Advertisement
ನರೇಗಾ ಯೋಜನೆ ಆರಂಭವಾದಾಗಿನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೆ ಒಂದೇ ಖಾತೆಯಿಂದ ಕೂಲಿ ಹಣ ಹಾಕಲಾಗುತ್ತಿತ್ತು. ಯಾವುದೇ ವರ್ಗ-ಭೇದ ಇಲ್ಲದೇ ಕೆಲಸ ಮಾಡಿದ ಎಲ್ಲ ಕಾರ್ಮಿಕರ ಖಾತೆಗೂ ಏಕಕಾಲಕ್ಕೆ ಹಣ ಜಮೆಯಾಗುತ್ತಿತ್ತು.
Related Articles
Advertisement
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಕೂಲಿ ಹಣ ನೀಡಲು ವರ್ಗವಾರು ತೆರೆದಿದ್ದ ಮೂರು ಪ್ರತ್ಯೇಕ ಖಾತೆಗಳನ್ನು ನಿಷ್ಕ್ರಿಯಗೊಳಿಸಿ, ಒಂದೇ ಖಾತೆಯಿಂದ ಎಲ್ಲ ಕೂಲಿಕಾರ್ಮಿಕರಿಗೂ ಕೂಲಿ ಹಣ ಜಮೆ ಮಾಡಲು ಸೂಚಿಸಿದೆ.
ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಅಕುಶಲ ಕೂಲಿ ಕಾರ್ಮಿಕರ ಕೂಲಿ ದರವನ್ನು 309ರೂ.ಗಳಿಗೆ ಹೆಚ್ಚಿಸಿದ ಬೆನ್ನಲ್ಲೇ ವೇತನ ಪಾವತಿಯಲ್ಲಾಗುತ್ತಿದ್ದ ವರ್ಗ ತಾರತಮ್ಯ ಸರಿಪಡಿಸಲು ಮುಂದಾಗಿರುವುದು ಕೂಲಿಕಾರ್ಮಿಕರಲ್ಲಿ ಮಂದಹಾಸ ಮೂಡಿಸಿದೆ.
ನಾವು ಎಲ್ಲರೂ ಒಂದೇ ಗುಂಪಿನಲ್ಲಿದ್ದು ಒಂದೇ ಕಾಮಗಾರಿ ಮಾಡಿದರೂ ವೇತನ ಹಾಕುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಎಂಬ ವರ್ಗ ಮಾಡಲಾಗುತ್ತಿತ್ತು. ಇದರಿಂದ ಕಾರ್ಮಿಕರ ಒಂದೇ ಗುಂಪಿನಲ್ಲಿ ಒಬ್ಬರಿಗೆ ಕೂಲಿ ಹಣ ಬಂದರೆ ಇನ್ನೊಬ್ಬರಿಗೆ ಬರುತ್ತಿರಲಿಲ್ಲ. ಈಗ ಎಲ್ಲರಿಗೂ ಒಂದೇ ಖಾತೆಯಿಂದ ಕೂಲಿ ಹಣ ನೀಡುವಂತೆ ಮಾಡಿರುವುದು ಸ್ವಾಗತಾರ್ಹ. –ಸಿದ್ದೇಶ್, ಹುಲಿಕಟ್ಟೆ
ಕಳೆದ ವರ್ಷ ವರ್ಗವಾರು ಪ್ರತ್ಯೇಕವಾಗಿ ಕಾರ್ಮಿಕರಿಗೆ ಕೂಲಿ ಹಣ ನೀಡುವ ವ್ಯವಸ್ಥೆ ತರಲಾಗಿತ್ತು. ಈಗ ಸರ್ಕಾರ ಈ ವ್ಯವಸ್ಥೆ ಯನ್ನು ತೆಗೆದು ಒಂದೇ ಖಾತೆಯಿಂದ ಕೂಲಿ ಹಣ ಜಮೆ ಮಾಡಲು ಕ್ರಮವಹಿಸಿದೆ. –ಡಾ|ಎ.ಚನ್ನಪ್ಪ, ಸಿಇಒ, ಜಿಪಂ- ದಾವಣಗೆರೆ
–ಎಚ್.ಕೆ. ನಟರಾಜ