Advertisement

ಗೋವಾ ವಿಶ್ವ ವಿದ್ಯಾಲಯದ ವಿರುದ್ದ ಎನ್‍ಎಸ್‍ಯುಐ ಪ್ರತಿಭಟನೆ

01:10 PM Nov 26, 2021 | Team Udayavani |

ಪಣಜಿ: ಗೋವಾ ವಿಶ್ವವಿದ್ಯಾಲಯವು ಕಳೆದ ನಾಲ್ಕು ತಿಂಗಳಿಂದ ವಿದ್ಯಾರ್ಥಿಗಳ ಫಲಿತಾಂಶ ಮತ್ತು ಅಂಕಪಟ್ಟಿಯನ್ನು ನೀಡಿಲ್ಲ, ಹಣದ ಬೇಡಿಕೆಯಿರುವ ತಾತ್ಕಾಲಿಕ ಅಂಕಪಟ್ಟಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳನ್ನು ಕೇಳಲಾಗುತ್ತಿದೆ, ಇದು ಲಕ್ಷಾಂತರ ರೂಪಾಯಿಗಳ ಹಗರಣವಾಗಿದೆ ಎಂದು ಎನ್‍ಎಸ್‍ಯುಐ ಅಧ್ಯಕ್ಷ ನೌಶಾದ್ ಚೌಧರಿ ಆರೋಪಿಸಿದ್ದಾರೆ.

Advertisement

ಈ ಕರಿತು ಗೋವಾ ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸಿ ಮಾತನಾಡಿ- ಗೋವಾ ವಿಶ್ವವಿದ್ಯಾಲಯವು ಫಲಿತಾಂಶ ಮತ್ತು ಅಂಕಪಟ್ಟಿಯನ್ನು ನೀಡಲು ವಿಫಲವಾದ ಕಾರಣ ತಾತ್ಕಾಲಿಕ ಅಂಕಪಟ್ಟಿಯನ್ನು ನೀಡಲು ಶುಲ್ಕ ವಿಧಿಸಬಾರದು. ಫಲಿತಾಂಶವನ್ನು ತಕ್ಷಣವೇ ಪ್ರಕಟಿಸಬೇಕು. ಮುಂದೆಯೂ ಹಣ ವಸೂಲಿ ಮಾಡಬಾರದು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.

ಇದನ್ನೂ ಓದಿ:ಬೆಂಗಳೂರು ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವ; ಆತಂಕದಲ್ಲಿ ಜನತೆ

ಫಲಿತಾಂಶ ಪ್ರಕಟಿಸುವಲ್ಲಿ ಗೋವಾ ವಿಶ್ವವಿದ್ಯಾಲಯ ವಿಫಲವಾಗಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿಲ್ಲ. ವಿಶ್ವವಿದ್ಯಾಲಯದ ನಿಯಗಳ ಪ್ರಕಾರ ಪರೀಕ್ಷೆಯ ನಂತರ 4 ವಾರಗಳಲ್ಲಿ ಫಲಿತಾಂಶ ಪ್ರಕಟಿಸಬೇಕು. ಇದು ಲಕ್ಷಾಂತರ ರೂ. ಹಗರಣವಾಗಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next