Advertisement

ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡಬೇಕು: ಬಿಜೆಪಿ ಮುಖಂಡ ನೈನಾರ್

10:45 AM Jul 07, 2022 | Team Udayavani |

ಚೆನ್ನೈ: ತಮಿಳುನಾಡಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ ಎಂದು ಡಿಎಂಕೆ ಮುಖಂಡ ಎ.ರಾಜಾ ಹೇಳಿಕೆ ನೀಡಿದ ಬೆನ್ನಲ್ಲೇ, ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡುವ ಬಗ್ಗೆ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ವಿಧಾನಸಭೆಯಲ್ಲಿ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಚಾಮುಂಡಿ ಬೆಟ್ಟದ ಮೂಲಸೌಕರ್ಯಕ್ಕೆ ಸಿದ್ದು ಸರಕಾರ‌ ಕೊಟ್ಟಿದ್ದು ಹುಂಡಿ‌ ದುಡ್ಡಾ?

ಡಿಎಂಕೆ ರಾಜಾ ಅವರ ಭಾಷಣ ಕೇಳಿದ ನಂತರ ನನಗೆ ಈ ಉಪಾಯ ಹೊಳೆದಿರುವುದಾಗಿ ತಿಳಿಸಿರುವ ನೈನಾರ್, ಒಂದು ವೇಳೆ ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡಿದಲ್ಲಿ, ನಮಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತರಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಬಿಜೆಪಿ ಅಧಿಕಾರಕ್ಕೆ ಬಂದರೆ, ಹೆಚ್ಚಿನ ಅನುದಾನ ಲಭ್ಯವಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಾಗೂ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳನ್ನು ಉದ್ದೇಶಿಸಿ ಕೇಂದ್ರ ಮಾಜಿ ಸಚಿವ, ಡಿಎಂಕೆ ಮುಖಂಡ ರಾಜಾ ಅವರು ಸ್ವಾಯತ್ತತೆ ಕುರಿತು ಮಾತನಾಡಿದ್ದು, ನಾನು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಮುಖ್ಯಮಂತ್ರಿ ಅಣ್ಣಾ ಅವರ ಹಾದಿಯಲ್ಲಿ ಸಾಗುತ್ತಾರೆ, ನಮ್ಮನ್ನು ಪೆರಿಯಾರ್ ದಾರಿಗೆ ತಳ್ಳಬೇಡಿ. ನಾವು ಪ್ರತ್ಯೇಕ ದೇಶದ ಬೇಡಿಕೆ ಇಡುತ್ತಿಲ್ಲ. ನಮಗೆ ಸಂಪೂರ್ಣ ಸ್ವಾಯತ್ತತೆ ನೀಡಿ ಎಂದು ತಿಳಿಸಿದ್ದರು.

ತಮಿಳುನಾಡಿನಾದ್ಯಂತ 38 ಜಿಲ್ಲೆಗಳಿದ್ದು 234 ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ. ರಾಜ್ಯವನ್ನು ಇಬ್ಭಾಗ ಮಾಡಿ ಎಂಬ ಬಗ್ಗೆ ರಾಜಕೀಯ ಬೇಡಿಕೆಯಾಗಲಿ ಅಥವಾ ಜನರು ಈ ಬಗ್ಗೆ ಹೋರಾಟವನ್ನು ನಡೆಸುತ್ತಿಲ್ಲ ಎಂದು ರಾಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next