Advertisement

ಬೇರೆಡೆ ತೆರಳಬೇಕಾದರೆ ಪಾಸ್‌ ಕಡ್ದಾಯ

05:34 PM May 09, 2020 | Naveen |

ಎನ್‌.ಆರ್‌.ಪುರ: ಹಸಿರು ವಲಯದ ಜಿಲ್ಲೆಗಳಿಂದ ಹಸಿರು ವಲಯದ ಜಿಲ್ಲೆಗಳಿಗೆ ಹೋಗಬೇಕಾದರೂ ಪಾಸ್‌ ಕಡ್ಡಾಯ ಎಂದು ತರೀಕೆರೆ ಉಪವಿಭಾಗಾಧಿಕಾರಿ ರೇಣುಕಾಪ್ರಸಾದ್‌ ತಿಳಿಸಿದರು.

Advertisement

ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆದ ಕೋವಿಡ್‌ 19 ನಿಯಂತ್ರಣ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ‌ ‌ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅಂತರ ರಾಜ್ಯಕ್ಕೆ ಹೋಗುವವರು ಸೇವಾ ಸಿಂಧು ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಂತರ ಜಿಲ್ಲೆಗೆ ಹೋಗುವವರು ಸಹ ತಹಶೀಲ್ದಾರ್‌ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಕಾರ್ಮಿಕರಿಗೆ ಅರ್ಜಿ ಭರ್ತಿ ಮಾಡಲು ಸಾಧ್ಯವಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಯೇ ಭರ್ತಿ ಮಾಡಿ ಕೊಡಬೇಕು. ಬಸ್‌ನಲ್ಲಿ ಹೋಗುವ ಕಾರ್ಮಿಕರಿಗೆ ಕಡ್ಡಾಯವಾಗಿ ಮಾಸ್ಕ್ ಕೊಡಬೇಕು. ಆರೋಗ್ಯ ತಪಾಸಣೆ ನಡೆಸಬೇಕು ಎಂದರು.

ಅಂತರ ರಾಜ್ಯಕ್ಕೆ ಹೋಗುವವರು ಸಹ ಸೇವಾ ಸಿಂಧು ಆ್ಯಪ್‌ನಲ್ಲಿ ಎಸ್‌ಪಿ ಕಚೇರಿಗೂ ಅರ್ಜಿ ಸಲ್ಲಿಸಬಹುದು. ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವಿವಾಹಕ್ಕೆ, ಯಾರಾದರೂ ಮರಣಹೊಂದಿದರೆ ಅಥವಾ ತುರ್ತು ಚಿಕಿತ್ಸೆಗೆ ಹೋಗಲು ಸಹ ಪಾಸ್‌ ಅಗತ್ಯ. ಇದನ್ನು ಸಹ ಪೊಲೀಸ್‌ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಪಾಸ್‌ ನೀಡಲಾಗುತ್ತದೆ. ಅಂತರ ಜಿಲ್ಲೆಗೆ ಬೆಳಗ್ಗೆ 7ರಿಂದ ಸಂಜೆ 7ರವರೆಗಿನ ಪಾಸ್‌ನ್ನು ಪೊಲೀಸ್‌ ಇಲಾಖೆಯ ಮೂಲಕ ನೀಡಲಾಗುತ್ತದೆ ಎಂದರು.

ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ್‌ ಯೋಜನೆಯಡಿ ತಲಾ 10ಕೆಜಿ ಅಕ್ಕಿ ಹಾಗೂ ಒಂದು ಕಾರ್ಡ್‌ ಗೆ 1ಕೆಜಿ ತೊಗರಿ ಬೆಳೆ ನೀಡಲಾಗುತ್ತದೆ. ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೂ ಅಕ್ಕಿ ಮತ್ತು ಬೆಳೆ ಪೂರೈಕೆಯಾದ ಕೂಡಲೇ ವಿತರಣೆ ಆರಂಭವಾಗಲಿದೆ ಎಂದರು. ಬೇರೆ ರಾಜ್ಯದಿಂದ ಮತ್ತು ವಿದೇಶದಿಂದ ಬರುವವರಿಗೆ ಕ್ವಾರಂಟೈನ್‌ ಮಾಡಲು ವಿದ್ಯಾರ್ಥಿ ನಿಲಯಗಳನ್ನು ಸಜ್ಜುಗೊಳಿಸಿಕೊಳ್ಳಬೇಕು. ಕ್ವಾರಂಟೈನ್‌ ನಲ್ಲಿ ಆಹಾರವೂ ಸೇರಿದಂತೆ ಸಕಲ ಸೌಲಭ್ಯಗಳನ್ನು ಒದಗಿಸಬೇಕು. ಅಂತರ ರಾಜ್ಯದಿಂದ ಬಂದವರನ್ನು ಚೆಕ್‌
ಪೋಸ್ಟ್‌ನಲ್ಲಿಯೇ ಥರ್ಮಲ್‌ ಸ್ಕ್ಯಾನರ್‌ ಮೂಲಕ ಜ್ವರ ತಪಾಸಣೆ ನಡೆಸಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ಮತ್ತು ಗ್ರಾಮಗಳ ವ್ಯಾಪ್ತಿಯಲ್ಲೂ ಬೇರೆ ಜಿಲ್ಲೆ, ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ ಗೊಳಪಡಿಸಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ವಾರ್ಡ್‌ಗೆ ಒಬ್ಬರಂತೆ ನೋಡಲ್‌ ಅಧಿಕಾರಿಯನ್ನು ನೇಮಿಸಿ ಕ್ವಾರಂಟೈನ್‌ ಇದ್ದವರು ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದರು. ತಹಶೀಲ್ದಾರ್‌ ಪರಮೇಶ್ವರ, ತಾಪಂ ಇಒ ಎಸ್‌.ನಯನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next