Advertisement

ಬೆಳೆ ವಿಮೆ ಹಣ ಬಿಡುಗಡೆಗೆ ಒತ್ತಾಯ

05:41 PM Oct 30, 2020 | Suhan S |

 

Advertisement

ಗದಗ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ(ವಿಮಾ) ಯೋಜನೆಯಡಿ ವಿಮಾ ಕಂತು ತುಂಬಿದ ರೈತರಿಗೆ ಬೆಳೆ ವಿಮೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಹಾಲಪ್ಪ ಅರಹುಣಸಿ ಮಾತನಾಡಿ, ಮುಂಗಾರು ಹಂಗಾಮಿಗೆಹೆಸರು, ಸೂರ್ಯಕಾಂತಿ, ಹಿಂಗಾರಿ ಬೆಳೆಗಳಾದ ಜೋಳ, ಕಡಲೆ ಬೆಳೆ ಬೆಳೆಯುತ್ತಾರೆ. ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾ.ಪಂ. ವ್ಯಾಪ್ತಿಯ ವೆಂಕಟಾಪೂರ, ಹಳ್ಳಿಕೇರಿ, ಹಳ್ಳಿಗುಡಿ ಗ್ರಾಮಗಳರೈತರು ಬೆಳೆಗಳ ವಿಮೆ (2019-20) ತುಂಬಿದ್ದಾರೆ. ಈ ನಡುವೆ ಬೆಳೆಗಳು ಸಂಪೂರ್ಣ ಹಾನಿಯಾಗಿದೆ. ಆದರೆ, ರೈತರಿಗೆ ಪರಿಹಾರ ಹಣ ಕೈಸೇರದೇ ಕಂಗಾಲಾಗಿದ್ದಾರೆ ಎಂದು ದೂರಿದರು.

ಸರಕಾರ ಕೂಡಲೇ ವೆಂಕಟಾಪೂರ, ಹಳ್ಳಿಕೇರಿ, ಹಳ್ಳಿಗುಡಿ ಗ್ರಾಮಗಳನ್ನು ಪುನರ್‌  ಪರಿಶೀಲನೆ ಮಾಡಿ, ರೈತರಿಗೆ ಆದ ಅನ್ಯಾಯ ಸರಿಪಡಿಸಬೇಕು. ಮುಂಗಾರು ಬೆಳೆಗಳಾದ ಹೆಸರು, ಸೂರ್ಯಕಾಂತಿ ಹಿಂಗಾರು ಬೆಳೆಗಳಾದ ಕಡಲೆ, ಜೋಳ ಬೆಳೆಗಳಿಗೆ ಸೂಕ್ತ ವಿಮಾ ತುಂಬಲು ಸರ್ಕಾರ ಕಾರ್ಯೋನ್ಮುಖರಾಗಬೇಕು. ಇಲ್ಲವೇ, ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಯೂಸೂಫ್‌ ಡಂಬಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕೋರ್ಲಗಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಮುತ್ತಣ್ಣ ಚವಡಣ್ಣವರ, ಬಸವರಾಜ ಕರಿಯವರ, ರೈತರಾದ ವಿರೂಪಾಕ್ಷಗೌಡ ಮರಿಗೌಡರ, ಶರಣಪ್ಪ ತಳಕಲ್ಲ, ಸಂಗಪ್ಪ ತಳಕಲ್ಲ, ಅಂದಾನಯ್ಯ ಹಿರೇಮಠ, ಶರಣಪ್ಪ ಶಿವಶಿಂಪಗೇರ, ಶೇಖಪ್ಪ ತಳಕಲ್ಲ, ಶಿವನಗೌಡ ಮಂಟಗೇರಿ, ಹನಮಪ್ಪ ಬಿ. ಕಿನ್ನಾಳ, ಶಿವಪುತ್ರಪ್ಪ ಸಂಗನಾಳ, ಯಲ್ಲಪ್ಪಗೌರ ಕರಕರೆಡ್ಡಿ, ತಳಕಪ್ಪ ತುಪ್ಪದ, ಮುದಕಪ್ಪ ಸೂರಿ, ಮಲ್ಲಪ್ಪ ಆಲೂರ, ಹ.ಬಿ.ಸೂಡಿ, ಚನ್ನಪ್ಪ ಹಾ. ಕಲ್ಲೂರ, ರುದ್ರಪ್ಪ ಅಸೂಟಿ, ಶರಣಪ್ಪಅಸೂಟಿ, ಕೋಟೆಪ್ಪ ಹೊಸಮನಿ, ವೀರನಗೌಡ ಮೂಗನೂರ,ಶೌಕತ ಪೀರಜಾದೆ, ದಾವಲಸಾಬ ಕಣಕಿ, ಸದ್ದಾಂ ಕರ್ಜಗಿ, ಸಂತೋಷ ಕುರಿ, ಸದ್ದಾಂ ಈ. ಅಕ್ಕಿ, ಮಲ್ಲನಗೌಡ ಹುಲ್ಲೂರ, ದಾವಲಸಾಬ ದಾಯಣ್ಣವರ ಯಲ್ಲಪ್ಪ ಮಾಳೆಕೊಪ್ಪ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next