Advertisement

ಗ್ರಾಮೀಣ ಬಡತನ ಮಟ್ಟ ಇನ್ನಷ್ಟು ಹೆಚ್ಚಳ ; 2017-18ರಲ್ಲಿ ಶೇ.30ರಷ್ಟು ಏರಿಕೆ

09:29 AM Dec 04, 2019 | Hari Prasad |

ಹೊಸದಿಲ್ಲಿ: ಬಡತನ ನಿಯಂತ್ರಣಕ್ಕೆ ಸರಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಗ್ರಾಮೀಣ ಮಟ್ಟದಲ್ಲಿ ಬಡತನ ಇನ್ನೂ ಏರಿದೆ ಎಂದು ಅಂಕಿ ಅಂಶಗಳು ಹೇಳಿವೆ. 1980ರ ಬಳಿಕ ಭಾರತ ಅಭಿವೃದ್ಧಿಯ ಹಳಿಯಲ್ಲಿದ್ದರೂ, ಗ್ರಾಮೀಣ ಬಡತನ ಏರುತ್ತಿರುವುದು ನಿಜಕ್ಕೂ ಒಂದು ಸವಾಲಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಗ್ರಾಮೀಣ ಬಡತನ ಏರಿರುವ ಕುರಿತ ಅಂಕಿಅಂಶಗಳನ್ನು ಹೊರಗೆಡವಿದೆ.

Advertisement

ಆ ಪ್ರಕಾರ 2011-12ರ ಅವಧಿಯಲ್ಲಿ ಗ್ರಾಮೀಣ ಬಡತನ ಶೇ.4ರಷ್ಟು ಏರಿಕೆ ಕಂಡಿದ್ದರೆ, 2017-18ರಲ್ಲಿ ಗ್ರಾಮೀಣ ಬಡತನ ಶೇ.30ರಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ನಗರ ಬಡತನ ಶೇ.5ರಷ್ಟು ಮತ್ತು ಶೇ.9ರಷ್ಟು ಇಳಿಕೆ ಕಂಡಿದೆ. ಒಟ್ಟಾರೆ ಲೆಕ್ಕಾಚಾರದ ಪ್ರಕಾರ 2017-18ರ ಅವಧಿಯಲ್ಲಿ ಬಡತನ ಶೇ.23ರಷ್ಟು ಇದೆ ಎಂದು ಹೇಳಲಾಗಿದೆ. ಅಲ್ಲದೇ ಸದ್ಯದ ಮಾಹಿತಿ ಪ್ರಕಾರ ದೇಶದಲ್ಲಿ 3 ಕೋಟಿ ಮಂದಿ ಬಡತನ ರೇಖೆಗಿಂತ ಕೆಳಗಿನವರು ಎಂದು ಹೇಳಲಾಗಿದೆ.

ಇನ್ನು ಅತಿ ಹೆಚ್ಚು ಬಡತನ ದೊಡ್ಡ ರಾಜ್ಯಗಳಾದ ಜಾರ್ಖಂಡ್‌, ಬಿಹಾರ, ಒಡಿಶಾದಲ್ಲೇ ಅತಿ ಹೆಚ್ಚಿದೆ. ಬಿಹಾರದಲ್ಲಿ 2011-12ರಲ್ಲಿ ಗ್ರಾಮೀಣ ಬಡತನ ಶೇ.17ರಷ್ಟು ಇದ್ದರೆ, 2017-18ರಲ್ಲಿ ಶೇ.50.47ರಷ್ಟಕ್ಕೇರಿದೆ. ಜಾರ್ಖಂಡ್‌ನ‌ಲ್ಲಿ ಶೇ.8.6ರಷ್ಟು ಏರಿಕೆಯಾಗಿದ್ದರೆ, ಒಡಿಶಾದಲ್ಲಿ ಶೇ.8.1ರಷ್ಟು ಏರಿಕೆಯಾಗಿದೆ. ಜಾರ್ಖಂಡ್‌ ಮತ್ತು ಒಡಿಶಾದಲ್ಲಿ ಶೇ.40ರಷ್ಟಕ್ಕಿಂತಲೂ ಹೆಚ್ಚು ಮಂದಿ ಬಡತನ ರೇಖೆಗಿಂತ ಕೆಳಗಿನವರು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next