Advertisement

ಪುಲ್ವಾಮ ಹುತಾತ್ಮ ಯೋಧರ ಕುಟುಂಬಕ್ಕೆ ನೀವೂ ನೆರವು ನೀಡಬಹುದು – ಇದನ್ನು ಓದಿ

10:16 AM Feb 15, 2020 | Hari Prasad |

ನವದೆಹಲಿ: ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೀವು ಸಹಾಯವನ್ನು ನೀಡಲು ಬಯಸುವುದಾದರೆ ಅದಕ್ಕೆ ಕೇಂದ್ರ ಗೃಹ ಸಚಿವಾಲಯ ಒಂದು ಅಧಿಕೃತ ಆ್ಯಪ್ ಮೂಲಕ ಅವಕಾಶವನ್ನು ಮಾಡಿಕೊಟ್ಟಿದೆ.

Advertisement

‘ಸಿ.ಆರ್.ಪಿ.ಎಫ್. ವೀರ್ ಪರಿವಾರ್ ಮೊಬೈಲ್’ ಅಪ್ಲಿಕೇಶನ್ ಮೂಲಕ ಯಾವುದೇ ರೀತಿಯ ನೆರವನ್ನು ದೇಶವಾಸಿಗಳು ಪುಲ್ವಾಮ ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ನೀಡಬಹುದಾಗಿದೆ.

ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಲಾದ ಹಣಕಾಸಿನ ನೆರವು ಮತ್ತು ಇತರೇ ರೂಪದ ಸಹಾಯಗಳ ಮಾಹಿತಿಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 2019ರಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಈ ಆ್ಯಪ್ ಅನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಸಿದ್ದರು.

2017ರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ‘ಭಾರತ್ ಕೆ ವೀರ್’ ಎಂಬ ಮೊಬೈಲ್ ಅಪ್ಲಿಕೇಷನ್ ಒಂದನ್ನು ಬಿಡುಗಡೆಗೊಳಿಸಿದ್ದರು ಮತ್ತು ಈ ಆ್ಯಪ್ ಮೂಲಕ ಕೇಂದ್ರ ಅರೆ ಸೈನಿಕ ಪಡೆಯ ಸೇವೆಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೆರವು ನೀಡಲು ದೇಶವಾಸಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next