Advertisement

ಈಗ ಕೃತಿ ವಿಮರ್ಶೆ

06:30 AM Aug 18, 2017 | |

ಬಾಲಿವುಡ್‌ನ‌ ಕೆಲವು ಖ್ಯಾತ ಸರ್‌ನೆಮ್‌ಗಳು ಇಲ್ಲದಿದ್ದರೆ ಇಲ್ಲಿ ಗಮನ ಸೆಳೆಯುವುದು ಬಹಳ ಕಷ್ಟ ಎನ್ನುವುದು ಕೃತಿ ಸನೊನ್‌ ಕಂಡುಕೊಂಡಿರುವ ಸತ್ಯ. ಒಂದೋ ಖಾನ್‌, ಕಪೂರ್‌ ಸರ್‌ನೆàಮ್‌ ಇರಬೇಕು, ಇಲ್ಲವೇ ಬಾಲಿವುಡ್‌ಗೆ ಸಂಬಂಧಪಟ್ಟವರಾಗಿರಬೇಕು. ಇವೆರಡೂ ಇಲ್ಲದಿದ್ದರೆ ಕನಿಷ್ಠ ಒಬ್ಬ ಗಾಡ್‌ಫಾದರ್‌ ಆದರೂ ಇರಬೇಕು. ಇದು ಯಾವುದೂ ಇಲ್ಲದಿದ್ದರೆ ಎಷ್ಟೇ ಪ್ರತಿಭೆಯಿದ್ದರೂ ಯಾರೂ ಕರೆದು ಅವಕಾಶ ಕೊಡುವುದಿಲ್ಲ. 

Advertisement

ಇಂಥವರು ತಮ್ಮ ಸರದಿಗಾಗಿ ಬಹಳ ಸಮಯ ಕಾಯಬೇಕಾಗುತ್ತದೆ ಎನ್ನುವುದು ಕೃತಿಯ ಅನುಭವದ ಮಾತು. ಇದಕ್ಕೆ ಕಾರಣವುಂಟು. ಹೀರೊಪಂತಿಯಲ್ಲಿ ಟೈಗರ್‌ಶ್ರಾಫ್ಗೆ ನಾಯಕಿಯಾಗಿ ಬಾಲಿವುಡ್‌ ಅರಂಗೇಟ್ರಂ ಮಾಡಿದ್ದಲ್ಲದೆ ಮೊದಲ ಚಿತ್ರಕ್ಕೆ ಪ್ರಶಸ್ತಿಯನ್ನು ಗಳಿಸಿದರೂ ಕೃತಿಗೆ ಅನಂತರ ಹೇಳಿಕೊಳ್ಳುವಂತಹ ಅವಕಾಶಗಳು ಸಿಗಲಿಲ್ಲ. ಆಗ ಬಾಲಿವುಡ್‌ಗಿಂತ ತೆಲುಗು, ತಮಿಳಿನಂತಹ ಪ್ರಾದೇಶಿಕ ಚಿತ್ರರಂಗವೇ ಲೇಸು ಅನ್ನಿಸುತ್ತಿದೆಯಂತೆ. ಕೃತಿ ಚಿತ್ರರಂಗಕ್ಕೆ ಬಂದಿರುವುದು ತೆಲುಗು ಚಿತ್ರದ ಮೂಲಕ. ಹೀಗಾಗಿ ಈ ಭಾಗದ ಚಿತ್ರರಂಗದ ಮೇಲೆ ಅವಳಿಗೆ ವಿಶೇಷವಾದ ಪ್ರೀತಿ ಇದೆ. ಹೀರೊಪಂತಿಯ ಬಳಿಕ ರಾಬಾr ಎನ್ನುವ ಇನ್ನೊಂದು ಚಿತ್ರದಲ್ಲಿ ನಟಿಸಿದರೂ ಚಿತ್ರ ಹಿಟ್‌ ಆಗಲಿಲ್ಲ. 

ಚಿತ್ರದ ನಾಯಕ ಸುಶಾಂತ ಸಿಂಗ್‌ ರಜಪೂತ್‌ ಜತೆಗೆ ಡೇಟಿಂಗ್‌ ಮಾಡುತ್ತಿದ್ದಾಳೆ ಎಂಬ ಗಾಸಿಪ್‌ ಹರಡಿದ್ದೊಂದೇ ಅವಳಗೆ ಈ ಚಿತ್ರದಿಂದಾಗಿರುವ ಲಾಭ. ಇದೀಗ ಬರೇಲಿ ಕಿ ಬರ್ಫಿ ಎಂಬ ಇನ್ನೊಂದು ಚಿತ್ರದಲ್ಲಿ ಕೃತಿ ಬಹಳ ಭರವಸೆ ಇರಿಸಿಕೊಂಡಿದ್ದಾಳೆ. ಇದಕ್ಕೆ ಹಲವು ಕಾರಣವಿದೆ. ಮೊದಲನೆಯದಾಗಿ ಬರೇಲಿ ಕಿ ಬರ್ಫಿ ಒಂದು ತ್ರಿಕೋನ ಪ್ರೇಮ ಕತೆ. ಕೃತಿ ಇದರಲ್ಲಿ ಸಣ್ಣ ನಗರವೊಂದರ ಗಂಡುಬೀರಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾಳೆ. ಇದೆಲ್ಲ ಅವಳಿಗೆ ಹೊಸ ಅನುಭವವಂತೆ. ಆಯುಷ್ಮಾನ್‌ ಖುರಾನ, ರಾಜ್‌ಕುಮಾರ್‌ ರಾವ್‌ ಅವರಂತಹ ಬಿ ಗ್ರೇಡ್‌ ಹೀರೊಗಳಿರುವ ಸಣ್ಣ ಬಜೆಟ್‌ನ ಚಿತ್ರವಾಗಿದ್ದರೂ ಬರೇಲಿ ಕಿ ಬರ್ಫಿ ಹಿಟ್‌ ಆಗಲಿದೆ ಎಂಬ ವಿಶ್ವಾಸದಲ್ಲಿದ್ದಾಳೆ ಕೃತಿ. 

Advertisement

Udayavani is now on Telegram. Click here to join our channel and stay updated with the latest news.

Next