ಹೀಗೆಂದು ವಿಪಕ್ಷಗಳಿಗೆ ಸವಾಲು ಹಾಕಿದ್ದು ಬಿಜೆಪಿ ಅಧ್ಯಕ್ಷ ಅಮಿತ್ ಶಾ. ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ) ಕುರಿತು ಗದ್ದಲವೆಬ್ಬಿಸುತ್ತಿರುವ ಪ್ರತಿಪಕ್ಷಗಳಿಗೆ ನೇರ ಸವಾಲು ಹಾಕಿರುವ ಬಿಜೆಪಿ ಅಧ್ಯಕ್ಷ, ಈ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.
Advertisement
ಉತ್ತರಪ್ರದೇಶದ ಮುಘಲ್‌ಸರಾಯ್ ಜಂಕ್ಷನ್ ಅನ್ನು ಆರ್‌ಎಸ್‌ಎಸ್ ಸಿದ್ಧಾಂತವಾದಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಎಂದು ಮರುನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅಮಿತ್ ಶಾ ಈ ಮಾತುಗಳನ್ನಾಡಿದ್ದಾರೆ.
Related Articles
ಎನ್‌ಆರ್‌ಸಿ ಎನ್ನುವುದು ಕಾಂಗ್ರೆಸ್‌ನ ಕನಸಿನ ಕೂಸು ಎಂದು ಹೇಳುವ ಮೂಲಕ ಶನಿವಾರ ಉಲ್ಟಾ ಹೊಡೆದಿದ್ದ ಕಾಂಗ್ರೆಸ್, ಎನ್‌ಆರ್‌ಸಿ ಪ್ರಕ್ರಿಯೆಗೆ ಅಡ್ಡಿಪಡಿಸಲು ಬಿಜೆ ಪಿ ಯೇ ಹೊರಟಿತ್ತು ಎಂದು ರವಿವಾರ ಆರೋಪಿಸಿದೆ. 2017ರಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗುತ್ತದೆ ಎಂಬ ನೆಪ ಹೇಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಬಿಜೆಪಿ, ಎನ್‌ಆರ್‌ಸಿ ಅನುಷ್ಠಾನವನ್ನು ವಿಳಂಬ ಗೊಳಿಸಲು ಯತ್ನಿಸಿತ್ತು. ಇಡೀ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಲು ಸುಳ್ಳುಗಳ ಶಾ ಮತ್ತು ಜುಮ್ಲಾಗಳ ಶಹೇನ್‌ಶಾ ಯತ್ನಿಸಿದ್ದರು. ಅಮಿತ್ ಶಾ ಅವರು ಸಂಸತ್‌ನಲ್ಲಿ ಸುಳ್ಳು ಹೇಳುತ್ತಿದ್ದಾರೆ. ಆದರೆ, 2017ರ ನ.30ರಂದು ಇದೇ ವಿಚಾರ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಇತಿಹಾಸ ದಲ್ಲೇ ಮರೆಯಲಾಗದ ಘಟನೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ. ಜತೆಗೆ, ಎನ್‌ಆರ್‌ಸಿಗೆ ಅಡ್ಡಿ ಉಂಟುಮಾಡಿದ ಬಿಜೆಪಿ ಅಸ್ಸಾಂ ಜನತೆಯ ಕ್ಷಮೆ ಕೇಳಬೇಕು ಎಂದೂ ಆಗ್ರಹಿಸಿದ್ದಾರೆ.
Advertisement
ಎನ್‌ಆರ್‌ಸಿ ಕರಡು ಬಿಡುಗಡೆಯಾದ ಬಳಿಕ ಅಸ್ಸಾಂನಲ್ಲಿ ಒಂದೇ ಒಂದು ಹಿಂಸಾಚಾರ ಪ್ರಕರಣವೂ ನಡೆದಿಲ್ಲ. ರಕ್ತಪಾತವಾಗುತ್ತದೆ, ನಾಗ ರಿಕ ಯುದ್ಧ ಶುರುವಾಗುತ್ತದೆ ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆ ಸಿಎಂ ಹುದ್ದೆಗೆ ತಕ್ಕುದಲ್ಲ.ಸರ್ಬಾನಂದ ಸೊನೊವಾಲ್, ಅಸ್ಸಾಂ ಸಿಎಂ