ಮುಂಬೈ: ಮರುಪಾವತಿಯಾಗದ ಸಾಲಗಳ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಹಿಂದೆ ಪ್ರಕಟಿಸಿದ ನಿಯಮಗಳನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದ್ದ ಪರಿಣಾಮ ಆರ್‌ಬಿಐ ಸಂಪೂರ್ಣ ಹೊಸ ನಿಯಮ ಪ್ರಕಟಿಸಿದ್ದು, ಇದರಿಂದಾಗಿ ಎಲ್ಲ ಹಳೆಯ ನಿಯಮಗಳೂ ರದ್ದಾಗಿವೆ. ಈ ಹಿಂದೆ ಪ್ರಕಟಿಸಿದ ನಿಯಮದ ಪ್ರಕಾರ, ಸಾಲ ಮರುಪಾವತಿಯಲ್ಲಿ ಒಂದು ದಿನ ವಿಳಂಬವಾದರೂ ಅದನ್ನು ಮರುಪಾವತಿಯಾಗದ ಸಾಲ ಎಂದು ಪರಿಗಣಿಸಲು ಸೂಚಿಸಲಾಗಿತ್ತು. ಆದರೆ ಹೊಸ ನಿಯಮಗಳ ಪ್ರಕಾರ 30 ದಿನಗಳಿಗೆ ಇದನ್ನು ವಿಸ್ತರಿಸಲಾಗಿದೆ.
ಈ 30 ದಿನಗಳಲ್ಲಿ ಸಾಲ ನೀಡಿದ ಬ್ಯಾಂಕ್‌ಗಳು ಸಾಲ ಮರುಪಾವತಿ ಮಾಡಿಸುವ ವಿಧಾನವನ್ನು ರೂಪಿಸಬೇಕು. ಅಗತ್ಯವಿದ್ದರೆ ದಿವಾಳಿ ಅಥವಾ ವಸೂಲಾತಿ ಕ್ರಮಗಳನ್ನು ಜಾರಿಗೊಳಿಸಲು ಬ್ಯಾಂಕ್‌ಗಳಿಗೆ ಸ್ವಾತಂತ್ರ್ಯವಿರುತ್ತದೆ. ಈ ಹಿಂದೆ 180 ದಿನಗಳೊಳಗೆ ಆರ್‌ಬಿಐಗೆ ಮರುಪಾವತಿಯಾಗದ ಸಾಲದ ವಿವರ ನೀಡಬೇಕು ಎಂಬ ಆದೇಶ ನೀಡಲಾಗಿತ್ತು. ಆದರೆ ಸುಪ್ರೀಂಕೋರ್ಟ್ ಇದನ್ನೂ ತಳ್ಳಿಹಾಕಿತ್ತು.
Advertisement