Advertisement
ಜೆಆರ್ ಎಫ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಗೆ ನೆಟ್ ಪರೀಕ್ಷೆ ನಡೆಯುತ್ತಿದ್ದು, ಅರ್ಧದಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಹಾಲ್ ಟಿಕೆಟ್ ಬಿಡಲಾಗಿದೆ. ಪ್ರತಿ ವರ್ಷ ಎನ್ ಟಿಎ ನ್ಯಾಷನಲ್ ಎಲಿಜಿಬಲಿಟಿ ಟೆಸ್ಟ್ ನಡೆಸುತ್ತದೆ. ಎನ್ ಟಿಎ ಸ್ಥಳ, ದಿನಾಂಕ, ಸಮಯ ನಮೂದಿಸಿದ ಹಾಲ್ ಟಿಕೆಟ್ ಬಿಟ್ಟಿದೆ. ಕೊನೆಕ್ಷಣದಲ್ಲಿ ಹಾಲ್ ಟಿಕೆಟ್ ಕೊಟ್ಟು ಎಂಎ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ.
Related Articles
Advertisement
ಈ ಹಿಂದೆ ವರ್ಷಕ್ಕೆ ಎರಡು ಬಾರಿ ನೀಟ್ ಪರೀಕ್ಷೆ ನಡೆಸಲಾಗುತ್ತಿತ್ತು. ಕಳೆದ ವರ್ಷದಿಂದ ವರ್ಷಕ್ಕೊಮ್ಮೆ ಮಾತ್ರ ಪರೀಕ್ಷೆ ನಡೆಸುತ್ತಿದೆ. ಒಂದೇ ಪರೀಕ್ಷೆಯಿಂದ ಮೀಸಲು ಪರ್ಸೆಂಟೇಜ್ ನಲ್ಲೂ ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.
ಕಳೆದ ಬಾರಿ ಕೂಡ ಕನ್ನಡ ಪರೀಕ್ಷೆ ವೇಳೆ ಸಮಸ್ಯೆಯಾಗಿತ್ತು. ಕನ್ನಡದ ಪರೀಕ್ಷೆಗೆ ಹಿಂದಿ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಕೊಟ್ಟಿದ್ದ ಎನ್ ಟಿಎ, ವಿದ್ಯಾರ್ಥಿಗಳ ಪ್ರತಿಭಟನೆ ನಂತರ ಮರು ಪರೀಕ್ಷೆ ಮಾಡಿತ್ತು.