Advertisement

ತಮಿಳುನಾಡಿನಲ್ಲಿ ಗ್ರಾಮ ಸಚಿವಾಲಯ; ಸ್ಟಾಲಿನ್‌ ಸರ್ಕಾರದ ಹೊಸ ಯೋಜನೆ

09:09 PM Apr 22, 2022 | Team Udayavani |

ಚೆನ್ನೈ: ತಮಿಳುನಾಡಿನ ಪ್ರತಿ ಗ್ರಾಮಗಳಲ್ಲಿ “ಗ್ರಾಮ ಸಚಿವಾಲಯ’ ನಿರ್ಮಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶುಕ್ರವಾರ ಘೋಷಿಸಿದ್ದಾರೆ.

Advertisement

ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ. ಈ ವರ್ಷವೇ 600 ಗ್ರಾಮ ಸಚಿವಾಲಯಗಳ ನಿರ್ಮಾಣವಾಗಲಿದೆ. ಪ್ರತಿಯೊಂದನ್ನೂ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.

ಏನೇನು ಸೌಲಭ್ಯಗಳು? ಸರ್ಕಾರದ ಸೌಲಭ್ಯಗಳನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ” ಗ್ರಾಮ ಸಚಿವಾಲಯ’ಗಳನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಪಂಚಾಯಿತಿ ಅಧ್ಯಕ್ಷರಿಗೆ ಕೊಠಡಿ, ಕಾನ್ಫರೆನ್ಸ್‌ ಹಾಲ್‌, ಗ್ರಾಮ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಕಚೇರಿಗಳು ಇರಲಿವೆ.

ಪ್ರಶಸ್ತಿ:
ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಗ್ರಾಮ ಪಂಚಾಯಿತಿಗಳಿಗೆ “ಉತ್ತಮರ್‌ ಗಾಂಧಿ ಪ್ರಶಸ್ತಿ’ ಕೊಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡಿದ ಒಂದು ಗ್ರಾಮಕ್ಕೆ 10 ಲಕ್ಷ ರೂ. ಪ್ರೋತ್ಸಾಹ ಧನವಾಗಿ ಕೊಡಲಾಗುವುದು ಎಂದರು ಸಿಎಂ ಸ್ಟಾಲಿನ್‌.

ಇದನ್ನೂ ಓದಿ:ಸಂಸದೆ ನವನೀತ್‌ ಕೌರ್‌, ಪತಿ ವಿರುದ್ಧ ಕೇಸು ದಾಖಲು

Advertisement

ಭತ್ಯೆ ಹೆಚ್ಚಳ:
ಸ್ಥಳೀಯ ಪ್ರತಿನಿಧಿಗಳ ಭತ್ಯೆಯನ್ನೂ 5ರಿಂದ 10 ಪಟ್ಟು ಹೆಚ್ಚಳ ಮಾಡಿ ಸ್ಟಾಲಿನ್‌ ಘೋಷಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಭತ್ಯೆಯನ್ನು 5 ಪಟ್ಟು ಹೆಚ್ಚಳ ಮಾಡಲಾಗುವುದು.

ಪ್ರತಿ ವರ್ಷ ನ.1ನ್ನು “ಸ್ಥಳೀಯ ಆಡಳಿತ ದಿನ’ವಾಗಿ ಆಚರಿಸಲಾಗುವುದು. . ಪ್ರತಿ ವರ್ಷ ನಡೆಸಲಾಗುವ ಗ್ರಾಮ ಸಭೆಗಳನ್ನು 4ರಿಂದ 6ಕ್ಕೆ ಏರಿಕೆ ಮಾಡಲಾಗಿದೆ. ಆಂಧ್ರಪ್ರದೇಶದಲ್ಲೂ ಇದೇ ಮಾದರಿಯ ವ್ಯವಸ್ಥೆ ಜಾರಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next