Advertisement

ಅನಿವಾಸಿ ಭಾರತೀಯರ ಮದುವೆ: 7 ದಿನದೊಳಗೆ ನೋಂದಣೆ ಕಡ್ಡಾಯ

04:07 PM Jun 14, 2018 | Team Udayavani |

ಹೊಸದಿಲ್ಲಿ : ಭಾರತದಲ್ಲಿ ಮದುವೆಯಾಗುವ ಎಲ್ಲ ಅನಿವಾಸಿ ಭಾರತೀಯರು ತಮ್ಮ ಮದುವೆಯನ್ನು ಏಳು ದಿನಗಳ ಒಳಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆ.

Advertisement

ಮದುವೆಯಾಗಿ ಏಳು ದಿನಗಳ ಒಳಗೆ ನೋಂದಾವಣೆ ಮಾಡಿಕೊಳ್ಳದ ಅನಿವಾಸಿ ಭಾರತೀಯರಿಗೆ ಪಾಸ್‌ ಪೋರ್ಟ್‌ ಮತ್ತು ವೀಸಾ ನೀಡುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಕಳೆದ ವಾರ ಸಚಿವ ಮೇನಕಾ ಗಾಂಧಿ ಅವರು ಅನಿವಾಸಿ ಭಾರತೀಯರು ಭಾರತದಲ್ಲಿ ಮದುವೆಯಾದ 48 ತಾಸುಗಳ ಒಳಗೆ ನೋಂದಾವಣೆ ಮಾಡುವುದು ಕಡ್ಡಾಯ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next