Advertisement
ಬೆಂಗಳೂರು: ನಗರದ ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಯನ್ನು ಸರ್ಕಾರ ಏಕಾಏಕಿ ಕೈಬಿಟ್ಟಿರುವುದನ್ನು ವಿರೋಧಿಸಿ ಬೆಂಗಳೂರು ಉತ್ತರ ಭಾಗದ ನಿವಾಸಿಗಳು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.
Related Articles
Advertisement
ಪರಿಸರವಾದಿಗಳಿಗೆ ಪರಿಸ್ಥಿತಿ ಅರಿವಿಲ್ಲ: ಉತ್ತರ ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಡಾ.ಎಚ್.ಸ್ಯಾಮ್ಯುಯಲ್ ಮಾತನಾಡಿ, ಈ ಭಾಗದ ಸಂಚಾರದಟ್ಟಣೆ ಬಗ್ಗೆ ಅರಿವಿಲ್ಲದ ಕೆಲವರು ಮಾತ್ರ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿ¨ªಾರೆ. ಡೋಂಗಿ ಪರಿಸರವಾದಿಗಳಿಗೆ ಪರಿಸ್ಥಿತಿಯ ಗಂಭೀರತೆ ಗೊತ್ತಿಲ್ಲ.
ಆದರೆ, ಸರ್ಕಾರ ಅವರ ಒತ್ತಡಕ್ಕೆ ಮಣಿದುವಾಸ್ತವವಾಗಿ ತೊಂದರೆ ಅನುಭವಿಸುತ್ತಿರುವ ಜನರನ್ನು ಕಡೆಗಣಿಸಿರುವುದು ಖಂಡನೀಯ ಎಂದರು. ಮರಗಳ ತೆರವು ನೆಪವಾಗಿಟ್ಟುಕೊಂಡು ಅಭಿವೃದ್ಧಿ ಯೋಜನೆಗೆ ಅಡ್ಡಗಾಲು ಹಾಕಲಾಗುತ್ತಿದೆ. ಅಷ್ಟಕ್ಕೂ ಈಗಾಗಲೇ ಇಲ್ಲಿ ಕಡಿಯಲು ಉದ್ದೇಶಿಸಿರುವ ಮರಗಳಿಗೆ ಪರ್ಯಾಯವಾಗಿ ಬೇರೆಡೆ ಹತ್ತು ಸಾವಿರ ಗಿಡಗಳನ್ನು ನೆಡಲಾಗುತ್ತಿದೆ.
ಯೋಜನೆಗಾಗಿ ಮರಗಳನ್ನು ಕಡಿಯುವುದರಿಂದ ಯಾವ ಪರಿಸರಕ್ಕೆ ಯಾವುದೇ ತೊಂದರೆಯೂ ಇಲ್ಲವೆಂದು ವಿಜ್ಞಾನಿಗಳ ಸ್ಪಷ್ಟಪಡಿಸಿದ್ದು, ಕೂಡಲೇ ಈ ಕಾಮಗಾರಿಯನ್ನುಆರಂಭಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ಅಭಿವೃದ್ಧಿ ಮತ್ತು ಅನುಷ್ಠಾನದ ಸಮಿತಿ ಅಧ್ಯಕ್ಷ ಡಿ.ಎಂ. ದೇವರಾಜಪ್ಪ, ಉಪಾಧ್ಯಕ್ಷ ಆರ್. ಬಾಲರಾಜ್, ಕಾವೇರಿ ಬಿಇಡಿ ಕಾಲೇಜು ಪ್ರಾಂಶುಪಾಲ ಡಾ.ರಾಜೇಶ್, ಶಿವರಾಮ್ ಕಾರಂತ್ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ರಾಜೇಶ್ ಮತ್ತಿತರರು ಭಾಗವಹಿಸಿದ್ದರು.
ಮಾತಿನ ಚಕಮಕಿ: ಉಕ್ಕಿನ ಸೇತುವೆ ಯೋಜನೆ ವಿಚಾರದಲ್ಲಿ ಮಾಧ್ಯಮಗಳು ದಿಕ್ಕುತಪ್ಪಿಸುತ್ತಿವೆ ಎಂದು ಹೇಳಿಕೆ ಪ್ರತಿಭಟನಾಕಾರರೊಬ್ಬರು ನೀಡಿದ ಹೇಳಿಕೆ ಮಾಧ್ಯಮ ಪ್ರತಿನಿಧಿಗಳು ಮತ್ತು ಪ್ರತಿಭಟನಾಕಾರರನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ನಂತರ ಪ್ರತಿಭಟನಾಕಾರರು ಕ್ಷಮೆಯಾಚಿಸಿದ್ದರಿಂದಾಗಿ ಪರಿಸ್ಥಿತಿ ತಿಳಿಯಾಯಿತು.