ಹೊಸದಿಲ್ಲಿ:”ನ್ಯಾಶನಲ್ ಸ್ಟಾಕ್ ಎಕ್ಸ್ ಚೇಂಜ್ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಆನಂದ ಸುಬ್ರಮಣಿಯನ್ ಅವರೇ ಹಿಮಾಲಯದ ಯೋಗಿ’ ಹೀಗೆಂದು ಸಿಬಿಐ ಹೊಸದಿಲ್ಲಿ ಯಲ್ಲಿರುವ ವಿಶೇಷ ಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ.
ಇದನ್ನೂ ಓದಿ:ಪೊಲೀಸ್ ಠಾಣೆ, ಫೈನಾನ್ಸ್ ಕಂಪನಿ ಆವರಣದಲ್ಲಿ ಅವಘಡ: 31 ವಾಹನಗಳು ಭಸ್ಮ
ಜತೆಗೆ ಅವರು ಮಾಜಿ ಎಂ.ಡಿ. ಚಿತ್ರಾ ರಾಮಕೃಷ್ಣ ಅವರಿಗೆ ಸೂಚನೆಗಳನ್ನು ನೀಡಿ, ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಿದ್ದರು ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಈ ಸಂದರ್ಭದಲ್ಲಿ ವಿಶೇಷ ಕೋರ್ಟ್ ನ್ಯಾಯಾಧೀಶ ಸಂಜೀವ್ ಅಗರ್ವಾಲ್ “ಹಿಮಾಲಯದ ಪರ್ವತ ಶಿಖರಗಳಲ್ಲಿ ದೈವಿಕ ಶಕ್ತಿಯುತವಾಗಿ ಕುಳಿತಿದ್ದ ನೀವೇ ಹಿಮಾಲಯದ ಯೋಗಿ.
ನಾಲ್ಕು ವರ್ಷಗಳ ಕಾಲ ತಣ್ಣಗೆ ನಿದ್ದೆ ಮಾಡಿದ್ದ ಸಿಬಿಐ ಏಕಾಏಕಿ ಎದ್ದು ಏಕೆ ಹುಡುಕಾಡುತ್ತಿದೆಯೋ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಸುಬ್ರಮಣಿಯನ್ ಚೈತ್ರಾ ರಾಮಕೃಷ್ಣಳ ಸಲಹೆಗಾರನಾಗಿದ್ದು, ಈಗಾಗಲೇ ಬಂಧಿತರಾಗಿರುವ ಆನಂದ ಸುಬ್ರಮಣಿಯನ್ ಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
12 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿರುವ ಸುಬ್ರಮಣಿಯನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆದಿದ್ದು, ಮಾ.24ರಂದು ತೀರ್ಮಾನ ಪ್ರಕಟಿಸುವುದಾಗಿ ಜಡ್ಜ್ ತಿಳಿಸಿದ್ದಾರೆ.
ಸುಬ್ರಮಣಿಯನ್ ಪರ ವಕೀಲ ಅರ್ಷ್ ದೀಪ್ ಕೋರ್ಟ್ ನಲ್ಲಿ, ಈ ವಂಚನೆ ಪ್ರಕರಣ ನಡೆದಿದ್ದು, 2010 ಮತ್ತು 2014ರ ನಡುವೆ. ಆರೋಪಿ ಸುಬ್ರಮಣಿಯನ್ ಸ್ಟಾಕ್ ಎಕ್ಸ್ ಚೇಂಜ್ ಗೆ 2013ರಲ್ಲಿ ನೇಮಕಗೊಂಡಿದ್ದು, ಸೆಬಿಯ ಎರಡು ಆಂತರಿಕ ವಿಚಾರಣೆಯಲ್ಲೂ ತನ್ನ ಕಕ್ಷಿದಾರನ ವಿರುದ್ಧ ಯಾವುದೇ ಆರೋಪ ಪತ್ತೆಯಾಗಿಲ್ಲ ಎಂದು ವಾದಿಸಿರುವುದಾಗಿ ವರದಿ ತಿಳಿಸಿದೆ.