Advertisement
ನಗರದಲ್ಲಿ ನಡೆಯಲಿರುವ ಜನಗಣತಿ ಹಾಗೂ ಎನ್‌ಪಿಆರ್‌ಗೆ ಸಂಬಂಧಿಸಿದಂತೆ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಗುರುವಾರ ಬಿಬಿಎಂಪಿಯ ಆಯುಕ್ತ ಬಿ. ಎಚ್.ಅನಿಲ್‌ಕುಮಾರ್ ಹಾಗೂ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಸ್.ಬಿ.ವಿಜಯ್ ಕುಮಾರ್, ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದ್ದು, ಮೊದಲನೇ ಹಂತ 2020ರ ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯೆ 45 ದಿನ ನಡೆಯಲಿದೆ. ಇದರಂತೆ ಮನೆಗಳ ಪಟ್ಟಿ ಹಾಗೂ ಮನೆಗಣತಿ ಹಾಗೂ ಎರಡನೇ ಹಂತದ ಜನಗಣತಿ ಏಪ್ರಿಲ್ 15ರಿಂದ 2020ರ ಮೇ 29ರವರೆಗೆ ನಡೆಯಲಿದೆ. 2021ರ ಫೆಬ್ರವರಿ 9ರಿಂದ ಫೆ.28ರವರೆಗೆ ಜನಗಣತಿ ನಡೆಯಲಿದ್ದು, ಹೆಸರು ಸೇರಿಸಲು ಮಾ.1ರಿಂದ 5ರ ವರೆಗೆ ಅವಕಾಶವಿದೆ. ಇದರೊಂದಿಗೆ ಎನ್‌ಪಿಆರ್ ಸಹ ನಡೆಯಲಿದೆ. ಒಟ್ಟಾ ರೆ 2023ರ ಒಳಗಾಗಿ ವರದಿ ನೀಡುವ ಗುರಿ ಹೊಂದಲಾಗಿದೆ ಎಂದರು. ಜನಗಣತಿಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿದೆ. ಲಿಂಗ, ಸಾಮಾಜಿಕ ಮತ್ತು ಸಾಂಸ್ಕೃತಿಕ, ಆರ್ಥಿಕ ಹಾಗೂ ವಲಸೆ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ.
Related Articles
Advertisement
ಅಂಶಗಳು: ಮನೆಗಣತಿಯಲ್ಲಿ ಮನೆ ಯಾವ ರೀತಿ ನಿರ್ಮಾಣವಾಗಿದೆ, ಎಷ್ಟು ಮಹಡಿ ಇವೆ. ಮಾಲೀಕರ ವಿವರ, ಒಂದು ಕಟ್ಟಡದಲ್ಲಿ ಎಷ್ಟು ಮನೆಗಳಿವೆ, ಅವುಗಳಲ್ಲಿ ಎಷ್ಟು ಕೋಣೆಗಳಿವೆ, ಎಷ್ಟು ಸದಸ್ಯರು ವಾಸವಿದ್ದಾರೆ, ಶೌಚಾಲಯ, ಶುದ್ಧ ನೀರಿನ ವ್ಯವಸ್ಥೆ ಪರಿಶೀಲನೆ ಹಾಗೂ ಅಡುಗೆ ಕೋಣೆ, ಫ್ರಿಡ್ಜ್, ಟಿ.ವಿ, ವಾಹನ, ಮೊಬೈಲ್, ಲ್ಯಾಪ್‌ಟಾಪ್, ರೇಡಿಯೋ ಹಾಗೂ ಇಂಟರ್‌ನೆಟ್ ಸೌಕರ್ಯವಿದೆಯೇ ಎಂಬ ಮಾಹಿತಿ ಪಡೆದು ಕೊಳ್ಳಲಾಗುತ್ತದೆ. ಅದೇ ರೀತಿ ಆಹಾರ ಕ್ರಮದ ವಿವರವನ್ನೂ ಪಡೆಯ ಲಾಗುತ್ತದೆ ಮನೆಗಣತಿಯಲ್ಲಿ 34 ಪ್ರಶ್ನೆಗಳಿವೆ. ಸೂಚನೆಗಳನ್ನು ಲಿಖೀತ ರೂಪದಲ್ಲಿ ದಾಖಲಿಸಿಕೊಳ್ಳುವುದಕ್ಕಿಂತ ಗುರುತು ಹಾಕಿಕೊಳ್ಳುವ ಪ್ರಶ್ನೆಗಳ ಪಟ್ಟಿ ತಯಾರಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾಹಿತಿ ಸಂಗ್ರಹ: ಹೆಸರು, ಲಿಂಗ, ಕುಟುಂಬ ಸದಸ್ಯರು-ಮುಖ್ಯಸ್ಥರ ಸಂಬಂಧ, ವಾಸ ಸ್ಥಳದ ವಿವರ, ತಾತ್ಕಾಲಿಕ ಮತ್ತು ಕಾಯಂ ವಿಳಾಸ, ಶೈಕ್ಷಣಿಕ ಪ್ರಗತಿ, ತಂದೆ, ತಾಯಿ ಹೆಸರು ಮತ್ತು ಜನ್ಮ ದಿನಾಂಕ, ಅವರು ಜನಿಸಿದ ಸ್ಥಳ, ಪತಿ ಅಥವಾ ಪತ್ನಿ ಹೆಸರು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಪಾನ್‌ಕಾರ್ಡ್, ವಾಹನ ಚಾಲನಾ ಪರವಾನಗಿ ಮಾಹಿತಿ ಕೇಳಲಾಗುತ್ತದೆ. ಆದರೆ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವುದು ಕಡ್ಡಾಯವಲ್ಲ ಎಂದು ಎಸ್.ಬಿ.ವಿಜಯ್‌ಕುಮಾರ್ ಸ್ಪಷ್ಟಪಡಿಸಿದರು.
ಸಾರ್ವಜನಿಕರು ಖುದ್ದಾಗಿ ವಿವರ ದಾಖಲಿಸಲು ಅವಕಾಶ: ಜನಗಣತಿಯನ್ನು ಕಾಲಮಿಯೊಳಗೆ ಮುಗಿಸಲು ಹಾಗೂ ಸಾರ್ವಜನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಬಾರಿ ಜನಗಣತಿ, ಮನೆಗಣತಿ ಹಾಗೂ ಎನ್‌ಪಿಆರ್‌ಗೆ ಪ್ರತ್ಯೇಕ ಆ್ಯಪ್‌ಗ್ಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದರು. ಕಾಗದ, ಆ್ಯಪ್ ಹಾಗೂ ವೈಯಕ್ತಿಕವಾಗಿ ಸಾರ್ವಜನಿಕರು ತಮ್ಮ ಮಾಹಿತಿ ದಾಖಲಿಸಲು ಅವಕಾಶವಿದ್ದು, ಇದರಿಂದ ಜನಗಣತಿ ಸುಲಭವಾಗಲಿದೆ. ಜನಗಣಿತಿ ಆಧರಿಸಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ರೂಪಿಸಿಕೊಳ್ಳುತ್ತವೆ. ಕಾಗದದ ಮೂಲಕ ಮಾಹಿತಿ ಸಂಗ್ರಹಿಸಿದರೆ ಜನಗಣತಿ ವರದಿ ಸಿದ್ಧಪಡಿಸಲು ವರ್ಷಗಳೇ ಬೇಕು. ಹೀಗಾಗಿ, ಈ ಬಾರಿ ಮೂರು ಪ್ರತ್ಯೇಕ ಆ್ಯಪ್‌ಗ್ಳನ್ನು ಬಿಡುಗಡೆ ಮಾಡಲಾಗಿದೆ ಎಂದರು.