Advertisement

ದ್ವೇಷದ ಹೇಳಿಕೆಗೆ ಸಿಗಲ್ಲ ವೀಸಾ?

06:00 AM Jul 31, 2018 | Team Udayavani |

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವವರಿಗೆ ಆಘಾತಕಾರಿ ಸುದ್ದಿ! ಈವರೆಗೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ ಖಾಸಗಿ ಕಂಪನಿಗಳು ಅಭ್ಯರ್ಥಿಯ ಸೋಷಿಯಲ್‌ ಮೀಡಿಯಾ ಪ್ರೊಫೈಲ್‌ಗ‌ಳನ್ನು ತಡಕಾಡಿ, ವ್ಯಕ್ತಿಯ ವ್ಯಕ್ತಿತ್ವ ಅಳೆಯುತ್ತಿದ್ದವು. ಆದರೆ ಇದೀಗ ಅಮೆರಿಕ ಸೇರಿ ಹಲವು ದೇಶಗಳ ವಲಸೆ ಮತ್ತು ಗಡಿ ಭದ್ರತಾ ಅಧಿಕಾರಿಗಳು ಕೂಡ ಫೇಸ್‌ಬುಕ್‌ ಪ್ರೊಫೈಲ್‌ ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ಆ ದೇಶದ ನೀತಿಗೆ ವಿರುದ್ಧವಾದ ಹೇಳಿಕೆಗಳನ್ನು ಪೋಸ್ಟ್‌ ಅಥವಾ ಟ್ವೀಟ್‌ ಮಾಡಿದರೆ ವೀಸಾ ನಿರಾಕರಣೆ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಅರ್ಜಿಯಲ್ಲಿನ  ವಿವರಗಳು ಹೋಲಿಕೆ ಯಾಗದಿದ್ದರೆ,  ಅಥವಾ ತೀವ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರೆ, ದ್ವೇಷದ ಹೇಳಿಕೆ ನೀಡಿದರೂ ವೀಸಾ ನಿರಾಕರಿಸುವ ಸಾಧ್ಯತೆಯಿದೆ. ಸಲಿಂಗಕಾಮದ ಪರ ಮಾತನಾಡಿದ್ದ ಅಮೆರಿಕ ಪಾದ್ರಿಗೆ ದಕ್ಷಿಣ ಆಫ್ರಿಕಾ ವೀಸಾ ನಿರಾಕರಿಸಲಾಗಿತ್ತು. ಅಷ್ಟೇ ಅಲ್ಲ, ಅಮೆರಿಕದ ವಲಸೆ ಅಧಿಕಾರಿಗಳು ವೀಸಾ ಅರ್ಜಿದಾರರ ಎಲೆಕ್ಟ್ರಾನಿಕ್‌ ಸಾಧನಗಳ  ಪರಿಶೀಲಿಸುವ ವಿಶೇಷ ಅಧಿಕಾರವನ್ನೂ ಹೊಂದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next