Advertisement

ಉಗ್ರರ ತಂತ್ರಜ್ಞಾನದ ಮೇಲೆ ನಿಗಾ ಬೇಕು

12:12 AM Jun 25, 2021 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದಲ್ಲಿರುವ ಲಷ್ಕರ್‌-ಎ-ತಯ್ಯಬಾ (ಎಲ್‌ಇಟಿ) ಹಾಗೂ ಜೈಷ್‌-ಎ-ಮೊಹಮ್ಮದ್‌ (ಜೆಇಎಂ) ಸಂಘಟನೆಗಳ ಉಗ್ರರು ಬಳಸುವ ಹೊಸ ತಂತ್ರಜ್ಞಾನಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕೆಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

Advertisement

ತಜಕಿಸ್ಥಾನದ ರಾಜಧಾನಿ ಡ್ಯುಶಾಂಬೆಯಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಉಗ್ರರು ತಮ್ಮ ಭಯೋತ್ಪಾದನೆ ಕೃತ್ಯಗಳಿಗೆ ಡ್ರೋನ್‌ನಂಥ ಅತ್ಯಾಧುನಿಕ ಪರಿಕರಗಳು ಹಾಗೂ ಡಾರ್ಕ್‌ ವೆಬ್‌, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಬ್ಲಾಕ್‌ಚೈನ್‌ನಂಥ ತಂತ್ರ­ಜ್ಞಾನ­ವನ್ನು ಬಳಸಿಕೊಳ್ಳುತ್ತಿದ್ದಾರೆ. ಮತ್ತೂಂದೆಡೆ, ಸಾಮಾಜಿಕ ಜಾಲತಾಣಗಳನ್ನೂ ಉಪಯೋಗಿಸುತ್ತಿದ್ದಾರೆ. ನಾವು (ರಕ್ಷಣ ಸಲಹೆಗಾರರು) ಇಂಥ ಆಧುನಿಕ ಪರಿಕರಗಳು, ತಂತ್ರಜ್ಞಾನಗಳ ಬಗ್ಗೆ ತೀವ್ರ ನಿಗಾ ಇಡಬೇಕಿದೆ ಎಂದರು.

ಉಗ್ರವಾದವು ಯಾವುದೇ ಸ್ವರೂಪದಲ್ಲಿದ್ದರೂ ಅದು ಖಂಡನಾರ್ಹ ಎಂದ ದೋವಲ್‌, ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರರೆಂದು ಘೋಷಿಸಲ್ಪಟ್ಟ ವ್ಯಕ್ತಿಗಳ ವಿರುದ್ಧ ಸಂಬಂಧಪಟ್ಟ ದೇಶಗಳು ಕಠಿನ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next