Advertisement

ಎನ್‌ಪಿಎಸ್‌ ನಿಯಮ ಪರಿಷ್ಕರಣೆ

01:28 AM Aug 30, 2021 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಪಿಂಚಣಿ  ಯೋಜನೆ (ಎನ್‌ಪಿಎಸ್‌)ಯ ಹಲವು ನಿಯಮ ಗಳನ್ನು ಪರಿಷ್ಕರಿಸಲಾಗಿದೆ. ಪಿಂಚಣಿ ಯೋಜನೆಗೆ ಸೇರ್ಪಡೆ, ಮುಕ್ತಾಯ ವಯೋಮಿತಿಯನ್ನು ಸಡಿಲಿಸಲಾಗಿದೆ. ಎನ್‌ಪಿಎಸ್‌ಗೆ ಸೇರುವ ಗರಿಷ್ಠ ವಯೋಮಿತಿಯನ್ನು 65 ವರ್ಷಗಳಿಂದ 70 ವರ್ಷ ಗಳಿಗೆ ಏರಿಸಲಾಗಿದೆ.

Advertisement

ಹೊಸ ನಿಯಮದ ಪ್ರಕಾರ ಇನ್ನು 18ರಿಂದ 70 ವರ್ಷದ ವರೆಗಿನವರು ಎನ್‌ಪಿಎಸ್‌ಗೆ ಸೇರಬಹುದಾಗಿದ್ದು, 75 ವರ್ಷದ ತನಕ ಮುಂದುವರಿಯಬಹುದು.

ವಯೋಮಿತಿ ಸಡಿಲಿಕೆ ಮಾಡಿರುವುದರಿಂದ ಎನ್‌ಪಿಎಸ್‌ ಖಾತೆ ಸ್ತಂಭನ ವಾಗಿರುವ ಹಿರಿಯರು ಕೂಡ ಹೊಸ ಖಾತೆ ತೆರೆಯಲು ಅವಕಾಶ ನೀಡಲಾಗಿದೆ. ಯೋಜನೆ ಯನ್ನು ಆಕರ್ಷಕಗೊಳಿಸುವುದಕ್ಕಾಗಿ 65 ವರ್ಷಕ್ಕಿಂತ ಮೇಲ್ಪಟ್ಟ ಚಂದಾದಾರರಿಗೆ ಶೇ. 50ರಷ್ಟನ್ನು ಈಕ್ವಿಟಿ ಯಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next