪಾವತಿ ಮಾಡದ ಕರ್ನಾ ಟಕಕ್ಕೆ ವಿದ್ಯುತ್‌ ಸರಬರಾಜು ನಿಯಂತ್ರಿಸಲು ಎನ್‌ಟಿಪಿಸಿ ನಿರ್ಧರಿಸಿದೆ. ಇದೇ ವೇಳೆ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೂ ವಿದ್ಯುತ್‌ ನಿಯಂತ್ರಣ ಕ್ರಮ ಜಾರಿಗೆ ಬರಲಿದೆ. ಸುಮಾರು 4138 ಕೋಟಿ ರೂ. ಬಾಕಿಯನ್ನು ರಾಜ್ಯಗಳು ಉಳಿಸಿಕೊಂಡಿದ್ದು, ವಿದ್ಯುತ್‌ ವಿತರಣೆ ಕಂಪನಿಗಳಿಂದ ಈ ಮೊತ್ತ ಪಾವತಿಯಾಗಬೇಕಿತ್ತು. ಹೀಗಾಗಿ 3470 ಮೆ.ವ್ಯಾ ವಿದ್ಯುತ್‌ ಕಡಿಮೆ ಒದಗಿಸಲು ಎನ್‌ಟಿಪಿಸಿ ನಿರ್ಧರಿಸಿದೆ. ಸಿಇಆರ್‌ಸಿ ಮಾರ್ಗಸೂಚಿಯ ಪ್ರಕಾರ ವಿದ್ಯುತ್‌ ಪೂರೈಕೆಯನ್ನು ನಿಯಂತ್ರಿಸಲು ನಿರ್ಧರಿಸ ಲಾಗಿದೆ ಎಂದು ಎನ್‌ಟಿಪಿಸಿ ತಿಳಿಸಿದೆ. ಸಂಪೂರ್ಣ ಮೊತ್ತ ಪಾವತಿ ನಂತರ ವಿದ್ಯುತ್‌ ಪೂರೈಕೆ ಸಹಜ ಸ್ಥಿತಿಗೆ ಮರಳಲಿದೆ. ಸೌರ ಹಾಗೂ ಜಲವಿದ್ಯುತ್‌ ಬಿಲ್‌ ಪಾವತಿ ಬಾಕಿ ಇದ್ದು, ಈ ಸಂಬಂಧ ಈಗಾಗಲೇ ನೋಟಿಸ್‌ ನೀಡಲಾಗಿದೆ.

Advertisement

ರಾಮಗುಂಡಂ, ಸಿಂಹಾದ್ರ, ತಲಚೇರಿ ಮತ್ತು ಕೂಡಗಿ ವಿದ್ಯುತ್‌ ಘಟಕಗಳಿಂದ ಮೂರೂ ರಾಜ್ಯಗಳಿಗೆ ವಿದ್ಯುತ್‌ ಸರಬ ರಾಜಾಗುತ್ತಿದ್ದು, ಒಟ್ಟು 3470 ಮೆ.ವ್ಯಾ ವಿದ್ಯುತ್‌ ಕಡಿಮೆ ಮಾಡಲಾಗುತ್ತದೆ. ಇದು ಫೆ.6 ರಂದು ಜಾರಿಗೆ ಬರಲಿದೆ. ಬಾಕಿ ಪಾವತಿಯವರೆಗೆ ಅಥವಾ ಮುಂದಿನ 3 ತಿಂಗಳ ಕಾಲ ಇದು ಜಾರಿಯಲ್ಲಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next